ವಯನಾಡು: ಇಂದು ನಡೆದ ರ್ಯಾಲಿಯಲ್ಲಿ ಭಾಗಿಯಾಗಿ ಮಾತನಾಡಿದ ಉಪ ಚುನಾವಣೆಯ ವಯನಾಡು (Wayanad) ಕಾಂಗ್ರೆಸ್ ಅಭ್ಯರ್ಥಿ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ, ವಯನಾಡಿಗೆ ಪಝಸ್ಸಿ ರಾಜ, ಕುಂಕನ್ನಂತಹ ನಾಯಕರ ದೊಡ್ಡ ಇತಿಹಾಸವಿದೆ. ಪ್ರಧಾನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾರ್ವಜನಿಕರ ಕಲ್ಯಾಣಕ್ಕಿಂತ ದೊಡ್ಡ ಉದ್ಯಮಿಗಳ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಹೇಳುತ ತೀವ್ರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸುಪ್ತ ಪ್ರತಿಭೆ ಬೆಳಕಿಗೆ ಬರಲು ಪ್ರೋತ್ಸಾಹ : ಶಿಕ್ಷಣ ಸಂಯೋಜಕ ಹರಿಪ್ರಸಾದ್ ನಿರೀಕ್ಷೆ
ಇದು ಅವರ ಉದ್ದೇಶವಲ್ಲ
ಜನರನ್ನು ವಿಭಜಿಸಿ, ದ್ವೇಷವನ್ನು ಹರಡುವ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಹತ್ತಿಕ್ಕುವ ಮೂಲಕ ಅಧಿಕಾರದಲ್ಲಿ ಉಳಿಯುವುದು ಮೋದಿ ಸರ್ಕಾರದ ಮುಖ್ಯ ಗುರಿಯಾಗಿದೆ. ಅವರ (ಮೋದಿ) ಸರ್ಕಾರವು ತಮ್ಮ ದೊಡ್ಡ ಉದ್ಯಮಿ ಸ್ನೇಹಿತರಿಗಾಗಿ ಮಾತ್ರ ಕೆಲಸ ಮಾಡುತ್ತದೆ. ನಿಮಗೆ ಉತ್ತಮ ಜೀವನವನ್ನು ನೀಡುವುದು, ಉದ್ಯೋಗಗಳನ್ನು ಸೃಷ್ಟಿಸುವುದು ಅಥವಾ ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸುವುದು ಅವರ ಉದ್ದೇಶವಲ್ಲ. ಸಾಧ್ಯವಿರುವ ಯಾವುದೇ ವಿಧಾನದಿಂದ ಅಧಿಕಾರದಲ್ಲಿ ಉಳಿಯುವುದು ಅತ್ಯಂತ ಸರಳವಾಗಿದೆ ಎಂದರು.
ಬಲವಾದ ಇತಿಹಾಸವನ್ನು ಹೊಂದಿದ್ದೀರಿ
ವಯನಾಡು ದಬ್ಬಾಳಿಕೆಯ ವಿರುದ್ಧ ಹೋರಾಡಿದ ಇತಿಹಾಸ ಹೊಂದಿದೆ. ಇದು ಧರ್ಮದ ಹೊರತಾಗಿ ಜನರು ಒಟ್ಟಿಗೆ ವಾಸಿಸುವ ಭೂಮಿ. ಪಳಸ್ಸಿ ರಾಜ, ತಲಕ್ಕಲ್ ಚಂತು ಮತ್ತು ಎಡಚೆನ ಕುಂಕನ್ ಅವರಂತಹ ನಾಯಕರೊಂದಿಗೆ ನೀವು ಬಲವಾದ ಇತಿಹಾಸವನ್ನು ಹೊಂದಿದ್ದೀರಿ, ಅವರು ನ್ಯಾಯಕ್ಕಾಗಿ, ಸಮಾನತೆಗಾಗಿ ಮತ್ತು ದಮನಿತರ ವಿರುದ್ಧ ಹೋರಾಡಿದವರು ಎಂದು ಹೇಳಿದರು.
ರಾಹುಲ್ ಸತ್ಯಕ್ಕಾಗಿ ಹೋರಾಟ
ರಾಹುಲ್ ಗಾಂಧಿ ಅವರು ತೀವ್ರ ಸವಾಲುಗಳನ್ನು ಎದುರಿಸುತ್ತಿರುವಾಗ ಮತ್ತು ಅವರ ಪ್ರತಿಷ್ಠೆಗೆ ಕಳಂಕ ತರುವ ಅಭಿಯಾನದಲ್ಲಿ ಬಿಜೆಪಿಯಿಂದ ಪ್ರತಿದಿನ ಗುರಿಯಾಗುತ್ತಿರುವಾಗ, ರಾಹುಲ್ ಸತ್ಯಕ್ಕಾಗಿ ಹೋರಾಡುತ್ತಿದ್ದಾರೆಂದು ನನ್ನ ಸಹೋದರ, ಸಹೋದರಿಯರೇ ನೀವು ಗುರುತಿಸಿದ್ದೀರಿ, ಅರಿತಿದ್ದೀರಿ. ನೀವು ಅವನೊಂದಿಗೆ ನಿಂತಿದ್ದೀರಿ, ಬೆಂಬಲಿಸಿದ್ದೀರಿ ಮತ್ತು ಹೋರಾಡಲು ಧೈರ್ಯವನ್ನು ತುಂಬಿದ್ದೀರಿ ಎಂದು ವಯನಾಡು ಜನತೆಯನ್ನು ಕೊಂಡಾಡಿದರು,(ಏಜೆನ್ಸೀಸ್).
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol