ಖಾಸಗಿ ೈನಾನ್ಸ್​ ಕಿರುಕುಳ ತಡೆಯಲು ಮಹಿಳೆಯರ ಆಗ್ರಹ

blank

ರಾಣೆಬೆನ್ನೂರ: ನಗರ ಹಾಗೂ ಗ್ರಾಮೀಣ ಭಾಗದಲ್ಲಿನ ಖಾಸಗಿ ೈನಾನ್ಸ್​ನವರ ಕಿರುಕುಳ ತಡೆಯಬೇಕು. ಮೀಟರ್​ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂದ ನೇತೃತ್ವದಲ್ಲಿ ಶುಕ್ರವಾರ ಸಾಲಗಾರರಿಂದ ಬೇಸತ್ತ ಸಾರ್ವಜನಿಕರು ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರಾಣೆಬೆನ್ನೂರಿನಲ್ಲಿ ಖಾಸಗಿ ೈನಾನ್ಸ್​ನವರ ಉಪಟಳ ಹೆಚ್ಚಳವಾಗಿದೆ. ನಿತ್ಯವೂ ಸಾಲ ವಸೂಲಿಗಾಗಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30ರವರೆಗೆ ಕಾಡುತ್ತಿದ್ದಾರೆ. ಬಡವರ ಮನೆ ಎದುರು ಬಂದು ಮನಬಂದಂತೆ ಬೈದು ಸಾಲ ವಸೂಲಿ ಮಾಡುವ ಹಂತಕ್ಕೆ ಬಂದಿದ್ದಾರೆ. ಇದರಿಂದ ಮಾನ ಮರ್ಯಾದೆಗೆ ಅಂಜಿ ಸಾಲ ಮಾಡಿದವರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ.
ಅಲ್ಲದೆ ಮೀಟರ್​ ಬಡ್ಡಿ ದಂಧೆಗೆ ಬಡವರು, ಕೂಲಿ ಕಾಮಿರ್ಕರು ತತ್ತರಿಸಿ ಹೋಗಿದ್ದು, ಬಡ್ಡಿ ಸಾಲ ತುಂಬಲಾಗದೆ ಮನೆ ಬಿಟ್ಟು ಹೋಗುವ ದುಸ್ಥಿತಿ ಎದುರಾಗಿದೆ. ಆದ್ದರಿಂದ ತಹಸೀಲ್ದಾರ್​ರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಕಾನೂನು ಬಾಹಿರವಾಗಿ ಸಾಲ ವಸೂಲಿಗೆ ಬರುವ ಖಾಸಗಿ ಫೈನಾನ್ಸ್​ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮೀಟರ್​ ಬಡ್ಡಿ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಉಚ್ಚಿಂಗೆಮ್ಮ ಬಕ್ಕಜ್ಜಿ, ಗೌರವ್ವ ಹಲವಾಗಿಲ, ಬಸವ್ವ ಮೈದೂರ, ರೂಪಾ ಸಣ್ಣಮನಿ, ಗಾಯತ್ರಿ ಉಳ್ಳೇರ, ರೇಣುಕಾ ವರವಜ್ಜನವರ, ರತ್ನವ್ವ ಚಳಗೇರಿ, ಬಸವ್ವ ಮುದೇನೂರ, ಮಂಜಪ್ಪ ಕರಿತಿಮ್ಮಣ್ಣನವರ, ಹೊನ್ನಪ್ಪ ಮುಕ್ಕಮ್ಮನವರ, ನಾಗಪ್ಪ ಕನವಳ್ಳಿ, ಬಸಣ್ಣ ಕಡೂರ, ಶ್ರೀಕಾಂತ ಸಣ್ಣಮನಿ, ಮಲ್ಲಿಕಾರ್ಜುನ ವರವಜ್ಜನವರ, ಮಂಜಪ್ಪ ಎ.ಬಿ., ಹನುಮಂತಪ್ಪ ಹಲವಾಗಿಲ, ಸದಾನಂದ ಮರಿಯಮ್ಮನವರ ಮತ್ತಿತರರು ಪಾಲ್ಗೊಂಡಿದ್ದರು.

Share This Article

ಬಿಸಿಲಲ್ಲಿ ಸೆಖೆ ತಾಳಲಾರದೆ ICE ನೀರು ಕುಡಿದ್ರೆ ಜೀವಕ್ಕೆ ಅಪಾಯ ಖಂಡಿತ! Summer Health

Summer Health: ನೀರು ಮನುಷ್ಯರಿಗೆ ಬಹಳ ಅವಶ್ಯಕ. ನಾವು ಅನ್ನ ತಿನ್ನದೆ ಬದುಕಬಹುದು, ಆದರೆ ನೀರು…

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…