ಧಾರವಾಡ ಐಐಟಿಯ ಶಾಶ್ವತ ಕ್ಯಾಂಪಸ್​ಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಹುಬ್ಬಳ್ಳಿ: ಧಾರವಾಡದಲ್ಲಿ ಈಗಾಗಲೆ ಆರಂಭವಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಶಾಶ್ವತ ಕ್ಯಾಂಪಸ್​ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದರು.


ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಭಾನುವಾರ ಸಂಜೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸಚಿವ ಆರ್​.ವಿ. ದೇಶಪಾಂಡೆ, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಮೇಯರ್​ ಅವರು ಬರಮಾಡಿಕೊಂಡರು. ಬಳಿಕ ಸರ್ಕಾರಿ ಕಾರ್ಯಕ್ರಮದ ವೇದಿಕೆಗೆ ತೆರಳಿ, ಐಐಟಿ ಶಾಶ್ವತ ಕ್ಯಾಂಪಸ್​ಗೆ ಶಂಕುಸ್ಥಾಪನೆ ನೆರವೇರಿಸಿದರು.


ಧಾರವಾಡ ನಗರ ಅನಿಲ ಪೂರೈಕೆ ಯೋಜನೆ, ಮಂಗಳೂರುತುರ್ತು ಅವಶ್ಯಕತೆ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ, ಪಾದೂರ ತುರ್ತು ಅವಶ್ಯಕತೆ ಪೆಟ್ರೋಲಿಯಂ ಸಂಗ್ರಹ ಸೌಲಭ್ಯ. ಚಿಕ್ಕಜಾಜೂಗು-ಮಾಯಕೊಂಡ ವಿಭಾಗದ ಜೋಡಿ ಹಳಿ ಮಾರ್ಗ ಹಾಗೂ ಧಾರವಾಡದಲ್ಲಿ ಪ್ರಧಾನಿ ಆವಾಸ್​ ಯೋಜನೆಯಡಿನಿರ್ಮಿಸಿರುವ 2,350 ಮನೆಗಳ ಇ-ಗೃಹಪ್ರವೇಶ ನೆರವೇರಿಸಿದರು.


ಸಚಿವ ಆರ್​.ವಿ. ದೇಶಪಾಂಡೆ, ಇನ್ಫೊಸಿಸ್​ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾ ಮೂರ್ತಿ ಸೇರಿ ಹಲವರು ಉಪಸ್ಥಿತರಿದ್ದರು.