More

    3 ದಿನದಲ್ಲಿ 10 ಜಾಹೀರಾತು

    ಜಾಹೀರಾತು ಕ್ಷೇತ್ರದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರದ್ದು ದೊಡ್ಡ ಹೆಸರು. ದೊಡ್ಡ ದೊಡ್ಡ ಬ್ರ್ಯಾಂಡ್​ಗಳಿಗೆ, ಉತ್ಪನ್ನಗಳಿಗೆ ದೀಪಿಕಾನೇ ಬೇಕು. ಎಷ್ಟೇ ಕೋಟಿ ಆದರೂ ಪರವಾಗಿಲ ್ಲ ಅಂತ ಅವರನ್ನು ರಾಯಭಾರಿಯನ್ನಾಗಿಸಿಕೊಳ್ಳುವ ಹಲವು ಬ್ರ್ಯಾಂಡ್​ಗಳಿವೆ. ಆದರೆ, ಕಳೆದ ಆರು ತಿಂಗಳಿಂದ ಲಾಕ್​ಡೌನ್ ಹಿನ್ನೆಲೆಯಲ್ಲಿ ಬ್ರ್ಯಾಂಡ್​ಗಳಿಗೆ ದೀಪಿಕಾ ಸಹಿ ಹಾಕಿರಲಿಲ್ಲ. ಅವುಗಳ ಜಾಹೀರಾತು ಶೂಟಿಂಗ್​ನಲ್ಲಿಯೂ ಪಾಲ್ಗೊಂಡಿರಲಿಲ್ಲ. ಇದೀಗ ಮೂರೇ ದಿನಗಳ ಅವಧಿಯಲ್ಲಿ ಬರೋಬ್ಬರಿ 10ಕ್ಕೂ ಅಧಿಕ ಜಾಹೀರಾತುಗಳಲ್ಲಿ ದೀಪಿಕಾ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.

    ಇನ್ನೇನು ಶಕುನ್ ಬಾತ್ರಾ ನಿರ್ದೇಶನದ ಸಿನಿಮಾದಲ್ಲಿ ದೀಪಿಕಾ ತೊಡಗಿಸಿಕೊಳ್ಳಲಿದ್ದಾರೆ. ಆ ಚಿತ್ರದ ಶೂಟಿಂಗ್ ಸಲುವಾಗಿ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಹಾಗಾಗಿ ಆ ಚಿತ್ರದ ಶೂಟಿಂಗ್​ಗೂ ಮುನ್ನ ಈ ಎಲ್ಲ ಜಾಹೀರಾತು ಕೆಲಸಗಳನ್ನು ದೀಪಿಕಾ ಮುಗಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೂ ದೀಪಿಕಾ ಅವರ ಹಳೆಯ ಜಾಹೀರಾತುಗಳನ್ನು ನೋಡಿ, ಹೊಸ ಜಾಹೀರಾತುಗಳಿಗಾಗಿ ಹಾತೊರೆ ಯುತ್ತಿದ್ದವರಿಗೆ ಸದ್ಯದಲ್ಲೇ ದೀಪಿಕಾ ಬ್ಯಾಕ್ ಟು ಬ್ಯಾಕ್ ಎಂಟ್ರಿ ಕೊಡಲಿದ್ದಾರೆ. -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts