ಮೈಸೂರಿನಲ್ಲಿ ಮೋದಿಯವರ ಭಾಷಣ ಸುಬ್ಬರಾಯನ ಕೆರೆ ತರಹ ಇತ್ತು: ಮಾಜಿ ಸಿಎಂ ಸಿದ್ದು ವಾಗ್ದಾಳಿ

ತುಮಕೂರು: ಯುವಕರೇ ನಿಮ್ಮಲ್ಲಿ ಕೈಜೋಡಿಸಿ ಪ್ರಾರ್ಥಿಸುತ್ತೇನೆ, ಮೋದಿ, ಮೋದಿ ಎಂದು ಹೇಳ್ಬೇಡಿ. ಅವರು ನಿಮಗೇ ಟೋಪಿ ಹಾಕಿದ್ದಾರೆ. ತಿರುಪತಿ ತಿಮ್ಮಪ್ಪನ ನಾಮ ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಜೆಡಿಎಸ್​ ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯಾಗಿ ಮೋದಿಯವರು ಏನು ಕೊಡುಗೆ ಕೊಟ್ಟಿದ್ದಾರೆ. ಅವರು ಚಿತ್ರದುರ್ಗ, ಮೈಸೂರಲ್ಲಿ ಮಾಡಿದ ಭಾಷಣ ಸುಬ್ಬರಾಯನ ಕೆರೆ ಥರ ಇತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಒಂದೂ ಮಾತನಾಡಲಿಲ್ಲ ಎಂದು ವ್ಯಂಗ್ಯವಾಡಿದರು.

ಮೋದಿಯವರು ಏನು ಮಾಡಿದ್ದಾರೆ? ಉದ್ಯೋಗ ಕೇಳಿದ ಯುವಕರ ಬಳಿ ಪಕೋಡಾ ಮಾರಲು ಹೋಗಿ ಎಂಬಂಥ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಕಳೆದ 40 ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಈ ಬಿಜೆಪಿಯವರು ಮತ ಕೇಳಲು ಹೋದಲ್ಲೆಲ್ಲ ನಮ್ಮ ಮುಖ ನೋಡಬೇಡಿ, ಮೋದಿಗಾಗಿ ವೋಟು ಹಾಕಿ ಎನ್ನುತ್ತಾರೆ. ಹಾಗಾದರೆ ಇವರ್ಯಾಕೆ ಬರುತ್ತಾರೆ. ಮೋದಿಯವರಿಗೆ ಸುಳ್ಳುಗಾರ ಎಂದರೆ ಕೋಪ ಬರುತ್ತದೆ. ಹಾಗಾದರೆ ಕಪ್ಪು ಹಣ ತಂದು ಎಲ್ಲರ ಖಾತೆಗಳಿಗೆ ದುಡ್ಡು ಹಾಕುತ್ತೇನೆ ಎಂದಿದ್ದು ಸುಳ್ಳಲ್ಲವಾ. ಮೋದಿಯವರಿಗೆ ನಾಚಿಕೆಯಾಗಬೇಕು ಎಂದು ಪ್ರಶ್ನಿಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡುವಂತೆ ಕೈಮುಗಿದು ಕೇಳಿಕೊಂಡಿದ್ದೆ. ಆಗ ಬಿಜೆಪಿ ನಾಯಕರೂ ಅಲ್ಲಿಯೇ ಇದ್ದರು. ಆದರೆ ಆ ದುರಾತ್ಮನಿಗೆ ಮನಸು ಕರಗಲೇ ಇಲ್ಲ. ಮಾತೆತ್ತಿದರೆ ನನಗೆ 56 ಇಂಚು ಎದೆ ಇದೆ ಎಂದು ಹೇಳುತ್ತಾರೆ. ಬಾಡಿ ಬಿಲ್ಡರ್​ಗಳಿಗೆ 90 ಇಂಚಿನ ಎದೆ ಇರುತ್ತದೆ. ಆದರೆ ಅಷ್ಟು ದೊಡ್ಡ ಎದೆ ಇದ್ದರೆ ಸಾಲದು, ಅದರೊಳಗೆ ತಾಯಿ ಹೃದಯವೂ ಇರಬೇಕು ಎಂದು ಟೀಕಿಸಿದರು.

ದೇವೇಗೌಡರ ಹೋರಾಟ

ರಾಜ್ಯದ ಜನರ ಹಿತಕ್ಕಾಗಿ ದೇವೇಗೌಡರು ಹೋರಾಟ ನಡೆಸಿದ್ದಾರೆ. ಅವರು, ನಾನು ಒಟ್ಟಿಗೇ ರಾಜಕಾರಣ ಮಾಡಿದ್ದೇವೆ. ಅವರು ನೀರಾವರಿ ಬಗ್ಗೆ ಅಪಾರ ಕಾಳಜಿ ವಹಿಸಿ ಕೆಲಸ ಮಾಡಿದ್ದಾರೆ. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಎಐಬಿಪಿ ಸ್ಕೀಂ ನಿಲ್ಲಿಸಿದ್ದಾರೆ. ಕರ್ನಾಟಕದ ಯೋಜನೆಗಳಿಗೆ ಕೇಂದ್ರದಿಂದ ಹಣ ಬರುತ್ತಿಲ್ಲ ಎಂದು ಆರೋಪಿಸಿದರು.

2 Replies to “ಮೈಸೂರಿನಲ್ಲಿ ಮೋದಿಯವರ ಭಾಷಣ ಸುಬ್ಬರಾಯನ ಕೆರೆ ತರಹ ಇತ್ತು: ಮಾಜಿ ಸಿಎಂ ಸಿದ್ದು ವಾಗ್ದಾಳಿ”

 1. Mr. Nidramaiah,

  Young Indians are aware of difference between you and Leader who is working for building new India on 24 x 365 x 5 for basis. Your advice for them may not required.

  Please let me know what is your development agenda/ blue print for Building India to 5 Trillion economy in next five years and who is your Prime Minister ?.

  what is your plan to build infrastructure, public transports, ports, airports and road etc

  how you provide Rs.72 k/Annum with out increasing taxes and balance the GDP and continue the existing schemes which are helping millions of poor.
  Do have a system to bifurcate 25 % of poor people and distribute the same. What is the % you are expecting out of that ?.

 2. You are spreading lies and venom in Hindu society. You are a nut sharing seat with Devegowda. You can even sell everthing for

Comments are closed.