PHOTOS: ಕಾನ್​ ಚಲನಚಿತ್ರೋತ್ಸವದಲ್ಲಿ ಅತ್ಯಂತ ರೋಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ

ಕಾನ್​ (ಫ್ರಾನ್ಸ್​): ಕಾನ್​ ಚಲನಚಿತ್ರೋತ್ಸವ ಆರಂಭದಲ್ಲಿ ವಿಚಿತ್ರವಾದ ಕೇಶ ವಿನ್ಯಾಸದಿಂದ ಟ್ರೋಲ್​ಗೆ ಒಳಗಾಗಿದ್ದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಈಗ ಅದೇ ಕಾನ್​ನಲ್ಲಿ ಪತಿಯೊಂದಿಗೆ ಅತ್ಯಂತ ರೋಮ್ಯಾಂಟಿಕ್​ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಹೃದಯಬಡಿತವನ್ನು ಹೆಚ್ಚಿಸಿದ್ದಾರೆ. ಜತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್​ ಮೇಲೆ ಲೈಕ್​ಗಳನ್ನು ಪಡೆದುಕೊಂಡು, ಟ್ರೋಲ್​ನಿಂದಾಗಿ ಕಳೆದುಕೊಂಡಿದ್ದ ಮಾನಸಿಕ ನೆಮ್ಮದಿಯನ್ನು ಮರಳಿಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕಾನ್​ನ ಕೆಂಪುಹಾಸಿನ ಮೇಲೆ ಪತಿ ನಿಕ್​ ಜೋನಾಸ್​ ಜತೆ ಅತ್ಯಂತ ರೋಮ್ಯಾಂಟಿಕ್​ ಆಗಿ ಕಾಣಿಸಿಕೊಂಡಿರುವ ಚಿತ್ರಗಳನ್ನು ಪಿಗ್ಗಿ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದಾಗ ಎಂತ ಅರಸಿಕನ ಮನಸ್ಸಿನಲ್ಲೂ ರಸಿಕತನ ಮೂಡಿದರೆ ಅಚ್ಚರಿಯಾಗದು.

ಇದಕ್ಕೂ ಮುನ್ನ ಪ್ರಿಯಾಂಕಾ ಚೋಪ್ರಾ ದಂಪತಿ ಶನಿವಾರ ಶ್ವೇತ ಬಣ್ಣದ ಬಟ್ಟೆಗಳನ್ನು ಧರಿಸಿ ವಿಶ್ವ ಚಲನಚಿತ್ರ ರಂಗದವರ ಕಣ್ಣನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಜಾರ್ಜಸ್​ ಹೊಬೆಯಿಕಾ ವಿನ್ಯಾಸಗೊಳಿಸಿದ್ದ ಬಟ್ಟೆಗಳಲ್ಲಿ ಪ್ರಿಯಾಂಕಾ ಚೋಪ್ರಾ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು. ನಿಕ್​ ಕೂಡ ಬಿಳಿಯ ಬಟ್ಟೆ ಧರಿಸಿ, ಕಪ್ಪು ಬಣ್ಣದ ಶೂಗಳನ್ನು ಧರಿಸಿ ಚೆಂದದಲ್ಲಿ ಪತ್ನಿಯೊಂದಿಗೆ ಪೈಪೋಟಿಗಿಳಿದಿದ್ದರು. (ಏಜೆನ್ಸೀಸ್​)