ಈ ಬಾರಿ ಪ್ರಿಯಾಂಕಾ ಚೋಪ್ರಾ ಟ್ರೋಲ್​ ಆಗಲು ಕಾರಣ ಸಿಗರೇಟ್​: ಇವರದ್ದು ಬರೀ ಬೂಟಾಟಿಕೆ ಎಂದ ನೆಟ್ಟಿಗರು

ಪ್ರಿಯಾಂಕಾ ಚೋಪ್ರಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದಾರೆ. ಹಾಗೇ ಟ್ರೋಲ್​ಗೂ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದಿದ್ದ ಮೆಟ್​ಗಲಾ ಕಾರ್ಯಕ್ರಮದಲ್ಲಿ ವಿಭಿನ್ನ ಉಡುಗೆಯಿಂದ ಟ್ರೋಲ್​ ಆಗಿದ್ದ ಪ್ರಿಯಾಂಕಾ ಚೋಪ್ರಾ ಈ ಬಾರಿ ಸಿಗರೇಟ್​ ಕಾರಣದಿಂದ ನೆಟ್ಟಿಗರಿಂದ ಕಾಲೆಳೆಸಿಕೊಳ್ಳುತ್ತಿದ್ದಾರೆ.

ಜು.18ಕ್ಕೆ ಪ್ರಿಯಾಂಕಾ ಚೋಪ್ರಾ ಹುಟ್ಟಿದಹಬ್ಬ ಇತ್ತು. ತಮ್ಮ ಪತಿ, ಕುಟುಂಬದೊಂದಿಗೆ ಬರ್ತ್​ ಡೇ ಸೆಲೆಬ್ರೇಶನ್​ ಮಾಡಿಕೊಂಡಿರುವ ಪ್ರಿಯಾಂಕಾ ಸದ್ಯ ಮಿಯಾಮಿಯಲ್ಲಿ ಇದ್ದಾರೆ. ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬ ಆಚರಣೆಯ, ಪಾರ್ಟಿಯ ಒಂದಷ್ಟು ಫೋಟೋಗಳು ವೈರಲ್​ ಆಗಿದ್ದು ಅದರಲ್ಲಿ ಒಂದು ಫೋಟೋ ಮಾತ್ರ ನೆಟ್ಟಿಗರಿಂದ ಸಿಕ್ಕಾಪಟ್ಟೆ ಟ್ರೋಲ್​ಗೆ ಒಳಗಾಗಿದೆ.

ಈ ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿ ನಿಕ್​ ಜೋನಾಸ್​ ಪಕ್ಕದಲ್ಲಿ ಕುಳಿತಿದ್ದು ಸ್ಮೋಕ್​ ಮಾಡುತ್ತಿದ್ದಾರೆ. ಹಾಗೇ ನಿಕ್​ ಮತ್ತು ಪ್ರಿಯಾಂಕಾ ತಾಯಿ ಮಧು ಚೋಪ್ರಾ ಕೈಯಲ್ಲಿ ಕೂಡ ಸಿಗಾರ್​ ಇದೆ. ಆದರೆ ಪ್ರಿಯಾಂಕಾ ಮಾತ್ರ ಟ್ರೋಲ್​ ಆಗಿದ್ಯಾಕೆ ಎಂಬುದಕ್ಕೆ ಇಲ್ಲಿದೆ ನೋಡಿ ಕಾರಣ.

ಕಳೆದ ವರ್ಷ ಪ್ರಿಯಾಂಕಾ ತಮಗೆ ಅಸ್ತಮಾ ಇರುವುದಾಗಿ ಹೇಳಿಕೊಂಡಿದ್ದರು. ತಮ್ಮ ಐದನೇ ವಯಸ್ಸಿನಲ್ಲಿಯೇ ಅಸ್ತಮಾ ಇರುವುದು ಗೊತ್ತಾಯಿತು. ತುಂಬ ಜನಕ್ಕೆ ಈ ವಿಚಾರ ಗೊತ್ತಿಲ್ಲ. ಆದರೆ ಅಸ್ತಮಾವನ್ನು ನಿಯಂತ್ರಿಸಲು ಪ್ರಯತ್ನಪಟ್ಟೆ. ಈಗಲೂ ಕೂಡ ಕಾಳಜಿ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಅಲ್ಲದೆ, ದೀಪಾವಳಿಯಂದು ಪಟಾಕಿ ಹೊಡೆಯಬೇಡಿ. ಇದರಿಂದ ವಾಯುಮಾಲಿನ್ಯವಾಗುತ್ತದೆ. ನನ್ನಂತೆ ಅಸ್ತಮಾ ಕಾಯಿಲೆ ಬರುತ್ತದೆ ಎಂದು ಕೂಡ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಹಾಗೆ ಹಿಂದೊಮ್ಮೆ ಮಾಡಿದ ಟ್ವೀಟ್​ನಲ್ಲಿ ಸ್ಮೋಕಿಂಗ್​ ಭಯಾನಕ ಮತ್ತು ಜಿಗುಪ್ಸೆ ತರುವಂಥದ್ದು ಎಂದಿದ್ದರು.

ಈಗ ನೆಟ್ಟಿಗರು ಪ್ರಿಯಾಂಕಾ ಅವರ ಹಳೇ ಟ್ವೀಟ್​, ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿಗಳ ಫೋಟೋಗಳನ್ನು ಪೋಸ್ಟ್​ ಮಾಡುವ ಮೂಲಕ ಪ್ರಿಯಾಂಕಾ ಕಾಲೆಳೆಯುತ್ತಿದ್ದಾರೆ. ಈ ಬೂಟಾಟಿಕೆ ಏಕೆ ಪ್ರಿಯಾಂಕಾ ಅವರೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ ದೀಪಾವಳಿಯಂದು ಅಸ್ತಮಾಕ್ಕೆ ತುತ್ತಾಗಿದ್ದು ಈಗ ಅದನ್ನು ಗುಣಪಡಿಸಿಕೊಳ್ಳಲು ಔಷಧ ತೆಗೆದುಕೊಳ್ಳುತ್ತಿದ್ದಾರೆ ಎಂದು ಓರ್ವ ಟ್ವಿಟಿಗರು ಕಾಮೆಂಟ್​ ಮಾಡಿದ್ದಾರೆ.
ಇಲ್ಲಿದೆ ನೋಡಿ ಪ್ರಿಯಾಂಕಾ ಅವರ ಸ್ಮೋಕಿಂಗ್​ ಫೋಟೋಕ್ಕೆ ಬಂದ ಟ್ವೀಟ್​, ಕಾಮೆಂಟ್​ಗಳು:

Leave a Reply

Your email address will not be published. Required fields are marked *