ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜನೆ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ ನಿಮಿತ್ತ ಬಿಜೆಪಿ ನಗರ ಘಟಕ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ‘ಸೇವಾ ಸಪ್ತಾಹ’ ದಂಗವಾಗಿ ಸೆ.17ರಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಜಿಲ್ಲಾಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಹಣ್ಣು ಹಾಗೂ ಬಿಸ್ಕತ್ ವಿತರಿಸಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆ ಮೇರೆಗೆ ಈ ವರ್ಷವೂ ಸೇವಾ ಸಪ್ತಾಹ ಪ್ರಾರಂಭಿಸಲಾಗಿದೆ. ಈ ಸಪ್ತಾಹ ಯಶಸ್ವಿಗೊಳಲು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಅನೀಲ ಜಮಾದಾರ ಅವರನ್ನು ಜಿಲ್ಲಾ ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ಆಯಾ ಮಂಡಲ ಅಧ್ಯಕ್ಷ ಹಾಗೂ ಪ್ರಮುಖರೊಂದಿಗೆ ಸಮಾಲೋಚಿಸಿ ಜಿಲ್ಲೆಯ ವಿವಿಧ ಮಂಡಲಗಳಿಗೆ ಸಂಚಾಲಕ ಹಾಗೂ ಸಹಸಂಚಾಲಕರನ್ನು ನೇಮಿಸಲಾಗಿದೆ.
ಇಂಡಿ ಮಂಡಲ- ಸಂಚಾಲಕರಾಗಿ ಸತೀಶ ಕುಂಬಾರ, ಸಹಸಂಚಾಲಕರಾಗಿ ಮಲ್ಲಿಕಾರ್ಜುನ ಡಂಗೆ, ಸಿಂದಗಿ ಮಂಡಲ ಸಂಚಾಲಕರಾಗಿ ಸಿದ್ದಲಿಂಗಯ್ಯ ಹಿರೇಮಠ, ಸಹಸಂಚಾಲಕರಾಗಿ ಸಿದ್ದರಾಮ ಆನಗೊಂಡ, ಚಡಚಣ ಮಂಡಲ ಸಂಚಾಲಕರಾಗಿ ಶ್ರೀಮಂತ ಉಮರಾಣಿ, ಸಹಸಂಚಾಲಕರಾಗಿ ಮಹಾದೇವ ಬಗಲಿ, ದೇ. ಹಿಪ್ಪರಗಿ ಮಂಡಲ ಸಂಚಾಲಕರಾಗಿ ಪ್ರಕಾಶ ಯರನಾಳ, ಸಹ ಸಂಚಾಲಕರಾಗಿ ಮಹಾಂತೇಶ ಮನಗೂಳಿ, ಬಬಲೇಶ್ವರ ಮಂಡಲ ಸಂಚಾಲಕರಾಗಿ ಸಂಗಮೇಶ ತಿಮಶೆಟ್ಟಿ, ಸಹ ಸಂಚಾಲಕರಾಗಿ ಮೋಹನ ನಾಯಕ, ವಿಜಯಪುರ ಮಂಡಲ ಸಂಚಾಲಕರಾಗಿ ಪಾಪುಸಿಂಗ್ ರಜಪೂತ, ಸಹ ಸಂಚಾಲಕರಾಗಿ ರಾಜೇಶ ತಾವಸೆ, ಮುದ್ದೇಬಿಹಾಳ ಸಂಚಾಲಕರಾಗಿ ಅಶೋಕ ರಾಠೋಡ, ಸಹ ಸಂಚಾಲಕರಾಗಿ ಮಂಜುನಾಥ ಚಲವಾದಿ, ಬ. ಬಾಗೇವಾಡಿ ಸಂಚಾಲಕರಾಗಿ ಸುರೇಶ ಗುಂಡಿ, ಸಹ ಸಂಚಾಲಕರಾಗಿ ಅಮರಯ್ಯ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ನರೇಂದ್ರ ಮೋದಿಯವರು ಅತ್ಯಂತ ಆತ್ಮೀಯ ವ್ಯಕ್ತಿ, ಮಗುವಿನಿಂದ ಹಿಡಿದು ವೃದ್ಧರವರೆಗೂ ಪರಿಚಯವಿರುವ ಏಕ ಮಾತ್ರ ಪ್ರಧಾನಿ ಎಂದು ಹೇಳಿದರು.
ನಗರ ಘಟಕದ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ, ಪ್ರಧಾನಿ ಮೋದಿಯವರ ಜನ್ಮದಿನ ನಿಮಿತ್ತ ನಗರ ಘಟಕ, ಯುವ ಮೋರ್ಚಾ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಂಯುಕ್ತಾಶ್ರಯದಲ್ಲಿ ಸೆ. 17ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಚಿದಾನಂದ ಚಲವಾದಿ, ಭೀಮಾಶಂಕರ ಹದನೂರ, ಜಿ.ಪಂ. ಸದಸ್ಯ ನವೀನ ಅರಕೇರಿ, ರಾಹುಲ್ ಜಾಧವ, ಮಲ್ಲಮ್ಮ ಜೋಗೂರ, ಗೀತಾ ಕುಗನೂರ, ಪ್ರಮೋದ ಬಡಿಗೇರ, ಬಸವರಾಜ ಬೈಚಬಾಳ, ಪಾಪುಸಿಂಗ್ ರಜಪೂತ, ಉಮೇಶ ವಂದಾಲ, ರಾಜು ವಾಲಿ, ಕಾಂತು ಸಿಂಧೆ, ಶಿವಾನಂದ ರೇಶ್ಮಿ, ಮಂಜುಳಾ ಅಂಗಡಿ, ರಜನಿ ಸಂಬಣ್ಣಿ, ವಿಜಯ ಜೋಶಿ, ರಾಜೇಶ ತಾವಸೆ, ಕೃಷ್ಣ ಗುನ್ಹಾಳಕರ, ಜಗದೀಶ ಮುಚ್ಚಂಡಿ, ಗುರುರಾಜ ದೇಶಪಾಂಡೆ, ಸಂತೋಷ ಭೊವಿ, ರವಿ ಕಿತ್ತೂರ, ವಿನಾಯಕ ದಹಿಂಡೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *