PHOTOS| ‘ಚಂದ್ರ ಚಕೋರಿಯಲ್ಲಿ ಮಿಂಚಿ ಮರೆಯಾಗಿದ್ದ ನಟಿ ಮತ್ತೆ ರೋರಿಂಗ್​ ಸ್ಟಾರ್ ಜತೆ​ ವೇದಿಕೆ ಹಂಚಿಕೊಂಡಿದ್ದು ವಿಶೇಷ

ಬೆಂಗಳೂರು: ‘ಚಂದ್ರ ಚಕೋರಿ’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡಿ ಮೊದಲ ಚಿತ್ರದಲ್ಲೇ ಸಕ್ಸಸ್​ ಕಂಡು ನಂತರದಲ್ಲಿ ಅನೇಕ ಸೋಲುಗಳನ್ನು ಎದುರಿಸಿ ‘ಉಗ್ರಂ’ ಚಿತ್ರದ ಮೂಲಕ ಮತ್ತೆ ಗೆಲುವಿನ ಲಯ ಮರಳಿ ‘ರಥಾವರ’ನಾಗಿ ಮಫ್ತಿಯಲ್ಲಿ ಘರ್ಜಿಸಿ ‘ಭರಾಟೆ’ ಬೀಸಲು ಕಾಯುತ್ತಿರುವ ನಟ ಶ್ರೀಮುರುಳಿ ಇಂದು ಚಂದನವನದ ಬಹುಬೇಡಿಕೆ ನಟ.

ಮೊದಲ ಚಿತ್ರದಲ್ಲಿ ಮುರಳಿಯೊಂದಿಗೆ ತೆರೆ ಹಂಚಿಕೊಂಡು ಸಕ್ಸಸ್​ ಕಂಡ ಬಳಿಕ ಕನ್ನಡ ಚಿತ್ರರಂಗದಿಂದ ತೆರೆಮರೆಗೆ ಸರಿದಿದ್ದ ನಟಿ ಇಂದು ಮತ್ತೆ ಮುರಳಿಯೊಂದಿಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿರುವುದು ವಿಶೇಷ.

ಹೌದು, ಚಂದ್ರ ಚಕೋರಿ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಮುರುಳಿಗೆ ಸಾಥ್​ ನೀಡಿದ್ದ ಪ್ರಿಯಾ ಪೆರೇರಾ ಛಬ್ರಿಯ ಮತ್ತೆ ಕಾಣಿಸಿಕೊಂಡಿದ್ದಾರೆ. ಜೀ ಕನ್ನಡ ಚಾನಲ್​ನಲ್ಲಿ ಪ್ರಸಾರವಾಗುವ ‘ವೀಕೆಂಡ್​ ವಿತ್​ ರಮೇಶ್​’ ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಯಾಗಿ ಶ್ರೀಮುರಳಿ ಅವರು ಹಾಟ್​ ಸೀಟ್​ನಲ್ಲಿ ಕುಳಿತಿದ್ದಾರೆ. ಇಂದು(ಶನಿವಾರ) ಶ್ರೀಮುರಳಿ ಸಂಚಿಕೆ ಪ್ರಸಾರವಾಗುತ್ತಿದ್ದು, ಈಗಾಗಲೇ ಎಲ್ಲೆಡೆ ಹರಿದಾಡಿರುವ ಪ್ರೋಮೋಗಳಲ್ಲಿ ಶ್ರೀಮುರುಳಿಗೆ ಸರ್ಪೈಸ್​ ನೀಡಲು ಬಂದ ಆಪ್ತರಲ್ಲಿ ಪ್ರಿಯಾ ಕೂಡ ಒಬ್ಬರಾಗಿರುವುದು ವಿಶೇಷವಾಗಿದೆ.

ಸಿಎಂ ಕುಮಾರಸ್ವಾಮಿ ನಿರ್ಮಾಣದಲ್ಲಿ ಮೂಡಿಬಂದ ಚಂದ್ರ ಚಕೋರಿ ಚಿತ್ರ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಪ್ರಿಯಾ ಪೆರೇರಾ ಎರಡನೇ ನಟಿಯಾಗಿ ಕಾಣಿಸಿಕೊಂಡಿದ್ದರು. ನಾಜ್ ಎಂಬ ಮತ್ತೊರ್ವ ನಟಿ ಚಿತ್ರದಲ್ಲಿ ಮೊದಲ ನಾಯಕಿಯಾಗಿದ್ದರು. ಮೊದಲ ಚಿತ್ರ ಯಶಸ್ಸು ಕಂಡರು ಬಳಿಕ ಚಿತ್ರರಂಗದಿಂದ ದೂರವಾಗಿದ್ದ ಪ್ರಿಯಾ ಮತ್ತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಪ್ರೀಯಾ ಸಾಹೀಲ್​ ಎಂಬವರನ್ನು ಮದುವೆಯಾಗಿ ಸದ್ಯ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.

Leave a Reply

Your email address will not be published. Required fields are marked *