ನೆಮ್ಮದಿಗಿಂತ ಆಡಂಬರಕ್ಕೆ ಆದ್ಯತೆ

ಹಾಸನ: ಭಾರತದ ಬಹುತೇಕ ಜನರು ಮಾನಸಿಕ ನೆಮ್ಮದಿಗಿಂತ ಆಡಂಬರದ ಜೀವನಕ್ಕೆ ಆದ್ಯತೆ ನೀಡುತ್ತಿರುವುದರಿಂದ ಅನೇಕ ತೊಂದರೆಗಳಿಗೆ ಸಿಲುಕುತ್ತಿದ್ದಾರೆ ಎಂದು ಬೌದ್ಧ ಗುರು ಬೋಧಿರತ್ನ ಭಂತೇಜಿ ಅಭಿಪ್ರಾಯಪಟ್ಟರು.

ನಗರದ ಸ್ವಾಭಿಮಾನಿ ಭವನದಲ್ಲಿ ಬೌದ್ಧ ಸಂಸ್ಕೃತಿ ಅಧ್ಯಯನ ಕೇಂದ್ರದಿಂದ ಏರ್ಪಡಿಸಿದ್ದ ಗೌತಮ ಬುದ್ಧರ 2563ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯನಿಗೆ ಜ್ಞಾನ ಮತ್ತು ಶೀಲ ಮುಖ್ಯ. ಇವೆರಡನ್ನೂ ಪಡೆಯಬೇಕಾದರೆ ಧ್ಯಾನದ ಅವಶ್ಯಕತೆಯಿದೆ. ಕಲ್ಮಶವಾದ ಮನಸ್ಸನ್ನು ಧ್ಯಾನದ ಮೂಲಕ ತಿಳಿಗೊಳಿಸಿ ಶುದ್ಧ ಜೀವನ ನಡೆಸಬಹುದು ಎಂದರು.

ಭಾರತದಲ್ಲಿ ಬೌದ್ಧ ಧರ್ಮ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿಹಾರಗಳಲ್ಲಿ ಜನರು ಸೇರುತ್ತಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಬೌದ್ಧ ಧರ್ಮ ಮೊದಲ ಅಡಿಯಿಟ್ಟಿದೆ. ಡಾ. ಅಂಬೇಡ್ಕರ್ ರಚಿಸಿರುವ ಸಂವಿಧಾನದಡಿ ಬದುಕು ನಡೆಸುತ್ತಿರುವ ಎಲ್ಲರೂ ಅವರು ಪಾಲಿಸಿದ ಬೌದ್ಧ ತತ್ವಗಳನ್ನು ತಪ್ಪದೆ ಪರಿಪಾಲಿಸಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *