ಲಾಕ್‌ಡೌನ್‌ನಿಂದ ಸೆಲೆಬ್ರಿಟಿಗಳೆಲ್ಲಾ ಮನೆಯಲ್ಲಿ ಲಾಕ್‌ಡೌನ್ ಆಗಿದ್ದಾರೆ. ಇನ್ನು ಮಕ್ಕಳಿಗೂ ರಜೆ ಇರುವುದರಿಂದ, ಅವರನ್ನೂ ಸಂಭಾವಳಿಸಬೇಕಿದೆ. ತಮ್ಮ ಮಕ್ಕಳಿಗೆ ಆಟ-ಪಾಠ ಹೇಳಿಕೊಡುವುದರಲ್ಲಿ ಹಲವು ಸೆಲೆಬ್ರಿಟಿಗಳು ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಪ್ರಿಯಾಂಕಾ ಉಪೇಂದ್ರ ತಮ್ಮ ಮಗಳಿಗೆ ಅಡುಗೆಯ ಪಾಠ ಮಾಡುತ್ತಿದ್ದಾರೆ.
ಹೌದು, ಪ್ರಿಯಾಂಕಾ ಅವರ ಮಗಳು ಐಶ್ವರ್ಯ ಇದೀಗ ಒಂಬತ್ತನೇ ಕ್ಲಾಸಿಗೆ ಬಂದಿದ್ದಾಳೆ. ಈಗಾಗಲೇ ಆನ್‌ಲೈನ್ ಕ್ಲಾಸ್ ಶುರುವಾಗಿದೆಯಂತೆ. ಅದರ ಜತೆಗೆ ಮಗಳಿಗೆ ಮನೆಕೆಲಸ ಹೇಳಿಕೊಡುತ್ತಿದ್ದಾರಂತೆ ಪ್ರಿಯಾಂಕಾ. ಇತ್ತೀಚೆಗೆ ಮಗಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದ ಪ್ರಿಯಾಂಕಾ, ಅವಳಿಗೆ ಅಡುಗೆ ಪಾಠ ಮಾಡಿದ್ದಾರೆ.
ಪಾಠ ಎನ್ನುವುದಕ್ಕಿಂತ ಇಬ್ಬರು ಮಕ್ಕಳಿಗೂ ಒಂದೊಂದು ಟಾಸ್ಕ್ ಕೊಡುತ್ತಿದ್ದಾರಂತೆ ಪ್ರಿಯಾಂಕಾ. ಪಾತ್ರೆ ತೊಳೆಯುವುದು, ಗಾರ್ಡನಿಂಗ್ ಮಾಡುವುದು, ಅಡುಗೆ ಮಾಡುವುದು … ಹೀಗೆ ಇಬ್ಬರಿಗೂ ಒಂದೊಂದು ಟಾಸ್ಕ್ ಕೊಟ್ಟು, ಇಬ್ಬರನ್ನೂ ಎಂಗೇಜ್ ಮಾಡಿದ್ದಾರಂತೆ ಪ್ರಿಯಾಂಕಾ.
ಮಲಗಿದ್ರೆ ಸಾವು; ಕೂತಿದ್ರೆ ರೋಗ; ನಡೀತಿದ್ರೆ ಜೀವನ … ಮುಖ್ಯಮಂತ್ರಿಗಳಿಗೆ ಉಪೇಂದ್ರ ಕೊಟ್ಟ ಎರಡು ಸಲಹೆಗಳು