More

  ಖಾಸಗಿ ಫೈನಾನ್ಸ್‌ಗಳ ಕಿರುಕುಳ ತಪ್ಪಿಸಿ; ಮಹಿಳೆಯರಿಂದ ಪ್ರತಿಭಟನೆ

  ರಾಣೆಬೆನ್ನೂರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಖಾಸಗಿ ಫೈನಾನ್ಸ್‌ನವರು ಸಾಲ ವಸೂಲಾತಿ ಹೆಸರಿನಲ್ಲಿ ಸಾಲಗಾರರಿಗೆ ಇಲ್ಲಸಲ್ಲದ ಕಿರುಕುಳ ನೀಡುತ್ತಿದ್ದು, ಕೂಡಲೇ ಇದನ್ನು ತಡೆಯಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ನೇತೃತ್ವದಲ್ಲಿ ಗ್ರಾಮೀಣ ಭಾಗದ ಮಹಿಳೆಯರು ಸೋಮವಾರ ನಗರದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.
  ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಖಾಸಗಿ ಫೈನಾನ್ಸ್ ಹೆಚ್ಚಿನ ಸಂಖ್ಯೆಯಲ್ಲಿ ಹುಟ್ಟಿಕೊಂಡಿವೆ. ಕಾರ್ಮಿಕರಿಗೆ, ಬಡ ಕಾರ್ಮಿಕ ಮಹಿಳೆಯರಿಗೆ ಸಾಲ ನೀಡಿದ್ದಾರೆ. ಕಾರ್ಮಿಕರು ಕಂತು ಕಟ್ಟುವುದು ಒಂದು ತಿಂಗಳು ತಡವಾದರೂ ಮನೆ ಬಾಗಿಲಿಗೆ ಬರುವ ಖಾಸಗಿ ಕಂಪನಿಯವರು ಮನಬಂದಂತೆ ಬೈದು ಹಿಂಸೆ ಮಾಡುತ್ತಿದ್ದಾರೆ. ಇದರಿಂದ ಸಾಲ ಪಡೆದ ಬಡವರು ಗ್ರಾಮೀಣ ಭಾಗದಲ್ಲಿ ಮನೆಯಿಂದ ಹೊರಬರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
  ಹೀಗಾಗಿ ಸಾಲಗಾರರ ಕಿರುಕುಳದಿಂದ ರೈತರು, ಕಾರ್ಮಿಕರು ಆತ್ಮಹತ್ಯೆಯ ದಾರಿ ಹಿಡಿಯುವ ದುಸ್ಥಿತಿ ಎದುರಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಖಾಸಗಿ ಫೈನಾನ್ಸ್‌ನವರ ಕಿರುಕುಳ ತಡೆಯಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
  ಪ್ರಮುಖರಾದ ನಾಗರಾಜ ಕರೂರ, ಪ್ರಶಾಂತ ಮಾಕನೂರ, ಚಂದ್ರಶೇಖರ ಕರೇಗೌಡರ, ಬ್ರಹ್ಮಾಚಾರಿ ಬಡಿಗೇರ, ಆನಂದ ಕಟ್ಟಿಮನಿ, ಹನುಮಂತಪ್ಪ, ಮಲ್ಲೇಶ ಕರೂರ, ನಾಗರಾಜ ಮರಾಠಿ, ಹಾಲೇಶ ಪೂಜಾರ, ಹಸಿನಬಾನು, ರತ್ನಮ್ಮ, ರೇಣುಕಮ್ಮ, ನಿಂಗವ್ವ, ಶೋಭಾ ಮತ್ತಿತರರು ಪಾಲ್ಗೊಂಡಿದ್ದರು.

  See also  ಸಿಎಂ ವಿರುದ್ಧ ಗೆಲ್ಲುವ ಕುದುರೆಗಾಗಿ ಕೈ ಹುಡುಕಾಟ; ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts