ನವದೆಹಲಿ: ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶದ ಹಲವಡೆ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.
ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಸಂತ್ರಸ್ತರ ಪರವಾಗಿ ನಿಂತಿದೆ. ಜನರ ನೆರವಿಗೆ ನಾವು ಇದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಸಂತ್ರಸ್ಥರ ನೆರವಿಗೆ ನಿಲ್ಲಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ಟಿಟ್ಟರ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಅವರು ತಮ್ಮ ಅಧಿಕೃತ ಹಾಗೂ ಪರಿಶೀಲಿಸಿದ ಟ್ವಿಟ್ಟರ್ ಖಾತೆಯಲ್ಲಿ 2 ಫೋಟೋಗಳನ್ನು ಪ್ರಕಟಿಸಿದ್ದಾರೆ. ಈ ಫೋಟೋಗಳು ಬಿಹಾರ, ಅಸ್ಸಾಂ ಹಾಗೂ ಉತ್ತರ ಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳ ಚಿತ್ರಣ ಎಂದಿರುವ ಅವರು, ತಾವು ಇದಕ್ಕೆ ಸಹಾಯ ಮಾಡುವುದಾಗಿ ಬರೆದುಕೊಂಡಿದ್ದಾರೆ.
https://twitter.com/priyankagandhi/status/1285106780880568325
ಇವರು ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿರುವ ಫೋಟೋದಲ್ಲಿ ಪ್ರವಾಹದಿಂದ ಮನೆಗಳು ಮುಳುಗಿರುವುದು ಇವೆ. ಆದರೆ ಈ ಫೋಟೋಗಳು ಅಸ್ಸಾಂ, ಬಿಹಾರ ಹಾಗೂ ಯುಪಿಯಲ್ಲಿ ಇದೀಗ ಸಂಭವಿಸಿರುವ ಪ್ರವಾಹದ ಫೋಟೋಗಳು ಅಲ್ಲ, ಬದಲಾಗಿ ಯಾವಾಗಲೋ, ಎಲ್ಲಿಯೋ ನಡೆದಿರುವ ಪ್ರವಾಹದ ಫೋಟೋಗಳಾಗಿವೆ.
ಈ ಹಿನ್ನೆಲೆಯಲ್ಲಿ ಇವರೀಗ ಟ್ರೋಲ್ ಆಗುತ್ತಿದ್ದಾರೆ. ಸಹಾಯಹಸ್ತ ಚಾಚುವುದಾಗಿ ಹೇಳುತ್ತಿರುವ ಪ್ರಿಯಾಂಕಾ ಅವರು, ಯಾವ ಪ್ರವಾಹಪೀಡಿತರಿಗೆ ನೆರವಾಗುತ್ತಿದ್ದಾರೆ ಎಂದು ಟ್ರೋಲಿಗರು ಕೇಳುತ್ತಿದ್ದಾರೆ.