ಕೃಷ್ಣನ ಜನ್ಮಸ್ಥಳದಲ್ಲಿ ಕೃಷ್ಣವೇಣಿ ಜನನ, ನ್ಯಾಯಾಧೀಶರಿಂದ ನಾಮಕರಣ

ರಾಯಚೂರು: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ಕೈದಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅಪರೂಪದ ಘಟನೆ ನಡಿದಿದೆ.

ರಾಯಚೂರು ಜಿಲ್ಲಾ ಕಾರಾಗೃಹದಲ್ಲಿ ಈ ಘಟನೆ ನಡೆದಿದ್ದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬೈಲೂರು ಶಂಕರ ಅವರು ಮಗುವಿಗೆ ಕೃಷ್ಣವೇಣಿ ಎಂದು ನಾಮಕರಣ ಮಾಡಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್, ಕಾರಾಗೃಹ ಇಲಾಖೆಯಿಂದ ನಾಮಕರಣ ಹಾಗೂ ತೊಟ್ಟಿಲ ಕಾರ್ಯಕ್ರಮ ಆಯೋಜಿಸಿ, ಕೃಷ್ಣನ ಜನ್ಮಸ್ಥಳದಲ್ಲಿ ಜನಿಸಿರುವ ಈ ಮಗುವಿಗೆ ಕೃಷ್ಣವೇಣಿ ಎಂದು ಹೆಸರಿಟ್ಟಿದ್ದಾರೆ.

ಮಾನ್ವಿಯಲ್ಲಿ ಕಳ್ಳತನ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಶಿಷಾಬಾಯಿ ಅಲಿಯಾಸ್​ ಭಾಗ್ಯಮ್ಮ ಕಾರಾಗೃಹಕ್ಕೆ ದಾಖಲಾಗುವಾಗಲೇ ಗರ್ಭಿಣಿಯಾಗಿದ್ದರು. (ಏಜೆನ್ಸೀಸ್​)