ಕೈದಿಗಳ ಕುಟುಂಬಸ್ಥರಿಗೆ ಸರ್ಕಾರಿ ಸೌಲಭ್ಯ

ಯಾದಗಿರಿ: ಕಾರಾಗೃಹದಲ್ಲಿ ಬಂಧಿಯಾಗಿರುವ ವಿಚಾರಣಾಧೀನ ಕೈದಿಗಳು ಹಾಗೂ ಆರು ತಿಂಗಳ ಮೇಲ್ಪಟ್ಟ ಶಿಕ್ಷೆಗೆ ಗುರಿಯಾದ ಕೈದಿಗಳ ಕುಟುಂಬಸ್ಥರಿಗೆ ಅಗತ್ಯವಿರುವ ಸರ್ಕಾರದ ಸೌಲಭ್ಯ ಹಾಗೂ ಕಾನೂನು ನೆರವು ಉಚಿತವಾಗಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒದಗಿಸಲಾಗುವುದು ಎಂದು ಪ್ರಭಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ತಿಳಿಸಿದರು.

ಮಂಗಳವಾರ ನಗರದ ಜಿಲ್ಲಾ ಕಾರಾಗೃಹದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹ ಆಶ್ರಯದಲ್ಲಿ ಕಾರಾಗೃಹದಲ್ಲಿನ ಬಂಧಿಗಳ ಕುಟುಂಬ ಸದಸ್ಯರಿಗೆ ಆಯೋಜಿಸಿದ ಕಾನೂನು ನೆರವು ನೀಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರಾಗೃಹದಲ್ಲಿನ ಬಂಧಿಗಳ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಕಾನೂನು ನೆರವು ನೀಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧವಿದೆ ಎಂದರು.

ಸಿವಿಲ್ ನ್ಯಾಯಾಧೀಶ ಲೋಕೇಶ್ ಧನಪಾಲ ಹವಲೆ ಮಾತನಾಡಿ, ಕುಟುಂಬಕ್ಕೆ ನೆರವಾಗಬೇಕಾದವರು ಯಾವುದೋ ತಪ್ಪು ಮಾಡಿ ಕಾರಾಗೃಹದಲ್ಲಿ ಬಂಧಿಗಳಾಗಿರುತ್ತಾರೆ. ಅವರ ತಂದೆ, ತಾಯಿ, ಹೆಂಡತಿ, ಮಕ್ಕಳು ಕಷ್ಟದಲ್ಲಿ ಜೀವನ ಸಾಗಿಸುತ್ತ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಾರೆ. ಅಂತವರಿಗೆ ಪ್ರಾಧಿಕಾರದಿಂದ ನೆರವು ನೀಡುತ್ತೇವೆ ಎಂದು ಹೇಳಿದರು.

ಕೈದಿಗಳ ವಯಷ್ಕ ತಂದೆ, ತಾಯಿಗೆ ವೃದ್ಧಾಪ್ಯ ವೇತನ, ಮಕ್ಕಳಿಗೆ ಶಿಷ್ಯವೇತನ, ವೈದ್ಯಕೀಯ ನೆರವು, ಆಧಾರ್ ಕಾರ್ಡ್​, ರೇಷನ್ ಕಾರ್ಡ್​, ಪ್ಯಾನ್ ಕಾರ್ಡ್​, ಜನ್ಮ ಪ್ರಮಾಣಪತ್ರ ಹಾಗೂ ಇತರೆ ಕಾನೂನು ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ದತ್ತಾತ್ರೇಯ ಮೆಧಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸ್ಮೀತಾ ಮಾಲಗಾಂವೆ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್, ಕಾಯದಶರ್ಿ ಶಾಂತಪ್ಪ ಎಸ್. ಖಾನಹಳ್ಳಿ, ಜಿಲ್ಲಾ ಕಾರಾಗೃಹ ಸಿಬ್ಬಂಧಿ ಮಹಮ್ಮದ್ ಇಬ್ರಾಹಿಮ್, ಜಂಟಿ ಕಾರ್ಯದಶರ್ಿ ಭೀಮರೆಡ್ಡಿ ಅಚ್ಚೋಲಾ ಇದ್ದರು.

Leave a Reply

Your email address will not be published. Required fields are marked *