ಹುಬ್ಬಳ್ಳಿ : ಇಂದಿರಾಸ್ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ಚೆಸ್ ಪಂದ್ಯಾವಳಿ ಆಯೋಜಿಸಲಾಗಿತ್ತು.
ಚೆಸ್ ಪಂದ್ಯಾವಳಿಯ ಎಲ್ಕೆಜಿಯಿಂದ 2ನೇ ತರಗತಿವರೆಗಿನ ಬಾಲಕರ ವಿಭಾಗದಲ್ಲಿ ಆದೀಶ ಪಾಟೀಲ, ಆದಿತ್ಯಾ ಕಲ್ಲೊಳ್ಳಿ, ಅರ್ಹದ್ ಆಣೇಕರ, ಬಾಲಕಿಯರ ವಿಭಾಗದಲ್ಲಿ ಅನ್ವಿ ಶೆಟ್ಟಿ, ಜಿಯಾಂಶಿ ಖೋನಾ, ಅನಿಕಾ ರೆಡ್ಡಿ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
3 ರಿಂದ 5ನೇ ತರಗತಿಯ ಬಾಲಕರ ವಿಭಾಗದಲ್ಲಿ ವೀರಾಜ ಕಟ್ಟಿಮನಿ, ಸಮೃದ್ಧ ಎಸ್.ಎಚ್., ಸಮ್ವೇದ್ ಎಸ್.ಎಚ್., ಬಾಲಕಿಯರ ವಿಭಾಗದಲ್ಲಿ ಮಿಶಿಕಾ ಸಿಂಗಾನಿಯಾ, ರ್ಸÌ ಅಣ್ಣಿಗೇರಿ, ಆರೋಹಿ ಹವಳದ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡರು.
6 ರಿಂದ 9ನೇ ತರಗತಿಯ ಬಾಲಕರ ವಿಭಾಗದಲ್ಲಿ ಕ್ಷಿತೀಜ ಮಾಕಾಪುರ, ಜಯರಾಮ ಭಟ್, ಸಮರ್ಥ ಮಹೇಶಪ್ರಸಾದ ಹಾಗೂ ಬಾಲಕಿಯರ ವಿಭಾಗದಲ್ಲಿ ಸಿಮ್ರನ್ ನದಾಫ, ಶ್ರೀಯಾ ಆಮಿನ್, ಲಾಸ್ಯ ಶೆಟ್ಟಿ, 10 ರಿಂದ 12ನೇ ತರಗತಿಯ ಬಾಲಕರ ವಿಭಾಗದಲ್ಲಿ ಪ್ರೇಮ ಹಕ್ಕಿ, ಮಾನವ ಮುನವಳ್ಳಿ, ಸುಹಾಸ ದಲ್ವಾನಿ, ಬಾಲಕಿಯರ ವಿಭಾಗದಲ್ಲಿ ಶಿವಾನಿ ಮೇಗೇರಿ, ಪ್ರತಿಭಾ ಚೋಪ್ರಾ, ಸಂಜನಾ ಉಪ್ರೆ ಅವರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.
ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರಿಗೆ 70ಕ್ಕೂ ಹೆಚ್ಚು ಬಹುಮಾನ ವಿತರಿಸಲಾಯಿತು. ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ನವಲಗುಂದದ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಶೇಷ ಬಹುಮಾನ ನೀಡಲಾಯಿತು.