ಎರಡನೇ ಟೆಸ್ಟ್​ನಲ್ಲಿ ಗಂಗೂಲಿ, ಅಜರುದ್ದೀನ್​, ರೋಹಿತ್​ ದಾಖಲೆ ಸರಿಗಟ್ಟುತ್ತಾರಾ ಪೃಥ್ವಿ ಷಾ!

ಹೈದರಾಬಾದ್​: ಪದಾರ್ಪಣೆ ಪಂದ್ಯದಲ್ಲೇ ಭರ್ಜರಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿರುವ ಪ್ರತಿಭಾವಂತ ಯುವ ಕ್ರಿಕೆಟಿಗ ಪೃಥ್ವಿ ಷಾಗೆ ಹೈದರಾಬಾದ್​ ಟೆಸ್ಟ್​ನಲ್ಲಿ ಮತ್ತೊಂದು ದಾಖಲೆ ಬರೆಯುವ ಅವಕಾಶವಿದೆ.

ಪೃಥ್ವಿ ಷಾ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯದಲ್ಲಿ ಶತಕ ಗಳಿಸಲು ಸಫಲರಾದರೆ, ಪದಾರ್ಪಣೆ ಪಂದ್ಯ ಮತ್ತು ಎರಡನೇ ಟೆಸ್ಟ್​ನಲ್ಲಿ ಶತಕ ಗಳಿಸಿದ ಭಾರತದ ಮೂವರು ದಿಗ್ಗಜ ಆಟಗಾರರ ದಾಖಲೆಯನ್ನು ಸರಿಗಟ್ಟುತ್ತಾರೆ.

ಈ ಹಿಂದೆ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಅವರು 1984ರಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ತಮ್ಮ ಮೊದಲ 2 ಟೆಸ್ಟ್​ನಲ್ಲಿ ಶತಕ ಗಳಿಸಿದ್ದರು. ಮಾಜಿ ನಾಯಕ ಸೌರವ್​ ಗಂಗೂಲಿ 1996ರಲ್ಲಿ ಇಂಗ್ಲೆಂಡ್​ ಪ್ರವಾಸದಲ್ಲಿ ಈ ದಾಖಲೆ ನಿರ್ಮಿಸಿದ್ದರು. ರೋಹಿತ್​ ಶರ್ಮಾ 2013ರಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧವೇ ಈ ಸಾಧನೆ ಮಾಡಿದ್ದರು.

ರಾಜ್​ಕೋಟ್​ ಟೆಸ್ಟ್​ನಲ್ಲಿ ಆತ್ಮವಿಶ್ವಾಸದಿಂದ ಬ್ಯಾಟ್​ ಬೀಸಿ ಕೇವಲ 99 ಎಸೆತಗಳಲ್ಲಿ ಶತಕ ಸಿಡಿಸಿದ್ದ ಪೃಥ್ವಿ ಎರಡನೇ ಟೆಸ್ಟ್​ನಲ್ಲೂ ಇದೇ ಫಾರ್ಮ್​ ಅನ್ನು ಮುಂದುವರಿಸಲಿದ್ದಾರೆ ಎಂದು ಕ್ರಿಕೆಟ್​ ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹೈದ್ರಾಬಾದ್​ನಲ್ಲಿ ಮಯಾಂಕ್ ಪದಾರ್ಪಣೆ?