ಹೆಣ್ಣುಮಕ್ಕಳೇ ಸ್ಟ್ರಾಂಗು ಗುರೂ ; ಹಾರರ್​ “ಕಬಂಧ’ದಲ್ಲಿ ಪ್ರಿಯಾಂಕಾ ಮಳಲಿ, ಛಾಯಾಶ್ರೀ ಮಿಂಚು

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ, ಬರಹಗಾರ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸತ್ಯನಾಥ್​ ಆ್ಯಕ್ಷನ್​-ಕಟ್​ ಹೇಳುತ್ತಿರುವ ಸಿನಿಮಾ “ಕಬಂಧ’. ರಾಮಾಯಣದಲ್ಲಿ ರಾಮನಿಂದ ಸಂಹಾರಗೊಂಡ ರಾಕ್ಷಸನ ಹೆಸರೂ ಕೂಡ “ಕಬಂಧ’. ಆದರೆ, ಇದು ಪೌರಾಣಿಕ ಚಿತ್ರವಲ್ಲ, ಬದಲಾಗಿ 90ರ ದಶಕದಲ್ಲಿ ಕೃಷಿ ಕ್ಷೇತ್ರದಲ್ಲಿ ನಡೆದ ನೈಜ ಟನೆಯ ಸುತ್ತ ಸುತ್ತುವ ಕಥೆ. ಈ ಹಾರರ್​- ಥ್ರಿಲ್ಲರ್​ನಲ್ಲಿ ಪ್ರಸಾದ್​ ವಸಿಷ್ಠ, ಕಿಶೋರ್​ ಮುಖ್ಯ ಭೂಮಿಕಯಲ್ಲಿ ನಟಿಸಿದ್ದು, ಅವರಿಗೆ ಪ್ರಿಯಾಂಕಾ ಮಳಲಿ, ಛಾಯಾಶ್ರೀ ಜೋಡಿಯಾಗಿದ್ದಾರೆ. ಚಿತ್ರದ ಬಗ್ಗೆ ಪ್ರಿಯಾಂಕಾ ಮತ್ತು ಛಾಯಾಶ್ರೀ “ವಿಜಯವಾಣಿ‘ ಜತೆ ಅನುಭವ ಹಂಚಿಕೊಂಡಿದ್ದಾರೆ.

ಹೆಣ್ಣುಮಕ್ಕಳೇ ಸ್ಟ್ರಾಂಗು ಗುರೂ ; ಹಾರರ್​ "ಕಬಂಧ'ದಲ್ಲಿ ಪ್ರಿಯಾಂಕಾ ಮಳಲಿ, ಛಾಯಾಶ್ರೀ ಮಿಂಚು

ಹಳ್ಳಿ ಹುಡುಗಿ ಪ್ರಿಯಾಂಕಾ
ಮೊದಲಿನಿಂದಲು ನಟನೆಯಲ್ಲಿ ಆಸಕ್ತಿ ಹೊಂದಿದ್ದ ಪ್ರಿಯಾಂಕಾ ಮಳಲಿ ಐಟಿ ಕೆಲಸ ಬಿಟ್ಟು “ಕಂಡುಹಿಡಿಯಿರಿ ನೋಡೋಣ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದರು. “ಕಬಂಧ’ದಲ್ಲಿ ಪ್ರಸಾದ್​ ವಸಿಷ್ಠ ಜೋಡಿಯಾಗಿರುವ ಪ್ರಿಯಾಂಕಾ, ಹಳ್ಳಿಯ ಬೋಲ್ಡ್​ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಪಾತ್ರದ ಬಗ್ಗೆ, “ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸುವ ಪಾತ್ರ ನನ್ನದು. ತುಮಕೂರು ಮತ್ತು ಮೂಡಿಗೆರೆಯ ಫಾರ್ಮ್​ಹೌಸ್​ನಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಿದೆವು. ಒಮ್ಮೆ ಶೂಟಿಂಗ್​ ಸಮಯದಲ್ಲಿ ಕತ್ತಲಿನಲ್ಲಿ ಚಪ್ಪಲಿ ಧರಿಸದೇ ಓಡಬೇಕಿತ್ತು. ಆಗ ಹಳ್ಳದಲ್ಲಿ ಬಿದ್ದು, ಗಾಯ ಮಾಡಿಕೊಂಡಿದ್ದೆ’ ಎಂದು ಅನುಭವ ಹಂಚಿಕೊಳ್ಳುತ್ತಾರೆ ಪ್ರಿಯಾಂಕಾ. “ಕಬಂಧ’ ಬಳಿಕ ಅವರು “ಎಲ್ಟು ಮುತ್ತ’ ಎಂಬ ಕೊಡಗಿನ ಹಿಂದುಳಿದ ವರ್ಗದ ಕುರಿತ ಸಿನಿಮಾದಲ್ಲಿ ನಟಿಸುತ್ತಿದ್ದು, “ಚಿತ್ರದ ಶೂಟಿಂಗ್​ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸ ನಡೀತಿದೆ. ಅಕ್ಟೋಬರ್​ನಲ್ಲಿ ಚಿತ್ರ ಬಿಡುಗಡೆಯಾಗಲಿದೆ’ ಎಂದು ಹೇಳಿಕೊಳ್ಳುತ್ತಾರೆ.

ಹೆಣ್ಣುಮಕ್ಕಳೇ ಸ್ಟ್ರಾಂಗು ಗುರೂ ; ಹಾರರ್​ "ಕಬಂಧ'ದಲ್ಲಿ ಪ್ರಿಯಾಂಕಾ ಮಳಲಿ, ಛಾಯಾಶ್ರೀ ಮಿಂಚು

ರಂಗಭೂಮಿ ಪ್ರತಿಭೆ ಛಾಯಾಶ್ರೀ
“ಪೊಲಿಟಿಕ್ಸ್​ ಕಲ್ಯಾಣ’, “ಕೌಶಲ್ಯ ಸುಪ್ರಜಾ ರಾಮ’ ಖ್ಯಾತಿಯ ಮೈಸೂರು ಮೂಲದ ನಟಿ ಛಾಯಾಶ್ರೀ ಉಮೇಶ್​ “ಕಬಂಧ’ದಲ್ಲಿ ಕಿಶೋರ್​ಗೆ ಜೋಡಿಯಾಗಿದ್ದಾರೆ. “ನನಗೆ ಚಿಕ್ಕನಿಂದಲೂ ರಂಗಭೂಮಿ ಆಸಕ್ತಿ ಇತ್ತು. ಅದಕ್ಕಾಗಿ ಮಂಡ್ಯ ರಮೇಶ್​ ಅವರ ನಟನಾದಲ್ಲಿ ಕೆಲ ವರ್ಷ ತರಬೇತಿ ಪಡೆದು ಬಳಿಕ ಚಿತ್ರರಂಗಕ್ಕೆ ಆಗಮಿಸಿದೆ. 2019ರ “ಯಜಮಾನ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಬಳಿಕ ಕಿರುತೆರೆಯಲ್ಲಿ ಅವಕಾಶ ದೊರೆತವು. “ರಾಜಿ’ ಧಾರಾವಾಹಿಯಲ್ಲಿ ನೆಗೆಟಿವ್​ ರೋಲ್​ ನಿರ್ವಹಿಸಿದೆ. “ದಾಸ ಪುರಂದರ’ದಲ್ಲಿ ಮಣಿ ಮೇಖಲೆಯಾಗಿ ಪಾತ್ರಕ್ಕೆ ಸಿಕ್ಕ ಮೆಚ್ಚುಗೆಯಿಂದ “ಕೌಶಲ್ಯ ಸುಪ್ರಜಾ ರಾಮ’ ಹಾಗೂ “ಪೊಲಿಟಿಕ್ಸ್​ ಕಲ್ಯಾಣ’ ಚಿತ್ರಗಳಲ್ಲಿ ಅವಕಾಶ ದೊರೆಯಿತು. ಇದೀಗ “ಕಬಂಧ’ದಲ್ಲಿ ಗೃಹಿಣಿ ಪಾತ್ರ ನಿರ್ವಹಿಸುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ.

ಹೆಣ್ಣುಮಕ್ಕಳೇ ಸ್ಟ್ರಾಂಗು ಗುರೂ ; ಹಾರರ್​ "ಕಬಂಧ'ದಲ್ಲಿ ಪ್ರಿಯಾಂಕಾ ಮಳಲಿ, ಛಾಯಾಶ್ರೀ ಮಿಂಚು

ಕಿಶೋರ್​ ಜತೆ ನಟಿಸಿದ ಅನುಭವದ ಕುರಿತು ಛಾಯಾಶ್ರೀ, “ಕಿಶೋರ್​ಗೆ ಜೋಡಿಯಾಗಿ ಅಭಿನಯಿಸುತ್ತೇನೆ ಅಂತ ಗೊತ್ತಾಗಿ ಖುಷಿಯ ಜತೆ ಭಯವೂ ಆಗಿತ್ತು. ಅವರು ಬಹಳ ಸರಳ. ಅವರೇ ನನ್ನನ್ನು ಮಾತನಾಡಿಸಿ ಪರಿಚಯಿಸಿಕೊಂಡರು. ಅವರೊಂದಿಗೆ ತೆರೆ ಹಂಚಿಕೊಂಡ ಮೇಲೆ ಅವರ ಬಗ್ಗೆ ಇದ್ದ ಗೌರವ, ಅಭಿಮಾನ ದುಪ್ಪಟ್ಟಾಗಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ. “ಕಬಂಧ’ ಬಳಿಕ ದುನಿಯಾ ವಿಜಯ್​ ನಟನೆಯ 49ನೇ ಚಿತ್ರದಲ್ಲೂ ಛಾಯಾಶ್ರೀ ನಟಿಸುತ್ತಿದ್ದಾರೆ.

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…