ರಾಣೆಬೆನ್ನೂರ: ಖಾಸಗಿ ಫೈನಾನ್ಸ್ಗಳ ಕಿರುಕುಳ ಖಂಡಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರು ನಗರದ ಬಸ್ ನಿಲ್ದಾಣದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಇಲ್ಲಿಯ ಕೆಇಬಿ ಗಣೇಶ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ ವೃತ್ತದವರೆಗೂ ಬಂದಿತು. ನಂತರ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಾಯಿಕೊಡೆಯಂತೆ ಹುಟ್ಟಿಕೊಂಡಿರುವ ಖಾಸಗಿ ಫೈನಾನ್ಸ್ಗಳು ನಗರ ಹಾಗೂ ಗ್ರಾಮೀಣ ಭಾಗದ ರೈತ ಕಾಮಿರ್ಕರು, ಕೂಲಿ ಕಾಮಿರ್ಕರು, ಮಧ್ಯಮ ವರ್ಗದ ಬಡವರಿಗೆ ಸಾಲ ಕೊಟ್ಟು ಅವರಿಂದ ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾಲ ಪಡೆದವರ ಮನೆಯ ಮುಂದೆ ಸಂಜೆ 7ರಿಂದ ರಾತ್ರಿ 11ರ ವರೆಗೆ ಹಣ ಮತ್ತು ಅದರ ಬಡ್ಡಿಯನ್ನು ಕಟ್ಟುವಂತೆ ಅವಮಾನಗೊಳಿಸುತ್ತಾ ಮನೆ ಬೀಗ ಹಾಕುತ್ತೇವೆ, ಹರಾಜು ಮಾಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಲೇವಾದೇವಿ ಕಾಯ್ದೆ ಪ್ರಕಾರ ಬಡ್ಡಿ ದಂಧೆ ಮಾಡುತ್ತಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದೆ. ತಹಸೀಲ್ದಾರ್ರು ಅಡೆತಡೆ ಮಾಡದೆ ಸಾಲ ವಸೂಲಾತಿ ಮಾಡಬೇಕು ಎಂದು ಸೂಚಿಸಿದ್ದರೂ ಖಾಸಗಿ ಮೈಕ್ರೊ ಫೈನಾನ್ಸ್ಗಳು ನಿಯಮಗಳನ್ನು ಗಾಳಿಗೆ ತೂರಿ ಸಾಲ ವಸೂಲಿಗೆ ನಿಂತಿವೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಫೈನಾನ್ಸ್ ವ್ಯಕ್ತಿಗಳನ್ನು ಕರೆಯಿಸಿ ಹಣ ವಸೂಲಿಗೆ ಕಾಲಾವಕಾಶ ಕೊಡಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ಕಿರಣ ಗುಳೇದ, ಉಚ್ಚಂಗೆವ್ವ ಪಕ್ಕಜ್ಜಿ, ಗೌರವ್ವ ಹಲವಾಗಲ, ಬಸವ್ವ ಮೈದೂರ, ಶಿಲ್ಪಾ ಸಣ್ಮನಿ, ಗಾಯತ್ರವ್ವ ಉಳ್ಳೇರ, ರೇಣುಕಾ ವರವಜ್ಜನವರ, ರತ್ನವ್ವ ಚಳಗೇರಿ, ಬಸವ್ವ ಮುದೇನೂರ, ಮಂಜವ್ವ ಕರೇತಿಮ್ಮಣ್ಣನವರ, ಹೊನ್ನವ್ವ ಮೂಕಮ್ಮನವರ, ಅಂಜನಾ ಬ್ಯಾಡಗಿ, ರಂಜಿತಾ ಹರಿಜನ, ಅಂಬಿಕಾ ಮರಿಯಮ್ಮನವರ, ಶಾಂತಮ್ಮ ಕಡಚಿ, ಮಂಜವ್ವ ಕಡಚಿ, ಲಕ್ಷ$್ಮವ್ವ ಗಂಗಣ್ಣನವರ ಮತ್ತಿತರರು ಪಾಲ್ಗೊಂಡಿದ್ದರು.
ಖಾಸಗಿ ೈನಾನ್ಸ್ಗಳ ಕಿರುಕುಳ ಖಂಡಿಸಿ ಪ್ರತಿಭಟನೆ

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips
Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…
ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd
bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…
ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips
Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…