ತಾಳಿಕೋಟೆ: ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಕೊಡಮಾಡುವ ವಿಶ್ವ ಕನ್ನಡ ಕಲಾನಾಟ್ಯರತ್ನ ರಾಷ್ಟ್ರೀಯ ಪ್ರಶಸ್ತಿಗೆ ತಾಳಿಕೋಟೆಯ ನಾಟ್ಯಮಯೂರಿ ಪೃಥ್ವಿ ಹೆಗಡೆ ಆಯ್ಕೆಯಾಗಿದ್ದಾರೆ.
ಕರ್ನಾಟಕ, ಕೇರಳ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ಚಂದನ ವಾಹಿನಿ, ಬಸವ ವಾಹಿನಿಯಲ್ಲಿ ಭರತನಾಟ್ಯ ಹಾಗೂ ಜಾನಪದ ನೃತ್ಯ ಪ್ರದರ್ಶನ ನೀಡಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿರುವ ಇವರು 980 ನೃತ್ಯ ಪ್ರದರ್ಶನ ನೀಡಿ ನಾಟ್ಯ ಮಯೂರಿ ಬಿರುದು ಪಡೆದಿದ್ದಾರೆ.
ಪೃಥ್ವಿ ಅವರ ಸಾಧನೆ ಗುರುತಿಸಿ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆಯು ವಿಜಯಪುರದ ಎಪಿಎಂಸಿ ಅಸೋಸಿಯೇಷನ್ ಮಂಗಲ ಕಾರ್ಯಾಲಯದಲ್ಲಿ ಜ.19 ರಂದು ಬೆಳಗ್ಗೆ 10ಕ್ಕೆ ನಡೆಯಲಿರುವ ಐದನೇ ಭಾವೈಕ್ಯ ರಾಜ್ಯ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಸಂಪಾದಕ ಡಾ.ಎಸ್.ಎಸ್.ಪಾಟೀಲ ತಿಳಿಸಿದ್ದಾರೆ.