ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಸೋಮವಾರಪೇಟೆ: ರೋಟರಿ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್, ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಚನ್ನಬಸಪ್ಪ ಸಭಾಂಗಣದಲ್ಲಿ ಇತ್ತೀಚೆಗೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕೆ.ಆರ್.ಹರ್ಷಿತಾ ಮತ್ತು ಪಿ.ಆರ್.ಸೂರಜ್ ಕುಮಾರ್ ಪ್ರಥಮ, ಕೊಡ್ಲಿಪೇಟೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಚ್.ಎ.ಡೀಲಾಕ್ಷ, ಸಿ.ಆರ್.ಕಿಶೋರ್ ದ್ವಿತೀಯ ಸ್ಥಾನ ಪಡೆದರು.

ಟಿಕ್ ಟ್ಯಾಕ್ ಟಾಯ್ ಸ್ಪರ್ಧೆಯಲ್ಲಿ ಅಂಕನಳ್ಳಿ ಸರ್ಕಾರಿ ಪ್ರೌಢಶಾಲೆಯ ಎ.ಜೆ.ದೀಕ್ಷಿತ್ ಪ್ರಥಮ, ಆಲೂರು ಸಿದ್ದಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಎಸ್.ಡಿ.ಸುನಯ್‌ಕುಮಾರ್ ದ್ವಿತೀಯ ಸ್ಥಾನ ಪಡೆದರು.
ಮೈನಸ್ ಮತ್ತು ಮೈನಸ್ ಸ್ಪರ್ಧೆಯಲ್ಲಿ ಗೌಡಳ್ಳಿ ಪ್ರೌಢಶಾಲೆಯ ಎಚ್.ಎಂ.ವಿನೋದ್ ಪ್ರಥಮ, ಸೋಮವಾರಪೇಟೆ ಎಸ್‌ಜೆಎಂ ಬಾಲಿಕಾ ಪ್ರೌಢಶಾಲೆಯ ಎಚ್.ಜಿ.ಅನುಶ್ರೀ ದ್ವಿತೀಯ ಸ್ಥಾನ ಪಡೆದರು.
ಅಳಿಗುಳಿ ಮನೆ ಸ್ಪರ್ಧೆಯಲ್ಲಿ ಅಂಕನಳ್ಳಿ ಪ್ರೌಢಶಾಲೆಯ ರೂಪೇಶ್ ಪ್ರಥಮ, ಐಗೂರು ಸರ್ಕಾರಿ ಪ್ರೌಢಶಾಲೆಯ ನವಮಿ ದ್ವಿತೀಯ ಸ್ಥಾನ ಪಡೆದರು.

ಚೌಕಾಬಾರ ಸ್ಪರ್ಧೆಯಲ್ಲಿ ಕೊಡ್ಲಿಪೇಟೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಡೀಲಾಕ್ಷ ಪ್ರಥಮ, ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ಪ್ರೀತಮ್ ದ್ವಿತೀಯ ಸ್ಥಾನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಹಿಲ್ಸ್‌ನ ಅಧ್ಯಕ್ಷ ಡಿ.ಪಿ.ರಮೇಶ್, ರೋಟರಿ ವಿಜ್ಞಾನ ಪ್ರಯೋಗಾಲಯ ವಾಹಿನಿ ಸಂಚಾಲಕ ಬಿ.ಎಸ್.ಸದಾನಂದ, ಸೋಮವಾರಪೇಟೆ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಉಪ ಪ್ರಾಂಶುಪಾಲ ಎಚ್.ಬಿ.ತಳವಾರ್, ಕಾರ್ಯಕ್ರಮದ ಸಂಯೋಜಕ ಸಿ.ಮಂಜುನಾಥ್, ಕಾರ್ಯದರ್ಶಿ ಕೆ.ಸಿ.ಲೋಕೇಶ್ ಬಹುಮಾನ ವಿತರಿಸಿದರು.

 

Leave a Reply

Your email address will not be published. Required fields are marked *