ಪ್ರಧಾನಿ ಮೋದಿಯವರ 2ನೇ ಅವಧಿಯ ಮೊದಲ ಮನ್​ ಕೀ ಬಾತ್​ ಜೂ.30ಕ್ಕೆ ಫಿಕ್ಸ್​: ಸಾರ್ವಜನಿಕರೂ ಸಲಹೆ ನೀಡಬಹುದು

ನವದೆಹಲಿ: 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿಯವರು ಅಕ್ಟೋಬರ್​ನಲ್ಲಿ ಮನ್​ ಕೀ ಬಾತ್​ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದರು. ತಿಂಗಳಿಗೊಮ್ಮೆ ಆಕಾಶವಾಣಿ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಆಡಳಿತದ ಕೊನೆಯ ಮತ್ತು 53ನೇ ಮನ್​ ಕೀ ಬಾತ್​ ನಡೆಸಿ ಮುಕ್ತಾಯಗೊಳಿಸಿದ್ದರು. ದೇಶದ ಅನೇಕಾನಕ ಜನರ ಮನಗೆದ್ದ ಈ ಮನ್​ ಕೀ ಬಾತ್​ ಅನ್ನು ಮೋದಿಯವರು ಮತ್ತೆ ಈ ಬಾರಿ ಕೂಡ ನಡೆಸಲಿದ್ದು ಜೂನ್​ 30ರಂದು ಎರಡನೇ ಆವೃತ್ತಿಯ ಮೊದಲ ಕಾರ್ಯಕ್ರಮವಿದೆ.

ನರೇಂದ್ರ ಮೋದಿಯವರು ದೇಶದ ಜನರಿಗೆ ಸಂಬಂಧಪಟ್ಟ ಸಮಸ್ಯೆಗಳು, ವಿಚಾರಗಳ ಬಗ್ಗೆ ಮನ್​ ಕೀ ಬಾತ್​ದಲ್ಲಿ ಮಾತನಾಡಲಿದ್ದಾರೆ. ಹಾಗೇ ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂದು ಜನರೂ ಕೂಡ ತಿಳಿಸಬಹುದು. ಅದಕ್ಕೆ ಸಂಬಂಧಪಟ್ಟಂತೆ ಜೂ.11ರಿಂದ 26ರ ವರೆಗೆ ದೂರವಾಣಿ ಸಂಖ್ಯೆ 1800-11-7800ಗೆ ಕರೆ ಮಾಡಬಹುದು. ಅಥವಾ ಮೈ ಗವ್​ (MyGov) ವೇದಿಕೆಯಲ್ಲೂ ತಿಳಿಸಬಹುದು ಎಂದು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ನಾಗರಿಕರು ಹಾಗೂ ಕೇಂದ್ರ ಸರಕಾರದ ನಡುವೆ ಸಂಪರ್ಕ ಮಾಡಬಹುದಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿರುವ ”ಮೈ ಗವ್‌’ ವೇದಿಕೆ ಟ್ವೀಟ್​ ಮಾಡಿ ತಿಳಿಸಿದೆ.

Leave a Reply

Your email address will not be published. Required fields are marked *