ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್‌ಗೆ ನಟನೆಗಿಂತ ಶಿಕ್ಷಣವೇ ಮುಖ್ಯ ಎಂದ ಟೀಚರ್‌ಗೆ ಕೊಟ್ಟ ಉತ್ತರ ಹೀಗಿದೆ…

ನವದೆಹಲಿ: ನಟಿ ಪ್ರಿಯಾ ಪ್ರಕಾಶ್​ ವಾರಿಯರ್​ ಕಣ್ಸನ್ನೆ ಮೂಲಕವೇ ಸದ್ದು ಮಾಡಿದವರು. ಒಂದು ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಅವರು ವರ್ಲ್ಡ್‌ ಫೇಮಸ್​ ಆಗಿ ಬಿಟ್ಟವರು. ಟ್ರೈಲರ್‌ ರಿಲೀಸ್‌ ಆದ ಬಳಿಕ ವಿವಾದ ಸೃಷ್ಟಿಸಿದ ಬಾಲಿವುಡ್‌ನ ಶ್ರೀದೇವಿ ಬಂಗ್ಲೋ ಸಿನಿಮಾದಲ್ಲಿ ಸದ್ಯ ಬ್ಯುಸಿಯಾಗಿರುವ ಪ್ರಿಯಾ ಇದೀಗ ಮತ್ತೆ ಸದ್ದು ಮಾಡಿದ್ದಾರೆ. ಅದು ಶಿಕ್ಷಣದ ವಿಚಾರಕ್ಕೆ.

ಮಲಯಾಳಂ ಸಿನಿಮಾ ಒರು ಅಡಾರ್‌ ಲವ್‌ ಚಿತ್ರದ ಸಣ್ಣ ದೃಶ್ಯವೊಂದರಲ್ಲಿಯೇ ಅಪಾರ ಅಭಿಮಾನಿ ಬಳಗವನ್ನು ಕಂಡ ಈ ಚೆಲುವೆ ವೃತ್ತಿ ಬದುಕಿಗೆ ಶ್ರೀದೇವಿ ಬಂಗ್ಲೊ ಹೊಸ ತಿರುವು ನೀಡುವ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬಾಲಿವುಡ್‌ನಲ್ಲಿ ನನ್ನ ಮೊದಲ ಸಿನಿಮಾ ಶ್ರೀದೇವಿ ಬಂಗ್ಲೊ. ಚಿತ್ರದ ಸುತ್ತಲೂ ಕೆಲವು ವಿವಾದಗಳು ಸೃಷ್ಟಿಯಾಗಿದ್ದರೂ ಕೂಡ ಅಂತಿಮವಾಗಿ ಅದೊಂದು ಉತ್ತಮ ಚಿತ್ರವಾಗಿ ಹೊರಹೊಮ್ಮಲಿದೆ. ಎರಡನೇ ಟ್ರೈಲರ್‌ಗೆ ಅತ್ಯಂತ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆದಿದ್ದೇನೆ ಎಂದು ಹೇಳಿದ್ದಾರೆ.

ಈ ಸಿನಿಮಾವು ಬಿಡುಗಡೆಗೆ ಸಿದ್ಧವಾಗುತ್ತಿರುವ ಬೆನ್ನಲ್ಲೇ ಸೈಬರ್‌ ಕ್ರೈಮ್‌ಗೆ ಸಂಬಂಧಿಸಿದ ಲವ್‌ ಹ್ಯಾಕರ್‌ ಸಿನಿಮಾದಲ್ಲಿ ಪ್ರಿಯಾ ತೊಡಗಿಕೊಂಡಿದ್ದಾರೆ.

ಈಗ ವಾಣಿಜ್ಯ ವಿಭಾಗದಲ್ಲಿ ಎರಡನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ಇನ್ನು ಒಂದು ವರ್ಷ ಪದವಿಗಾಗಿ ಕಾಯಲೇಬೇಕಾಗಿದೆ. ಈ ಮಧ್ಯೆ ನಟನೆಗಿಂತಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದುವರಿಯಬೇಕೆಂಬುದನ್ನು ತಮ್ಮ ಶಿಕ್ಷಕರು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಅವರ ದೃಷ್ಟಿಯಿಂದ ನೋಡಿದಾಗ ಅವರು ಹೇಳುವುದು ಸರಿ ಎನಿಸುತ್ತದೆ. ಆದರೆ, ನನಗೆ ನಟನೆಯೇ ಬಲು ಇಷ್ಟ ಎಂದಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *