ರಾಣೆಬೆನ್ನೂರ: ಸಾಲ ವಸೂಲಾತಿ ಹೆಸರಿನಲ್ಲಿ ಖಾಸಗಿ ಫೈನಾನ್ಸ್ಗಳು ನೀಡುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿ ನೊಂದ ಸಾರ್ವಜನಿಕರು ರಾಜ್ಯ ರೈತ ಸಂದ ನೇತೃತ್ವದಲ್ಲಿ ಸೋಮವಾರ ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣವರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕಿನಾದ್ಯಂತ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಖಾಸಗಿ ಫೈನಾನ್ಸ್ನವರು ಸಾಲ ನೀಡಿ ದುಪ್ಪಟ್ಟು ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಸಾಲ ಪಡೆದವರ ಮನೆಯ ಎದುರಿಗೆ ಸಂಜೆ 7ರಿಂದ ರಾತ್ರಿ 11ರ ವರೆಗೆ ನಿಂತುಕೊಂಡು ಅಸಲು ಮತ್ತು ಬಡ್ಡಿ ಪಾವತಿಸಲು ಒತ್ತಾಯಿಸುತ್ತಾರೆ. ಹಣ ನೀಡದಿದ್ದರೆ ಮನೆಗೆ ಬೀಗ ಹಾಕಿ ಹರಾಜು ಹಾಕುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಲೇವ ದೇವಿ ಕಾಯ್ದೆ ಪ್ರಕಾರ ಬಡ್ಡಿ ದಂಧೆ ಮಾಡುತ್ತಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರದ ಆದೇಶವಿದ್ದರೂ ಖಾಸಗಿ ಮೈಕ್ರೊ ಫೈನಾನ್ಸ್ಗಳು ಕಾನೂನು ಗಾಳಿಗೆ ತೂರಿ ಬಡವರ ರಕ್ತ ಹೀರುತ್ತಿವೆ. ಈ ವಿಚಾರವಾಗಿ ಅನೇಕ ಬಾರಿ ಪ್ರತಿಭಟಿಸಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಆದ್ದರಿಂದ ಬರಗಾಲ ಮುಗಿದು ಮುಂಗಾರು ಮಳೆಯಿಂದ ಚೇತರಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಕೆಲಸಗಳು ಈಗ ಪ್ರಾರಂಭವಾಗಿದ್ದು ಹಣ ಪಾವತಿಸಲು ಕಾಲಾವಕಾಶ ಕೊಡಿ ಎಂದು ವಿನಂತಿಸಿರೂ ಖಾಸಗಿ ಫೈನಾನ್ಸ್ಗಳವರು ಸ್ಪಂದಿಸುತ್ತಿಲ್ಲ. ಸರ್ಕಾರದ ಯೋಜನೆಯಾದ ಗೃಹಲಕ್ಷಿ$್ಮಯಿಂದ ಪ್ರತಿ ತಿಂಗಳು ಬರುವ 2 ಸಾವಿರ ರೂ. ಹಣವನ್ನು ಖಾಸಗಿ ಮೈಕ್ರೋ ಫೈನಾನ್ಸ್ನವರು ಆಧಾರ ಕಾರ್ಡ್ ಲಿಂಕ್ನ ಮುಖಾಂತರ ಸಾಲಕ್ಕೆ ಮುರಿದುಕೊಂಡು ಮಹಿಳೆಯರಿಗೆ ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂರ್ಪೂಣವಾಗಿ ಚರ್ಚೆ ನಡೆಸಿ ಖಾಸಗಿ ಮೈಕ್ರೋ ಫೈನಾನ್ಸ್ಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದರೆ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ, ಅಂಜುಮಾ ಕೊಳೂರ, ರಜಿಯಾ ಜಕಾತಿ, ಶಾಹಿನಾ ಸವಣೂರ, ಶೈಲಮ್ಮ ರಂಗರೆಡ್ಡಿ, ಮಂಜಪ್ಪ ಸಂಭೋಜಿ, ನಾಗರತ್ನಾ ಸೋಮಕ್ಕಳವರ, ಕೊಟ್ರಮ್ಮ ಕಾಯಕದ, ಮಲ್ಲಮ್ಮ ಗಿರಡ್ಡಿ, ಮಲ್ಲಮ್ಮ ಚಿನ್ನಾಳಿ, ರೇಷ್ಮಾ ದೊಡ್ಮನಿ, ಫಾತಿಮಾ ಲೆ$್ಮಶ್ವರ, ಅಮಿರಾ ಶಿಡೇನೂರ, ಅಶ್ವಿನಿ ದೊಡ್ಮನಿ, ತೀರ್ಥವ್ವ ಕಮ್ಮಾರ, ಸರಸ್ವತಿ ಮೇವುಂಡಿ, ಚಂದ್ರಪ್ಪ ಕಟ್ಟಿಮನಿ ಮತ್ತಿತರರು ಪಾಲ್ಗೊಂಡಿದ್ದರು.
ಖಾಸಗಿ ೈನಾನ್ಸ್ಗಳ ಕಿರುಕುಳಕ್ಕೆ ಕಡಿವಾಣ ಹಾಕಲು ಆಗ್ರಹ

You Might Also Like
ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…