ಪ್ರಧಾನಿ ಮೋದಿ ಪೊಳ್ಳು ಭರವಸೆ ನೀಡುತ್ತಾರೆ ಹೊರತು ದೇಶಕ್ಕಾಗಿ ಏನೂ ಮಾಡುವುದಿಲ್ಲ: ಚಂದ್ರಬಾಬು ನಾಯ್ಡು

ಅಮರಾವತಿ: ಪ್ರಧಾನಿ ನರೇಂದ್ರ ಮೋದಿಯವರು ಪೊಳ್ಳು ಭರವಸೆಯನ್ನು ಕೊಡುವ ಮನುಷ್ಯನೇ ಹೊರತು ದೇಶಕ್ಕಾಗಿ ಏನನ್ನೂ ಮಾಡಲಿಲ್ಲ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಾಗ್ದಾಳಿ ನಡೆಸಿದರು.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಸಂಸತ್ತಿನಲ್ಲಿ ಭರವಸೆ ನೀಡಿದ್ದ ಮೋದಿ ಸರ್ಕಾರ ಕಡೆಗೆ ಅದನ್ನು ನಿರಾಕರಿಸಿತು ಎಂದು ಅವರು ಆರೋಪಿಸಿದರು.

ಮೋದಿಯವರು ದೇಶಕ್ಕಾಗಿ ಏನೂ ಮಾಡಿಲ್ಲ. ಅದು ಬಿಡಿ ಗುಜರಾತ್​ನಲ್ಲಿ 12 ವರ್ಷ ಮುಖ್ಯಮಂತ್ರಿಯಾಗಿದ್ದರು. ಅವರದ್ದೇ ರಾಜ್ಯವಾದರೂ ಅಲ್ಲಿ ಕೂಡ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಆದರೆ ದೇಶದ ಜನರು, ಮೋದಿಯವರು ತುಂಬ ಕೆಲಸಗಳನ್ನು ಮಾಡಿದ್ದಾರೆ, ಕೊಡುಗೆ ಕೊಟ್ಟಿದ್ದಾರೆ ಎಂದು ನಂಬಿಕೊಂಡು ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಂಧ್ರಪ್ರದೇಶದ ಮರುಸಂಘಟನಾ ಕಾಯ್ದೆ-2014 ಹಾಗೂ ಅಮರಾವತಿಯಲ್ಲಿ ಸಂಪರ್ಕ ಸೌಕರ್ಯದ ಅನುಷ್ಠಾನಕ್ಕೆ ಸಂಬಂಧಪಟ್ಟ ಶ್ವೇತಪತ್ರವನ್ನೂ ಈ ವೇಳೆ ಬಿಡುಗಡೆ ಮಾಡಿದ ಚಂದ್ರಬಾಬು ನಾಯ್ಡು, ನರೇಂದ್ರ ಮೋದಿಯವರು ಏನೋ ಮಾಡುತ್ತಾರೆ ಎಂದು ನಾವೆಲ್ಲ ನಂಬಿಕೊಂಡಿದ್ದೆವು. ಆದರೆ ಅಷ್ಟೂ ಭರವಸೆ ಬರೀ ಸುಳ್ಳು ಎಂದು ಹೇಳಿದರು.

ತಾವೇ ದೊಡ್ಡ ನಾಯಕ ಎಂಬರ್ಥದಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಚುನಾವಣೆಗಳಿಗಾಗಿ ಟನ್​ಗಟ್ಟಲೆ ಹಣ ಸುರಿಯುತ್ತಿದ್ದಾರೆ. ದೇಶವನ್ನು ಹಾಳುಗೆಡವುತ್ತಿದ್ದಾರೆ ಎಂದರು. ಹಾಗೇ ರಫೇಲ್​ ಡೀಲ್​ ವಿಚಾರದಲ್ಲಿ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟ್​ಗೇ ಗ್ರಾಮರ್​ ಹೇಳಿಕೊಡಲು ಮುಂದಾಗಿತ್ತು. ಇಂಥವರನ್ನೆಲ್ಲ ಏನೆಂದು ಕರೆಯಬೇಕು ಎಂದು ಟೀಕಿಸಿದರು.

2 Replies to “ಪ್ರಧಾನಿ ಮೋದಿ ಪೊಳ್ಳು ಭರವಸೆ ನೀಡುತ್ತಾರೆ ಹೊರತು ದೇಶಕ್ಕಾಗಿ ಏನೂ ಮಾಡುವುದಿಲ್ಲ: ಚಂದ್ರಬಾಬು ನಾಯ್ಡು”

  1. ಈ ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶಕ್ಕೆ ಏನೂ ಮಾಡಿಲ್ಲಾ, ಆದರೂ ಮುಖ್ಯಮಂತ್ರಿ ಆಗಿದ್ದಾರೆ. ನಾಚಿಕೆ ಆಗ ಬೇಕು, ಕೋಟಿಗಟ್ಟಲೆ ದುಡ್ಡುಮಾಡಿ, ಮೋದಿಯವರ ಬಗ್ಗೆ ಮಾತನಾಡುವ ಈ ಚಂದ್ರಬಾಬು ನಾಯ್ಡು ಗೆ ಮೋದಿಯವರ ಉಗುರಿನ ಯೋಗ್ಯತೆಯಿಲ್ಲ, ಅವರು ಮಾಡುವ ಕಮೆಂಟ್ಸ ಪ್ರಕಟಿಸಬೇಡಿ ಮತ್ತು ಸೋಲ್ಡ ಮೀಡಿಯಾ ಅನ್ನಿಸಿಕೊಳ್ಳಬೇಡಿ.
    ನಾನು ನಿಮ್ಮ ಪತ್ರಿಕೆಯ ಅಭಿಮಾನಿ.

  2. ಮಾನ್ಯ ಚಂದ್ರ ಬಾಬುನಾಯ್ಡುರವರೆ ನಿವು ಅಧಿಕಾರದಿಂದ ಸುಖವನ್ನು ಅನುಭವಿಸಲು ಬಂದ್ದಿದಿರಿ ಹೊರತು ದೇಶದ ಅಭಿವೃದ್ಧಿಗಲ್ಲಾ ನಿಮಗೆ ದೇಶದ ರಾಜಕೀಯದ ಬಗ್ಗೆ ಅನುಭವ ಕಡಿಮೆ

Comments are closed.