More

  ಕನ್ನಡ ಮತ್ತು ತಮಿಳು ಚಿತ್ರಸಂಗೀತ ಅಧ್ಯಯನಕ್ಕಾಗಿ ಪ್ರಿಯದರ್ಶಿನಿಗೆ ಪಿಎಚ್​ಡಿ

  ಬೆಂಗಳೂರು: ‘ಮ್ಯೂಸಿಕ್ ಇನ್ ಕನ್ನಡ ಅಂಡ್ ತಮಿಳ್ ಸಿನಿಮಾ – ಎ ಸ್ಟಡಿ’ ಎಂಬ ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆಗಾಗಿ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿ ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

  ಇದನ್ನೂ ಓದಿ: ಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರ ‘ಆರಾಧ್ಯ’ …

  130ಕ್ಕೂ ಹೆಚ್ಚು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಚಿತ್ರಗಳಿಗೆ ಹಾಡಿರುವ ಪ್ರಿಯದರ್ಶಿನಿ, ಹಲವಾರು ಭಕ್ತಿ ಗೀತೆಗಳಿಗೂ ಧ್ವನಿ ನೀಡಿದ್ದಾರೆ. ಇಂಜಿನಿಯರಿಂಗ್ ಓದುತ್ತಿದ್ದ ಸಂದರ್ಭದಲ್ಲಿ ಭಾರದ್ವಾಜ್ ಸಂಗೀತ ನಿರ್ದೇಶನದ ‘ಕಾದಲ್ ಡಾಟ್ ಕಾಮ್’ ಎಂಬ ತಮಿಳು ಚಿತ್ರಕ್ಕೆ ಹಾಡುವ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಪ್ರಿಯದರ್ಶಿನಿ, ನಂತರದ ವರ್ಷಗಳಲ್ಲಿ ‘ಚಲುವಿನ ಚಿತ್ತಾರ’, ‘ಜ್ಯೂಲಿ’, ‘ನನ್ನೆದೆಯ ಹಾಡು’, ‘ಕುಸ್ತಿ’, ‘ನಂದಿ’ ಮುಂತಾದ ಹಲವು ಕನ್ನಡ ಚಿತ್ರಗಳಿಗೆ ಹಾಡುವುದರ ಜತೆಗೆ, ಹಿಂದಿಯ ‘ಗರಂ ಮಸಾಲ’ ಸೇರಿದಂತೆ ಬೇರೆ ಭಾಷೆಯ ಚಿತ್ರಗಳಿಗೂ ಹಾಡಿದ್ದಾರೆ. ಕನ್ನಡದಲ್ಲಿ ಅವರ ಮೊದಲ ಚಿತ್ರವೆಂದರೆ, ಅದು ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ ‘ಅಜ್ಜು’.

  ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಲಿತಿರುವ ಪ್ರಿಯದರ್ಶಿನಿ, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದರ ಜತೆಗೆ, ಪಾಶ್ಚಾತ್ಯ ಸಂಗೀತವನ್ನು ಲಂಡನ್​ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್​ನಲ್ಲಿ ಕಲಿತಿದ್ದಾರೆ.

  ಪಿಎಚ್​ಡಿ ಮಾಡಿರುವ ಕುರಿತು ಮಾತನಾಡಿರುವ ಅವರು, ‘ಇದುವರೆಗೂ ನಾನು ಕಂಡಂತೆ ಸಿನಿಮಾ ಬಗ್ಗೆ ಹಲವಾರು ಗ್ರಂಥಗಳು ಪುಸ್ತಕಗಳು ಲಭ್ಯವಿದೆ. ಆದರೆ, ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯೆಷ್ಟು ಮಾತ್ರ ಪುಸ್ತಕಗಳು ಮಾಹಿತಿಗಳು ಸಿಗುತ್ತವೆ. ಆದುದರಿಂದ ನಾನು ಚಲನಚಿತ್ರರಂಗ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹದಾಸೆಯಿಂದ ಈ ಸಂಶೋಧನ ವಿಷಯವನ್ನು ಆಯ್ಕೆಮಾಡಿದೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಲಿದೆ’ ಎನ್ನುತ್ತಾರೆ ಪ್ರಿಯದರ್ಶಿನಿ.

  ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸದಿರಲು ಕಾರಣ…

  ಡಾ. ಸಿ. ಎ. ಶ್ರೀಧರ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆದಿದ್ದು, ಈ ಮಹಾಪ್ರಬಂಧದಲ್ಲಿ 100 ವರ್ಷಗಳ (1917-2020) ಕನ್ನಡ ಹಾಗೂ ತಮಿಳು ಸಿನಿಮಾಗಳಿಗೆ ಸಂಬಂಧಿಸಿದ್ದಾಗಿದೆ. ಚಿತ್ರಗೀತೆಯ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನಲೆ ಗಾಯನ, ಹಿನ್ನಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್ ಮತ್ತು ರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನೊಳಗೊಂಡಿದೆ.

  ಕೃಷ್ಣನಿಗೆ ಜತೆಯಾದ ಆಶಿಕಾ; ಪಿ.ಸಿ. ಶೇಖರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts