ಪ್ರಿಯಾಂಕ ಚೋಪ್ರಾ ಸೋದರ ಸಿದ್ಧಾರ್ಥ್‌ ಚೋಪ್ರಾ ವಿವಾಹ ನಿಂತಿದ್ದಕ್ಕೆ ಕೊನೆಗೂ ಸಿಕ್ಕಿತು ಕಾರಣ…

ನವದೆಹಲಿ: ಜಾಗತಿಕ ಐಕಾನ್‌ ಆಗಿರುವ ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಅವರು ತಮ್ಮ ಸೋದರ ಸಿದ್ಧಾರ್ಥ್‌ ಚೋಪ್ರಾರ ವಿವಾಹಕ್ಕೆಂದು ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದರು. ಬಳಿಕ ವಿವಾಹ ಮುಂದೂಡಿಕೆಯಾದ ಕಾರಣ ತಮ್ಮ ಊರಿಗೆ ಮರಳಿದ್ದರು.

ಸಿದ್ಧಾರ್ಥ್‌ರ ಭಾವಿ ಪತ್ನಿ ಇಶಿತಾ ಕುಮಾರ್‌ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಮದುವೆ ಮುಂದೂಡಿಕೆಯಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇದೀಗ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಭಾವಿ ದಂಪತಿ ನಡುವಿನ ಭಿನ್ನಾಭಿಪ್ರಾಯವೇ ವಿವಾಹ ಮುರಿದುಬೀಳಲು ಕಾರಣ ಎಂದು ಹೇಳಲಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಇಶಿತಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ರೆಸ್ಟೊರೆಂಟ್‌ನಲ್ಲಿರುವ ಫೋಟೊವೊಂದನ್ನು ಶೇರ್‌ ಮಾಡಿ, ಸುಂದರ ಅಂತ್ಯಕ್ಕೆ ವಿದಾಯ ಹೇಳುವುದರೊಂದಿಗೆ ಹೊಸ ಆರಂಭಕ್ಕೆ ಚಿಯರ್ಸ್‌ ಹೇಳಿ ಎಂದು ಬರೆದುಕೊಂಡಿದ್ದಾರೆ. ಅವರ ತಾಯಿ ನಿಧಿ ಕುಮಾರ್‌ ಕೂಡ, ಹಳೆ ಪುಸ್ತಕವನ್ನು ಮುಚ್ಚಿ ಮತ್ತು ಬರೆಯಿರಿ ಎಂದಿದ್ದಾರೆ. ನಾವು ನಿನ್ನ ಜತೆಗಿದ್ದೇವೆ. ಬ್ರಹ್ಮಾಂಡದ ವಿಸ್ತಾರವನ್ನು ಅನುಭವಿಸು ಮತ್ತು ನೀನೊಂದು ಹುಟ್ಟಿದ ತಾರೆಯಾಗು ಎಂದು ಅವರ ತಂದೆ ಹಾರೈಸಿದ್ದಾರೆ.

ಇದರಿಂದಾಗಿ ಎಲ್ಲೆಡೆ ವಿವಾಹ ಮುಂದಕ್ಕೆ ಹೋಗಿಲ್ಲ. ಬದಲಾಗಿ ನಿಂತುಹೋಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಫೆಬ್ರವರಿಯಲ್ಲಿ ಅಣ್ಣನ ರೋಖಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಿಯಾಂಕ ಚೋಪ್ರಾ ಅವರು, ಶೀಘ್ರದಲ್ಲೇ ಒಂದಾಗಲಿರುವ ಜೋಡಿ ಎಂದು ಹಾರೈಸಿದ್ದರು.  (ಏಜೆನ್ಸೀಸ್)