ಉಪ್ಪಿ- ರಚಿತಾ ರಾಮ್‌ ರೊಮ್ಯಾನ್ಸ್‌ ನೋಡಿ ಪ್ರಿಯಾಂಕ ಉಪೇಂದ್ರರಿಗೆ ಮುನಿಸು!

ಬೆಂಗಳೂರು: ಈಗಾಗಲೇ ಚಿತ್ರದ ಟ್ರೈಲರ್‌ನಲ್ಲಿರುವ ಹಸಿಬಿಸಿ ದೃಶ್ಯಗಳಿಂದಲೇ ಭಾರಿ ಸುದ್ದಿಯಾಗಿರುವ ನಟ ಉಪೇಂದ್ರ ಮತ್ತು ನಟಿ ರಚಿತಾ ರಾಮ್‌ ನಟನೆಯ ಐ ಲವ್‌ ಯೂ ಸಿನಿಮಾ ಇನ್ನೇನು ತೆರೆ ಮೇಲೆ ಅಪ್ಪಳಿಸಲು ಸಿದ್ಧವಾಗಿರುವ ಬೆನ್ನಲ್ಲೇ ಉಪೇಂದ್ರ ಜತೆಗೆ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ರಚಿತಾ ರಾಮ್‌ ವಿರುದ್ಧ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ಕಿಡಿಕಾರಿದ್ದಾರೆ.

ಆರ್​.ಚಂದ್ರು ನಿರ್ದೇಶನದ ಐಲವ್​ಯೂ ಚಿತ್ರದ ಬಗ್ಗೆ ಮಾತನಾಡಿ ಮಾಯವಾದೆ ಹಾಡಿನಲ್ಲಿ ರಚಿತಾ ರಾಮ್​ ಸಖತ್‌ ಬೋಲ್ಡ್‌ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಈ ಹಾಡನ್ನು ನೋಡಿ ರಚಿತಾ ರಾಮ್​ ವಿರುದ್ಧ ಪ್ರಿಯಾಂಕ ಗರಂ ಆಗಿದ್ದಾರೆ ಎನ್ನಲಾಗಿದೆ. ಐ ಲವ್​ ಯೂ ಸಿನಿಮಾ ಹಾಡಿನ ದೃಶ್ಯದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

ರಚಿತಾ ಮತ್ತು ಉಪ್ಪೇಂದ್ರ ದೃಶ್ಯಗಳು ಕೆಟ್ಟ ಭಾವನೆ ಮೂಡಿಸುತ್ತಿದೆ. ಪ್ರತಿ ಸಂದರ್ಶನದಲ್ಲೂ ರಚಿತಾ, ಉಪೇಂದ್ರ ಹೆಸರು ತರುತ್ತಿದ್ದಾಳೆ. ಮೊದಲು ಚಿತ್ರದಲ್ಲಿ ಹೇಗೆ ನಟಿಸಿದ್ದಾರೆ ಎಂದು ಹೇಳಿಕೊಳ್ಳಲಿ. ಅದನ್ನ ಬಿಟ್ಟು ಪದೇಪದೆ ಉಪ್ಪೇಂದ್ರ ಹೆಸರು ಹೇಳುವುದು ಯಾಕೆ? ಸಿನೆಮಾ ಕಥೆ ಕೇಳಿದಾಗ ಒಂದು ಕೌಟುಂಬಿಕ ಕಥಾವಸ್ತುವಾಗಿತ್ತು. ಟ್ರೆಲರ್​ನಲ್ಲಿ ಹಾಡು ನೋಡುವವರೆಗೂ ಸಾಂಗ್ ಬಗ್ಗೆ ಗೊತ್ತಿರಲಿಲ್ಲ. ಚಿತ್ರದ ನಿರ್ದೇಶಕ ಚಂದ್ರು ಮತ್ತು ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್. ಆದರೆ ರಚಿತಾ ರಾಮ್​ ಹಾಡು ಉಪೇಂದ್ರ ನಿರ್ದೇಶಕರಾಗಿದ್ದಾರೆ ಎನ್ನುತ್ತಿದ್ದಾರೆ ಎಂದು ನಟಿ ಪ್ರಿಯಾಂಕ ಉಪೇಂದ್ರ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಹಲವರು ರಚಿತಾ ರಾಮ್ ಬೋಲ್ಡ್ ಪಾತ್ರದಲ್ಲಿ ಅಭಿನಯಿಸಿದ್ದಕ್ಕೆ ಗರಂ ಆಗಿದ್ದು, ರಚಿತಾ ರಾಮ್ ಸಂದರ್ಶನವೊಂದರಲ್ಲಿ ಈ ಹಾಡಿನ ಶೂಟಿಂಗ್ ಮಾಡಿದ್ದು ಉಪೇಂದ್ರ ಎಂದು ಹೇಳಿದ್ದರಂತೆ. ಇದು ಉಪ್ಪಿ ಪತ್ನಿ ಪ್ರಿಯಾಂಕಾ ಉಪೇಂದ್ರರ ಸಿಟ್ಟಿಗೆ ಕಾರಣವಾಗಿದೆ. (ದಿಗ್ವಿಜಯ ನ್ಯೂಸ್)

One Reply to “ಉಪ್ಪಿ- ರಚಿತಾ ರಾಮ್‌ ರೊಮ್ಯಾನ್ಸ್‌ ನೋಡಿ ಪ್ರಿಯಾಂಕ ಉಪೇಂದ್ರರಿಗೆ ಮುನಿಸು!”

  1. ಚಲನಚಿತ್ರವೆಂದರೆ ಹಾಗೇ ತಾನೆ? ಹಣ ಮಾಡಲು ಇಂತಹ ದೃಶ್ಯಗಳನ್ನು ಸೇರಿಸುತ್ತಾರೆ. ಹಣಕ್ಕಾಗಿಯೇ ನಟೀಮಣಿಗಳೂ ಬಟ್ಟೆಬಿಚ್ಚುತ್ತಾರೆ. ಪ್ರೇಕ್ಷಕರೂ ಕೂಡ ಇಂತಹ ದೃಶ್ಯಗಳನ್ನು ನೋಡಲೆಂದೇ ಮುಗಿಬೀಳುತ್ತಾರೆ.

Leave a Reply

Your email address will not be published. Required fields are marked *