blank

‘ವಿಜಯವಾಣಿ ಓದಿ ಕಾರು ಗೆಲ್ಲಿ’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

blank

 ಮೈಸೂರು: ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ಯಿಂದ ಓದುಗರಿಗಾಗಿ ಆಯೋಜಿದ್ದ ‘ವಿಜಯವಾಣಿ ಓದಿ ಕಾರು ಗೆಲ್ಲಿ’ ಸ್ಪರ್ಧೆ ವಿಜೇತರಿಗೆ ಮಂಗಳವಾರ ಬಹುಮಾನ ವಿತರಿಸಲಾಯಿತು.
ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ಪರ್ಧೆ ವಿಜೇತರು ಬಹುಮಾನ ಸ್ವೀಕರಿಸಿದರು. ಪ್ರಥಮ ಬಹುಮಾನ ಕಾರನ್ನು ನಂಜನಗೂಡು ತಾಲೂಕು ತಗಡೂರು ಗ್ರಾಮದ ಎನ್.ಅಖಿಲಾ ಪಡೆದುಕೊಂಡರು.
ಎರಡನೇ ಬಹುಮಾನ ಬೈಕು ಸರಗೂರು ನಾಲ್ಕನೇ ವಾರ್ಡ್ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಡಿ.ಗೌರಮ್ಮ ಲಭಿಸಿತು. ಒಟಿಜಿ 30 ಲೀ. ಒವೆನ್ ಅನ್ನು ಶ್ರವಣಬೆಳಗೊಳದ ಪ್ರವಣ್ಯ ವಿ.ಜೈನ್ ಹಾಗೂ ಮೈಸೂರು ಗೋಕುಲಂ ಹಳೆಯ ಅಂಚೆ ಕಚೇರಿ ರಸ್ತೆಯ ಡಾ.ಸಿ.ಜಾಹ್ನವಿ ಪಡೆದುಕೊಂಡರು.
ಮಿಕ್ಸರ್ ಗ್ರೈಂಡರನ್ನು ಮೈಸೂರು ದೇವೇಗೌಡ ವೃತ್ತ ಆಶ್ರಿತ ಬಡಾವಣೆಯ ಬಿ.ಎಲ್.ಜಯಶ್ರೀ, ಮಳವಳ್ಳಿ ತಾಲೂಕು ಹಲಸಹಳ್ಳಿಯ ಎಚ್.ಸಿ.ವಿಜಯಕುಮಾರ್, ಫ್ರಿಡ್ಜ್ ಅನ್ನು ನಂಜನಗೂಡು ತಾಲೂಕು ಕೆಎಚ್‌ಬಿ ಕಾಲನಿ ಥಾಮಸ್ ಬಡಾವಣೆಯ ಎಚ್.ಎಂ.ಸಾರಿಕಾ ಪಡೆದರು. ಚಾಮರಾಜನಗರ ತಾಲೂಕು ಕುಂಡ್ಲೂರು ಗಾಣಿಗರ ಬೀದಿಯ ಸಿ.ಮಧು ಅವರು ಲ್ಯಾಪ್‌ಟಾಪ್ ತಮ್ಮದಾಗಿಸಿಕೊಂಡರು.

ವಿಜಯವಾಣಿಯಿಂದ ಜ್ಞಾನ ವಿಕಾಸದ ಕಾರ್ಯ
ಪತ್ರಿಕೆಗೆ ಶಾಸಕ ಜಿ.ಟಿ.ದೇವೇಗೌಡ ಮೆಚ್ಚುಗೆ
ಮೈಸೂರು: ಜ್ಞಾನದ ಉದಯಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವ ‘ವಿಜಯವಾಣಿ’, ಓದುಗರಿಗಾಗಿಯೇ ಬಹುಮಾನ ನೀಡುತ್ತಿರುವುದು ಎಲ್ಲರೂ ಮೆಚ್ಚುವ ಸಂಗತಿ ಎಂದು ಶಾಸಕ ಜಿ.ಟಿ.ದೇವೇಗೌಡ ಶ್ಲಾಘಿಸಿದರು.
‘ವಿಜಯವಾಣಿ ಓದಿ ಕಾರು ಗೆಲ್ಲಿ’ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಪತ್ರಿಕೆ ಎಂದರೆ ರಾಜಕೀಯ ಸುದ್ದಿಗಳನ್ನು ಮಾತ್ರ ನೀಡುವುದಲ್ಲ. ಓದುಗರಿಗೆ ಬೇಕಾದ ಸಮಗ್ರ ಸುದ್ದಿ, ವೈವಿಧ್ಯತೆಯನ್ನು ನೀಡುವ ಮೂಲಕ ಜ್ಞಾನ ವಿಕಾಸವಾಗಬೇಕು. ಆ ಕಾರ್ಯವನ್ನು ‘ವಿಜಯವಾಣಿ’ ಬಳಗ ಯಶಸ್ವಿಯಾಗಿ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಕೊಂಡು ಓದುವ ಪ್ರವೃತ್ತಿ ಹೆಚ್ಚಾಗಲಿ: ಕೇರಳದಲ್ಲಿ ಪ್ರತಿಯೊಬ್ಬರೂ ಪತ್ರಿಕೆಯನ್ನು ಕೊಂಡು ಓದುತ್ತಾರೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಜನರು ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕು ಎಂದು ಬಯಸಿದ ವಿಆರ್‌ಎಸ್ ಸಮೂಹ ಸಂಸ್ಥೆ ಮಾಲೀಕರಾದ ವಿಜಯ ಸಂಕೇಶ್ವರ, ಅವರ ಪುತ್ರ ಆನಂದ ಸಂಕೇಶ್ವರ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದರು.
ಆರಂಭದಲ್ಲಿ ವಿಜಯಕರ್ನಾಟಕ ಆರಂಭಿಸಿ ಅದನ್ನು ನಂ.1 ಮಾಡಿದ್ದ ಅವರು, ಈಗ ‘ವಿಜಯವಾಣಿ’ ಆರಂಭಿಸಿ ಅದನ್ನೂ ನಂ.1 ಮಾಡುವ ಮೂಲಕ ವಿಜಯವನ್ನೇ ಸಾಧಿಸಿದ್ದಾರೆಂದು ಬಣ್ಣಿಸಿದರು.
ಪ್ರಥಮ ಪ್ರಯೋಗ: ಪತ್ರಿಕೆ ವಾಚಕರಿಗೆ ಬಹುಮಾನಗಳನ್ನು ನೀಡಿ ಓದುವ ಹವ್ಯಾಸ ರೂಢಿಸುವ ಕೆಲಸ ಮಾಡುತ್ತಿರುವುದು ಕನ್ನಡದ ಮಟ್ಟಿಗೆ ‘ವಿಜಯವಾಣಿ’ಯೇ ಪ್ರಥಮವಾಗಿದೆ. ವಿದ್ಯುನ್ಮಾನ, ಡಿಜಿಟಲೀಕರಣದಿಂದ ಇಂದಿನ ಸಮುದಾಯ ಪತ್ರಿಕೆ ಓದುವ ಹವ್ಯಾಸದಿಂದಲೇ ದೂರವಾಗುತ್ತಿದೆ. ಹಾಗಾಗಿ ಓದುವ ಅಭಿರುಚಿ ಬೆಳೆಸುವ ಈ ಪ್ರಯತ್ನ, ಪ್ರಯೋಗಕ್ಕೆ ಇನ್ನಷ್ಟು ಯಶ ಸಿಗಲಿ ಎಂದು ಜಿ.ಟಿ.ದೇವೇಗೌಡ ಹಾರೈಸಿದರು.

ಹಲವರ ಬದುಕನ್ನೂ ರೂಪಿಸಿದೆ
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪತ್ರಿಕೆ ಓದುವುದಕ್ಕಾಗಿ ಮಾತ್ರವಲ್ಲ. ಹಲವರು ಬದುಕನ್ನೂ ರೂಪಿಸಿಕೊಳ್ಳಲು ನೆರವಾಗಿದೆ ಎನ್ನುವುದನ್ನು ‘ವಿಜಯವಾಣಿ’ ಯೇ ಸಾಕ್ಷಿ. ಜನಪರ ಕಾಳಜಿ, ಬದ್ಧತೆಯಿಂದ ಪತ್ರಿಕೆ ಕಟ್ಟಿರುವ ವಿಜಯಸಂಕೇಶ್ವರ ಮತ್ತು ಆನಂದ ಸಂಕೇಶ್ವರ ಅವರು ಓದುಗರಿಗೆ ಸ್ಫೂರ್ತಿ ತುಂಬುವ ಕೆಲಸವನ್ನು ವಿನೂತನವಾಗಿ ಮಾಡಿದ್ದಾರೆ ಎಂದರು.
‘ವಿಜಯವಾಣಿ’ ಮೈಸೂರು ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಸ್ಪರ್ಧೆಯ ರೂಪುರೇಷೆ ವಿವರಿಸಿದರು. ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಕೆ, ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಕೆ.ರಮೇಶ್, ಹೇಮಾ ನಂದೀಶ್, ರಶ್ಮಿ, ವಿಕ್ರಂ ಅಯ್ಯಂಗಾರ್, ಬಾಲಕೃಷ್ಣ, ಜಗದೀಶ್, ಎಸ್.ಡಿ. ಮಹೇಂದ್ರ, ಸವಿತಾ ಘಾಟ್ಕೆ ಇತರರಿದ್ದರು.

ಓದುಗರಿಗೆ ಜಾಗೃತಿ ಮೂಡಿಸುವ ಕೆಲಸ
ಮೈಸೂರು: ಕೋವಿಡ್ ಕಾರಣದಿಂದ ಓದುಗರ ಸಂಖ್ಯೆ ಕಡಿಮೆ ಅಗಿದೆ ಎನ್ನುವ ಭಾವನೆ ಇಲ್ಲವಾಗಿಸಿ ವಾಚಕರಲ್ಲಿ ಜಾಗೃತಿ ಮೂಡಿಸಲು ‘ವಿಜಯವಾಣಿ’ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಿತ್ತು ಎಂದು ‘ವಿಜಯವಾಣಿ’ ಸಂಪಾದಕ ಕೆ.ಎನ್.ಚನ್ನೇಗೌಡ ಹೇಳಿದರು.
ಪತ್ರಿಕೆ ಮುಟ್ಟಿದರೂ ಕೋವಿಡ್ ಬರುತ್ತದೆ ಎನ್ನುವ ಕಾಲದಲ್ಲೂ ಒಂದು ದಿನವೂ ಪತ್ರಿಕೆಯನ್ನು ನಿಲ್ಲಿಸದೆ ಓದುಗರ ಮನೆ ಮನೆಗೆ ವಿಜಯವಾಣಿ ತಲುಪಿಸುವ ಕೆಲಸ ಅಗಿದೆ. ಸಾಮಾಜಿಕ ಜಾಲತಾಣದಿಂದ ಓದುಗರ ಸಂಖ್ಯೆ ಕ್ಷೀಣಿಸಿದೆ ಎನ್ನುವ ಭಾವನೆ ಇದೆ. ಆದರೆ ಓದುಗರನ್ನು ಜಾಗೃತಗೊಳಿಸುವ ಕಾರ್ಯವನ್ನು ‘ವಿಜಯವಾಣಿ’ ಮಾಡಿದೆ ಎಂದು ಹೇಳಿದರು.
ಓದುಗರಿಗಾಗಿಯೇ ವಿಜಯ ಸಂಕೇಶ್ವರ, ಆನಂದ ಸಂಕೇಶ್ವರ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು, ಮೈಸೂರು ಹಾಗೂ ಮಂಗಳೂರಿಗೆ ತಲಾ ಒಂದೊಂದು ಕಾರು ಸೇರಿದಂತೆ 10 ಲಕ್ಷ ರೂ. ಮೌಲ್ಯದ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು. ಇದರೊಂದಿಗೆ ಒಟ್ಟು 470 ಬಹುಮಾನಗಳನ್ನು ಓದುಗರಿಗೆ ನೀಡಲಾಗಿದೆ. ಈ ಕಾರ್ಯಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ ಮತ್ತೆ ಕಾರು ಗೆಲ್ಲುವ ಅವಕಾಶವನ್ನು ನೀಡಿದ್ದು, ಮುಂದಿನ ತಿಂಗಳಿನಿಂದ ಕೂಪನ್ ನೀಡಲಾಗುವುದು ಎಂದು ವಿವರಿಸಿದರು.
ಪ್ರತಿನಿತ್ಯ ಒಂದೊಂದು ಕೂಪನ್‌ನಂತೆ 150 ದಿನ ನೀಡಲಾಗಿತ್ತು. ಓದುಗರು ಅದನ್ನು ನಿಗದಿತ ನಮೂನೆಯಲ್ಲಿ ಅಂಟಿಸಿ ಕಚೇರಿಗೆ ತಲುಪಿಸಿದ್ದರು. ಲಾಟರಿ ಎತ್ತುವ ಮೂಲಕ ವಿಜೇತರ ಆಯ್ಕೆ ನಡೆಸಲಾಗಿದೆ. ಈಗ ಮಹಿಳೆಯರಿಗಾಗಿಯೇ ‘ನಾರಿ ನಿನಗೊಂದು ಸ್ಯಾರಿ’ ಸ್ಪರ್ಧೆಯೂ ಆರಂಭಗೊಂಡಿದೆ. ಪತ್ರಿಕೆಯಲ್ಲಿ ಬಂದಿರುವ ವಿಷಯವನ್ನೇ ಪ್ರಶ್ನೆಯನ್ನಾಗಿ ನೀಡಿ ಅದನ್ನು ಬರೆದು ಕೂಪನ್ ಮೂಲಕ ಕಳುಹಿಸಿದರೆ ವಿಜೇತರಿಗೆ ಸೀರೆ ನೀಡಲಾಗುವುದು. ಇದು ಮಹಿಳಾ ಓದುಗರ ಜ್ಞಾನವೃದ್ಧಿಗೂ ಅವಕಾಶವಾಗಲಿದೆ ಎಂದರು.

ಮಗಳ ಬದುಕು ರೂಪಿಸಿದ ಪತ್ರಿಕೆ
ವೈವಿಧ್ಯಮಯ ಸುದ್ದಿ, ಅಂಕಣಗಳಿಗೆ ಹೆಸರಾದ ‘ವಿಜಯವಾಣಿ’ ದಿನಪತ್ರಿಕೆ ನನ್ನ ಮಗಳ ಬದುಕು ರೂಪಿಸಿದೆ. ಪತ್ರಿಕೆಯಲ್ಲಿ ಬರುತ್ತಿರುವ ಆಯುರ್ವೇದ ಅಂಕಣವನ್ನು ಓದುತ್ತಿದ್ದ ಮಗಳು, ಯೋಗ, ಆಯುರ್ವೇದದ ಕಡೆ ಆಕರ್ಷಿತಳಾಗಿ ವೈದ್ಯಳಾಗಿದ್ದಾಳೆ. ಈಗ ಆಕೆ ಎಂಡಿ ವ್ಯಾಸಂಗ ಮಾಡುತ್ತಿದ್ದಾಳೆ. ನಿತ್ಯ ಪತ್ರಿಕೆ ಓದುವ ಹವ್ಯಾಸ ಇಟ್ಟುಕೊಂಡಿದ್ದಾಳೆ ಎಂದು ರೈಲ್ವೆ ಇಲಾಖೆ ನಿವೃತ್ತ ಅಧಿಕಾರಿ ಚಂದ್ರಶೇಖರ್ ಹೇಳಿದರು.
ಪತ್ರಿಕೆಗೆ ಸಾಮಾಜಿಕ ಜವಾಬ್ದಾರಿಯೂ ಇದೆ ಎನ್ನುವುದಕ್ಕೆ ‘ವಿಜಯವಾಣಿ’ ಸಾಕ್ಷಿ. ಸುದ್ದಿಗಳನ್ನು ನೀಡುವುದಲ್ಲದೇ ಓದುಗರಿಗೆ ಬೇಕಾಗಿದ್ದನ್ನೂ ನೀಡುತ್ತಾ ಬಂದಿದೆ. ಮಗಳೊಂದಿಗೆ ನಾವೂ ಪತ್ರಿಕೆಯನ್ನು ನಿತ್ಯ ಓದುತ್ತಿದ್ದೇವೆ. ಕಾಫಿಯೊಂದಿಗೆ ಬೆಳಗ್ಗೆ ಪತ್ರಿಕೆ ಇರಲೇಬೇಕು ಎನ್ನುವಂತಾಗಿದೆ. ‘ವಿಜಯವಾಣಿ’ ಎಲ್ಲ ವಿಭಾಗದಲ್ಲಿಯೂ ಸುದ್ದಿಗಳನ್ನು ನೀಡುತ್ತಿದ್ದು, ವೈವಿಧ್ಯಮಯವಾಗಿದೆ. ಗುಣಮಟ್ಟದಲ್ಲಿಯೂ ರಾಜಿ ಇಲ್ಲದಂತೆ ನಡೆದುಕೊಂಡು ಬರುತ್ತಿದೆ. ಮಗಳೊಂದಿಗೆ ನಾನು ಕೂಡ ಕಾರು ಗೆಲ್ಲಿ ಸ್ಪರ್ಧೆಯ ಕೂಪನ್‌ಗಳನ್ನು ಅಂಟಿಸಿದ್ದೆ. ಈಗ ಬಹುಮಾನವೂ ಬಂದಿರುವುದು ಸಂತಸ ಎಂದರು.

ಗೆಲ್ಲುತ್ತೇನೆ ಎಂದುಕೊಂಡಿರಲಿಲ್ಲ
ನಾನು ಆರಂಭದಿಂದಲೂ ‘ವಿಜಯವಾಣಿ’ ಓದುತ್ತಿದ್ದೆ. ಕಾರು ಗೆಲ್ಲುತ್ತೇನೆ ಅಂದುಕೊಂಡಿರಲಿಲ್ಲ. ನಿತ್ಯ ಬರುವ ಕೂಪನ್‌ಗಳನ್ನು ಹುಡುಕಿ ಅಂಟಿಸಿ ಕಳುಹಿಸಿದ್ದೆ. ಈಗ ಕಾರು ಬಹುಮಾನ ಬಂದಿರುವುದು ಖುಷಿ ತಂದಿದೆ.
ಎನ್. ಅಖಿಲಾ ಕಾರು ವಿಜೇತೆ

ಮಗನಿಂದ ಬೈಕ್ ಬಂತು
‘ವಿಜಯವಾಣಿ’ಯಲ್ಲಿ ಬರುತ್ತಿದ್ದ ಕೂಪನ್‌ಗಳನ್ನು ನಿತ್ಯ ಕತ್ತರಿಸಿ ಅಂಟಿಸುವ ಕೆಲಸ ಮಾಡಿದ್ದು 6ನೇ ತರಗತಿ ಓದುತ್ತಿರುವ ನನ್ನ ಮಗ. ಕೂಪನ್ ಹುಡುಕುವುದರೊಂದಿಗೆ ಪತ್ರಿಕೆಗಳಲ್ಲಿ ಬರುತ್ತಿದ್ದ ವಿಷಯವನ್ನೂ ಅವನು ಓದುತ್ತಿದ್ದ. ಈಗ ಆತನಿಂದಾಗಿ ನಮಗೆ ಬೈಕ್ ಬಂದಿದೆ. ಇದಕ್ಕಾಗಿ ಪತ್ರಿಕೆ ಬಳಗಕ್ಕೆ ಧನ್ಯವಾದ ಸಲ್ಲಿಸುತ್ತೇನೆ.
ಡಿ.ಗೌರಮ್ಮ ಬೈಕ್ ವಿಜೇತೆ

ವೈವಿಧ್ಯಮಯ ಅಂಕಣಗಳು
‘ವಿಜಯವಾಣಿ’ಯನ್ನು ಆರಂಭದಿಂದಲೂ ನಾನು ಓದುತ್ತಿದ್ದೇನೆ. ವೈವಿಧ್ಯಮಯ ಅಂಕಣಗಳು ನಮಗೆ ಇಷ್ಟವಾಗಿದೆ. ಪುಟಾಣಿ ವಿಜಯ ಓದುತ್ತಿದ್ದ ನನ್ನ ಮಗ, ಅದನ್ನು ನೋಡಿ ಚಿತ್ರ ಬರೆಯುವ ಮೂಲಕ ಶಾಲೆಗಳಲ್ಲಿಯೂ ಬಹುಮಾನ ಪಡೆದಿದ್ದಾನೆ. ಈಗ ನನಗೆ ಮಿಕ್ಸಿ ಬಹುಮಾನವಾಗಿ ಬಂದಿರುವುದು ಸಂತೋಷ ತಂದಿದೆ.
ಬಿ.ಎಲ್.ಜಯಶ್ರೀ
ಮಿಕ್ಸರ್ ಗ್ರೈಂಡರ್ ವಿಜೇತೆ

ಸಮಗ್ರ ಸುದ್ದಿ ಕಣಜ
‘ವಿಜಯವಾಣಿ’ ಸುದ್ದಿ ಪತ್ರಿಕೆ ಅಷ್ಟೇ ಅಲ್ಲ. ಆಧ್ಯಾತ್ಮಿಕ, ಯೋಗ, ಆಯುರ್ವೇದ, ಪುಟಾಣಿ ವಿಜಯ, ಮಹಿಳಾ ವಿಜಯ, ಉದ್ಯೋಗ ಮಾಹಿತಿ, ಪದಬಂಧ, ಕ್ರೀಡೆ, ಧಾರ್ಮಿಕ ಅಂಕಣವನ್ನು ಒಳಗೊಂಡ ಸಮಗ್ರ ಕಣಜವಾಗಿದೆ. ಇದನ್ನು ಓದಿ ಎಷ್ಟೋ ವಿದ್ಯಾರ್ಥಿಗಳು ತಮ್ಮ ಬದುಕಿನ ದಾರಿಯನ್ನು ಕಂಡುಕೊಂಡಿದ್ದಾರೆ. ಈಗ ಓದುಗರಿಗಾಗಿ ಬಹುಮಾನ ನೀಡುತ್ತಿರುವುದು ಹೆಮ್ಮೆಯ ಸಂಗತಿ.
ವೀರೇಂದ್ರಕುಮಾರ್ ಜೈನ್
ವಿಜಯವಾಣಿ ಪತ್ರಿಕೆ ಓದುಗ, ಶ್ರವಣಬೆಳಗೊಳ

Share This Article

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt

salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…

ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts

gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ.  ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…

ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream

ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…