ಪ್ರಿಯಾಂಕಾ ಚೋಪ್ರಾ ಹೇಳಿದಂತೆ ಆದರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ವೃದ್ಧಿಸಬಹುದಾ?

ಮುಂಬೈ: ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಾಸ್​ ಕಳೆದ ವರ್ಷ ಮದುವೆಯಾಗಿದ್ದಾರೆ. ಅದಾ ಲವ್​ಬರ್ಡ್ಸ್​​ಗಳಂತೆ ಹಾರಾಡುತ್ತಿರುವ ಈ ಜೋಡಿ ಅದೆಷ್ಟೋ ಸಮಾರಂಭಗಳಲ್ಲಿ ಒಟ್ಟಾಗಿ ಭಾಗವಹಿಸಿ, ಕ್ಯಾಟ್​ವಾಕ್​ ಮಾಡುತ್ತಿದ್ದಾರೆ. ಕ್ಯಾಮರಾಗಳಿಗೆ ರೊಮ್ಯಾಂಟಿಕ್​ ಫೋಸ್​ ಕೊಡುತ್ತಿದ್ದಾರೆ.

ಆದರೆ, ಪ್ರಿಯಾಂಕಾ ಚೋಪ್ರಾ ಈಗೊಂದು ಹೊಸ ವಿಷಯ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಪ್ರಿಯಾಂಕಾ ನೀಡಿದ ಹೇಳಿಕೆ ಈಗ ಅಚ್ಚರಿ ಮೂಡಿಸಿದೆ.

ರಾಜಕೀಯದಲ್ಲಿ ಆಸಕ್ತಿ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಚೋಪ್ರಾ, ನಾನು ಭವಿಷ್ಯದಲ್ಲಿ ಭಾರತದ ಪ್ರಧಾನಿಯಾಗಲು ಇಷ್ಟಪಡುತ್ತೇನೆ. ಹಾಗೇ ನನ್ನ ಪತಿ ನಿಕ್​ ಅವರು ಯುಎಸ್​ ಅಧ್ಯಕ್ಷರಾಗಲಿ ಎಂದು ಬಯಸುತ್ತೇನೆ ಎಂದು ಹೇಳಿದ್ದಾರೆ. ರಾಜಕೀಯದ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ, ನಾವಿಬ್ಬರೂ ಖಂಡಿತ ಬದಲಾವಣೆಯನ್ನು ಬಯಸುತ್ತೇವೆ. ಈ ವಿಚಾರದಲ್ಲಿ ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ಹೇಳುವುದಿಲ್ಲ ಎಂದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಈಗಾಗಲೇ ಹಲವು ಹಿಟ್​ ಸಿನಿಮಾಗಳನ್ನು ಕೊಟ್ಟಿದ್ದಾರೆ. ಕಳೆದ ವರ್ಷ ನಿಕ್​ ಅವರನ್ನು ವಿವಾಹವಾಗುವುದಕ್ಕೋಸ್ಕರ ಭಾರತ್​ ಸಿನಿಮಾವನ್ನೂ ಬಿಟ್ಟು ಹೋಗಿದ್ದರು. ಈ ವರ್ಷದ ಅಕ್ಟೋಬರ್​ನಲ್ಲಿ ಬಿಡುಗಡೆಯಾಗುತ್ತದೆ ಎನ್ನಲಾದ ಸೋನಾಲಿ ಭೋಸೆ ಅವರ ಸ್ಕೈ ಈಸ್​ ಪಿಂಕ್​ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದರಲ್ಲಿ ಫರಾಹ್​ ಅಕ್ತರ್​ ಮತ್ತು ಜರೀನಾ ವಹಾಬ್​ ಕೂಡ ಇದ್ದಾರೆ. ಅಲ್ಲದೆ, ಹಾಲಿವುಡ್​ ನಿರ್ಮಾಪಕಿ ಮಿಂಡಿ ಕಾಲಿಂಗ್ ಅವರ ಸಿನಿಮಾವೊಂದರಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *