ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಲು ವಿರುದ್ಧ ಮಾಜಿ ವಿಶ್ವಸುಂದರಿ ಪಿಗ್ಗಿ ಕಿಡಿಕಾರಿದ್ದೇಕೆ?

ಮುಂಬೈ: ಮುಸ್ಲಿಂ ಪವಿತ್ರ ಹಬ್ಬ ರಂಜಾನ್​ ದಿನದಂದು ವಿಶ್ವದಾದ್ಯಂತ ಬಿಡುಗಡೆಯಾದ ಬಾಲಿವುಡ್​ ಬ್ಯಾಡ್​ ಬಾಯ್​ ಸಲ್ಮಾನ್​ ಖಾನ್​ ಹಾಗೂ ಕತ್ರಿನಾ ಕೈಫ್ ಅಭಿನಯದ ‘ಭಾರತ್​’ ಚಿತ್ರ​ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿದೆ. ಆದರೆ, ಚಿತ್ರದ ಶೂಟಿಂಗ್​​ ಇನ್ನೇನು ಆರಂಭವಾಗವಾಗಬೇಕು ಅನ್ನುವಷ್ಟರಲ್ಲಿ ಕೈಕೊಟ್ಟಿದ್ದ ನಟಿ ಪ್ರಿಯಾಂಕ ಚೋಪ್ರಾ ವಿರುದ್ಧ ಸಾಕಷ್ಟು ಬಾರಿ ಸಲ್ಮಾನ್​ ಅಸಮಧಾನ ಹೊರಹಾಕಿದ್ದರು. ಆದರೂ, ಸೈಲೆಂಟ್​ ಆಗಿದ್ದ ಪಿಗ್ಗಿ ಇದೀಗ ಸಿಡಿದೆದ್ದಿದ್ದಾರೆ.

ಶುಕ್ರವಾರ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಂಕ, ಸಲ್ಮಾನ್​ ಖಾನ್​ ಅನವಶ್ಯಕವಾಗಿ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ. ಒಬ್ಬ ನಟಿ ಚಿತ್ರವೊಂದನ್ನು ತಿರಸ್ಕರಿಸಿರುವುದು ಇದೇ ಮೊದಲೇನಲ್ಲ, ನಟಿ ಕಾಜಲ್​​​ ಕೂಡ ‘ಹಿಚಕಿ’ ಚಿತ್ರದಿಂದ ಹೊರಬಂದಿದ್ದರು. ಅಲ್ಲದೇ, ಹಲವು ನಟಿಯರು ಅದೇ ದಾರಿಯನ್ನು ತುಳಿದಿರುವ ಉದಾಹರಣೆ ಇದೆ. ಯಾರಿಗೆ ಇಷ್ಟವಿರುವುದಿಲ್ಲವೋ ಅವರು ಚಿತ್ರತಂಡದಿಂದ ಹೊರಬರುತ್ತಾರೆ. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಸಲ್ಮಾನ್​ ಖಾನ್​ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಆದರೆ, ಸಲ್ಮಾನ್​ ಖಾನ್​ ಇದೇ ವಿಚಾರವನ್ನು ಪದೇಪದೆ ಹೇಳುತ್ತಿರುವುದು ಪ್ರಿಯಾಂಕ ಕೋಪಕ್ಕೆ ಕಾರಣವಾಗಿದೆ. ಏನು ತಪ್ಪು ಮಾಡದ ನನಗೆ ಇದರಿಂದ ಕಿರಿಕಿರಿಯಾಗುತ್ತಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುತ್ತಿರುವ ಭಾರತ್ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ.

ಮೊದಲು ಭಾರತ್​ ಚಿತ್ರತಂಡದಲ್ಲಿ ಪ್ರಿಯಾಂಕ ಚೋಪ್ರಾ ಹೆಸರು ಕೇಳಿಬಂದಿತ್ತು. ಆದರೆ, ಶೂಟಿಂಗ್​ ಆರಂಭ ಹೊಸ್ತಿಲಲ್ಲಿ ಮದುವೆಯ ಕಾರಣ ಹೇಳಿ ಪಿಗ್ಗಿ ಅದರಿಂದ ಹೊರಬಂದಿದ್ದರು. ಬಳಿಕ ಕತ್ರಿನಾ ಕೈಫ್​ ಚಿತ್ರತಂಡವನ್ನು ಸೇರಿಕೊಂಡಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *