ಪರಿಸರ ಸ್ವಚ್ಛತಗೆ ಆದ್ಯತೆ ನೀಡಿ

ಶೃಂಗೇರಿ: ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರಾಕೃತಿಕ ಸಮತೋಲನವನ್ನು ನಿರಂತರವಾಗಿ ಕಾಪಾಡುವುದು ನಮ್ಮ ಕರ್ತವ್ಯ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಮೆಣಸೆ ಒಕ್ಕೂಟದ ಅಧ್ಯಕ್ಷೆ ಸುಮಂಗಲಿ ಅನಂದಸ್ವಾಮಿ ಹೇಳಿದರು.
ಭಾನುವಾರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನಿಂದ ಮಸಿಗೆಯ ಶೂನ್ಯ ಶ್ರೀ ವರದೇಶ್ವರ ಸ್ವಾಮಿ ದೇವಸ್ಥಾನದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವವರ್ಷದಂತೆ ಈ ವರ್ಷವೂ ಸ್ವಾತಂತ್ರೋತ್ಸವ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯೋಜನೆ ಆಶಯ ನಿರಂತರವಾಗಿ ಮುಂದುವರಿಯಲಿದೆ. ಇದಕ್ಕೆ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದರು.
ಜೆಸಿಐ ಕಾರ್ಯದರ್ಶಿ ರಮೇಶ್ ಶೂನ್ಯ, ವಲಯ ಮೇಲ್ವಿಚಾರಕಿ ಅನಿತಾ, ಗ್ರಾಪಂ ಸದಸ್ಯ ರಾಜು ಶೂನ್ಯ, ಒಕ್ಕೂಟದ ಕೋಶಾಧ್ಯಕ್ಷೆ ಪ್ರಮೀಳಾ ರಮೇಶ್, ವಿಪತ್ತು ನಿರ್ವಹಣಾ ಘಟಕದ ಪ್ರತಿನಿ ಗೋಪಾಲ್, ಸಂಯೋಜಕ ಸಂತೋಷ್ ಹಾಜರಿದ್ದರು.

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…