VIDEO|ಚುನಾವಣೆ ಪ್ರಚಾರದ ವೇಳೆ ಹಾವಾಡಿಗನ ಕಷ್ಟ ಸುಖ ಕೇಳಿ ಹಾವಿನ ಬುಟ್ಟಿಗೆ ಕೈ ಹಾಕಿದ ಪ್ರಿಯಾಂಕ!

ದೆಹಲಿ: ಲೋಕಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಉತ್ತರ ಪ್ರದೇಶ ಪೂರ್ವ ಭಾಗದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರು ಗುರುವಾರ ರಾಯ್​​​​ಬರೇಲಿಯಲ್ಲಿ ಹಾವಾಡಿಗರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಕೇಳಿದ್ದಾರೆ. ಈ ವೇಳೆ ಹಾವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಉತ್ತರಪ್ರದೇಶ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಣ್ಣ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಯ್​ಬರೇಲಿಯಲ್ಲಿ ಸ್ಪರ್ಧಿಸಿರುವ ತಾಯಿ ಸೋನಿಯಾ ಗಾಂಧಿ ಹಾಗೂ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ಪ್ರಿಯಾಂಕ ತೊಡಗಿಸಿಕೊಂಡಿದ್ದಾರೆ. (ಏಜನ್ಸೀಸ್​)

Leave a Reply

Your email address will not be published. Required fields are marked *