ಹೇಸಿಗೆ ಮಾತನಾಡುವ ವ್ಯಕ್ತಿಗಳ ಬಾಯಿ ಕೊಳಕು: ಕೆಟ್ಟದಾಗಿ ಟ್ರೋಲ್​ ಮಾಡುವವರಿಗೆ ಪಿಗ್ಗಿ ಪಂಚ್​

ಮುಂಬೈ: ತಮ್ಮ ನಟನೆಯ ಸಾಮರ್ಥ್ಯ ಹಾಗೂ ಗ್ಲ್ಯಾಮರಸ್​ನಿಂದ ಬಾಲಿವುಡ್​ ಮಾತ್ರವಲ್ಲದೆ, ಹಾಲಿವುಡ್​ನಲ್ಲೂ ಛಾಪು ಮೂಡಿಸಿರುವ ನಟಿ ಪ್ರಿಯಾಂಕ ಛೋಪ್ರಾ ಅವರು ತಮ್ಮ ವಿರುದ್ಧ ಟ್ರೋಲ್​ ಮಾಡುವ ನೆಟ್ಟಿಗರಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ವಿರೋಧಿಸುವವರು ನೀಡುವ ಹೇಳಿಕೆಯನ್ನು ಹೇಗೆ ಸ್ವೀಕರಿಸುವಿರಿ ಎಂಬ ಪ್ರಶ್ನೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಉತ್ತರಿಸಿದ ಪ್ರಿಯಾಂಕ ಹೇಸಿಗೆ ಮಾತನಾಡುವ ವ್ಯಕ್ತಿಗಳ ಬಗ್ಗೆ ನಾನೆಂದು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಹೇಸಿಗೆ ಮಾತನಾಡುವ ವ್ಯಕ್ತಿಗಳ ಬಾಯಿ ಕೊಳಕಾಗಿರುತ್ತದೆ. ಯಾರು ನನ್ನ ಬಗ್ಗೆ ಪ್ರೀತಿ ಮತ್ತು ಮಮತೆಯನ್ನು ತೋರಿಸುತ್ತಾರೆ ಅವರ ಬಗ್ಗೆ ಮಾತ್ರ ಹೆಚ್ಚಿನ ಗಮನ ವಹಿಸುತ್ತೇನೆ ಎಂದಿದ್ದಾರೆ.

ಸಾಮಾಜಿಕ ಜಾಲತಾಣ ಹೇಗಿರಬೇಕು ಎಂಬುದನ್ನು ನಾನು ಬಯಸುತ್ತೇನೆಂದರೆ ಅದೊಂದು ಉತ್ತಮ ಸಂಪರ್ಕ ಸಾಧನವಾಗಿರಬೇಕು. ಎಲ್ಲರನ್ನು ಒಟ್ಟಿಗೆ ಕರೆತರಬೇಕೇ ಹೊರತು ಜನರು ತಮ್ಮ ಕೋಪ ಹಾಗೂ ದ್ವೇಷವನ್ನು ತುಂಬುವ ಗಬ್ಬುಗುಂಡಿಯಾಗಬಾರದು. ಒಂದು ವೇಳೆ ಇದೇ ಕೆಲಸವನ್ನು ಅವರು ಮಾಡಿದರೆ, ಅದು ಅವರ ಸಮಸ್ಯೆ ಎಂದು ಪಿಗ್ಗಿ ಟೀಕಿಸಿದ್ದಾರೆ.

ಹಲವು ದಿನಗಳ ನಂತರ ಮತ್ತೆ ಬಾಲಿವುಡ್​ಗೆ ಮರಳಿರುವ ಪಿಗ್ಗಿ ಸೋನಾಲಿ ಘೋಷ್​ ನಿರ್ದೇಶನದ ದಿ ಸ್ಕೈ ಇಸ್​ ಪಿಂಕ್​ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚಿತ್ರದಲ್ಲಿ ಪಿಗ್ಗಿ ಜತೆ ಫರ್ಹಾನ್​ ಅಖ್ತಾರ್​ ಮತ್ತು ಜೈರಾ ವಾಸಿಂ ಅವರು ಕೂಡ ತೆರೆ ಹಂಚಿಕೊಳ್ಳಲಿದ್ದಾರೆ.(ಏಜೆನ್ಸೀಸ್​)

View this post on Instagram

To haters with love 😘😎😏 “I’ve never really cared about people who talk shit. I mean people who talk shit are shit talkers and their mouths are dirty and not mine. But I think that I am only focused on the people that can be loved and affection. I focus on the positivity and I think that’s what social media always was supposed to be—it was supposed to be connectivity, it was supposed to be bringing people together; not creating a cesspool for people to put out their anger and hate and if they do, that’s their problem.” @priyankachopra . . . #PriyankaChopra #Priyanka #PriyankaChopraJonas #NickJonas #Quantico  #PeeCee #Bollywood #Hollywood #IfICouldTellYouJustOneThing #MissWorld2000 #Queen #PiggyChops #Nickyanka #IsntItRomantic #love #NP #np_globaldomination #Bumble #TheSkyIsPink #Priyonce @np_globaldomination #queenofbollywood #jiju #desigirl #lovebirds

A post shared by NP globaldomination (@np_globaldomination) on