ಉತ್ತರ ಕರ್ನಾಟಕದ ಕಾರ್ಯಕರ್ತರೊಂದಿಗೆ ಮೋದಿ ಸಂವಾದ: ರಾಜ್ಯ ಸರ್ಕಾದ ವಿರುದ್ಧ ಟೀಕೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಬೂತ್​ ಮಟ್ಟದ ಕಾರ್ಯಕರ್ತರೊಂದಿಗೆ ‘ನಮೋ ಆಪ್​’ ಮೂಲಕ ಸಂವಾದ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯ ಅಂಬಾರೈ ಗಾರ್ಡನ್‌ನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗಾವಿ, ಬೀದರ್​, ದಾವಣೆಗೆರೆ, ಧಾರವಾಡ, ಮತ್ತು ಹಾವೇರಿಯ ಬೂತ್​ ಮಟ್ಟದ ಕಾರ್ಯಕರ್ತರು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂವಾದದ ವೇಳೆ ಮೋದಿ ಅವರು ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿದರು. ಕರ್ನಾಟಕದಲ್ಲಿ ಅಧಿಕಾರದಲ್ಲಿರುವವರನ್ನು ಜನ ಗಮನಿಸುತ್ತಿದ್ದಾರೆ. ಏನು ಬೇಕಾದರೂ ಮಾಡಬಹುದು ಎಂದು ಕೊಂಡಿದ್ದಾರೆ. ಇಡೀ ಭಾರತವೇ ಅವರ ನಡವಳಿಕೆಗಳನ್ನು ನೋಡುತ್ತಿದೆ. ಅವರ ದುರಾಡಳಿತಕ್ಕೆ ಜನ ಸದ್ಯದಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ಅಲ್ಲದೆ, ” ಸ್ವಯಂ ಸೇವಕರಾಗಿ ಬರುವವರನ್ನು ಬಿಜೆಪಿಗೆ ಬರುವವರನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ. ಒಂದು ಮಹತ್ತರವಾದ ಉದ್ದೇಶಕ್ಕೆ ದುಡಿಯಲು ಬರುವವರ ಬಳಿ ನಾವು ಐಡಿ ಕಾರ್ಡ್​ ಕೇಳುವುದಿಲ್ಲ. ಕುಟುಂಬದ ಹಿಡಿತವಿಲ್ಲದ ಬಿಜೆಪಿಗೆ ಬರುವವರೆಲ್ಲ ವೃತ್ತಿಪರರು. ವೃತ್ತಿಪರರು ಬಿಜೆಪಿಗೆ ಬರುವುದು ಸಾಮಾನ್ಯ ಕೂಡ. ಬಿಜೆಪಿ ಅಭಿವೃದ್ಧಿಯ ಪರ ನಿಂತಿದೆ,” ಎಂದು ಅವರು ಹೇಳಿದರು.

ಮೋದಿ ಅವರ ಬೂತ್ ಮಟ್ಟದ ಸಂವಾದದಲ್ಲಿ ಸಂಸದ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ್​, ಮಾಜಿ ಶಾಸಕಿ ಸೀಮಾ ಮಸೂತಿ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *