ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ನಿವೃತ್ತಿ ಪಡೆದ ದಿನ ನಾನೂ ರಾಜಕೀಯ ಬಿಡುತ್ತೇನೆ: ಸ್ಮೃತಿ ಇರಾನಿ

ಪುಣೆ: ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ಕೆಲಸಗಳಿಂದ ಸರಿದು ನಿವೃತ್ತಿ ತೆಗೆದುಕೊಂಡ ದಿನ ನಾನೂ ರಾಜಕೀಯ ಬಿಡುತ್ತೇನೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಪುಣೆಯಲ್ಲಿ ವರ್ಡ್ಸ್​ ಕೌಂಟ್​ ಫೆಸ್ಟಿವಲ್​ನಲ್ಲಿ ಪ್ರೇಕ್ಷಕರೊಬ್ಬರು, ಪ್ರಧಾನಿ ಮೋದಿಯವರು ತಮ್ಮನ್ನು ತಾವು ಪ್ರಧಾನ ಸೇವಕ ಎಂದು ಕರೆದುಕೊಳ್ಳುತ್ತಾರೆ. ಆ ಹೆಸರಿನಲ್ಲಿ ನಿಮ್ಮನ್ನು ಕರೆಯುವುದು ಯಾವಾಗ, ನೀವು ಯಾವಾಗ ಪ್ರಧಾನ ಸೇವಕರಾಗುತ್ತೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಸ್ಮೃತಿ, ಅದು ಸಾಧ್ಯವಿಲ್ಲ. ನಾನು ರಾಜಕೀಯ ಪ್ರವೇಶ ಮಾಡಿದ್ದು ವರ್ಚಸ್ಸಿರುವ ನಾಯಕರ ಕೆಳಗೆ ಕೆಲಸ ಮಾಡಲು. ಅಟಲ್​ ಬಿಹಾರಿ ವಾಜಪೇಯಿ ಅವರ ಕೆಳಗೆ ಕೆಲಸ ಮಾಡಿದ್ದೇನೆ. ಈಗ ಮೋದಿಜಿ ಅವರ ಮಾರ್ಗದರ್ಶನದಲ್ಲಿ ರಾಜಕೀಯ ಕೆಲಸ ಮಾಡುತ್ತಿದ್ದೇನೆ. ಪ್ರಧಾನ ಸೇವಕರಾದ ಮೋದಿಯವರು ಯಾವಾಗ ತಮ್ಮ ಕೆಲಸದಿಂದ ನಿವೃತ್ತಿ ಹೊಂದುತ್ತಾರೋ ಅಂದು ನಾನೂ ರಾಜಕೀಯದಿಂದ ಶಾಶ್ವತವಾಗಿ ನಿವೃತ್ತಿ ಹೊಂದುತ್ತೇನೆ. ಮೋದಿಯವರು ಸುದೀರ್ಘಕಾಲ ದೇಶ ಸೇವೆಯಲ್ಲಿ ತೊಡಗುತ್ತಾರೆ ಎಂದು ನನಗೆ ಭರವಸೆಯಿದೆ ಎಂದರು.

ನಾನು ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಜೀವನವನ್ನು ದೇಶ, ಸಮಾಜ ಸೇವೆಗೆ ಮುಡಿಪಾಗಿಡುತ್ತೇನೆ. ಇದು ಸ್ವತಂತ್ರ ರಾಷ್ಟ್ರ. ಇಲ್ಲಿ ನನ್ನ ಬಗ್ಗೆ ನಾನೇ ನಿರ್ಧಾರ ಕೈಗೊಳ್ಳದಿದ್ದರೆ ಸ್ವಾತಂತ್ರ್ಯಕ್ಕೆ ಏನು ಅರ್ಥ ಎಂದು ತಿಳಿಸಿದರು.
ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ವಿರುದ್ಧ ತಾವು ಸ್ಪರ್ಧಿಸುವ ಬಗ್ಗೆ ಬಿಜೆಪಿ ಪಕ್ಷ ನಿರ್ಧಾರ ಮಾಡುತ್ತದೆ. 2014ರ ಚುನಾವಣೆ ಎದುರಿಸುವಾಗ ಸ್ಮೃತಿ ಎಂದರೆ ಯಾರು ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ನನ್ನ ಪರಿಚಯ ಅದೆಷ್ಟೋ ಜನರಿಗೆ ಗೊತ್ತಿರಲಿಲ್ಲ. ಈಗ 2019ರಲ್ಲಿ ಸ್ಮೃತಿ ಇರಾನಿ ಎಂದರೆ ಬಹುತೇಕ ಎಲ್ಲರಿಗೂ ಗೊತ್ತು ಎಂದರು.

2014ರ ಚುನಾವಣೆಯಲ್ಲಿ ಅಮೇಠಿಯಲ್ಲಿ ರಾಹುಲ್​ ವಿರುದ್ಧ ಸ್ಮೃತಿ ಸೋತಿದ್ದರು.

One Reply to “ಪ್ರಧಾನಿ ನರೇಂದ್ರ ಮೋದಿಯವರು ರಾಜಕೀಯ ನಿವೃತ್ತಿ ಪಡೆದ ದಿನ ನಾನೂ ರಾಜಕೀಯ ಬಿಡುತ್ತೇನೆ: ಸ್ಮೃತಿ ಇರಾನಿ”

  1. “UNELECTED Team of Modi “, Back-Door-Failed-Politician through Rajya Sabha, Illiterate-Matric, Smiriti Irani who has No-contact-with-masses, Nautanki Wali doing Nautanki in Politics, is rattled by Elected sitting MP, Rahul Gandhi MPhil-Trinity College London. Suffering from FEAR – PSYCHOSIS of loosing DEPOSIT in 2019 General Election.

Comments are closed.