ಮೋದಿ ಮಾತಿನಿಂದ ಕಾಯಿ ಉದುರೋದಿಲ್ಲ, ಕಲ್ಲೇ ಹೊಡೆಯಬೇಕು ಎಂದ್ರು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​

ಬಾಗಲಕೋಟೆ: ಮಂತ್ರದಿಂದಾಗಲೀ, ಪ್ರಧಾನಿ ಮೋದಿಯವರ ಭಾಷಣದಿಂದಾಗಲೀ ಮಾವಿನಕಾಯಿ ಉದುರುವುದಿಲ್ಲ, ಕಲ್ಲು ಹೊಡೆದರೆ ಮಾತ್ರ ಬೀಳುತ್ತದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದಾರೆ.
ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿಯವರ ಅಪ್ಪನಂತೆ ಮಾತನಾಡಲು ನಮಗೂ ಬರುತ್ತದೆ. ಆದರೆ ಆ ಮಾತುಗಳಿಂದ ಕಾಯಿ ಬೀಳೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಬಿಜೆಪಿಗೆ ಅಭ್ಯರ್ಥಿಯೇ ಸಿಗಲಿಲ್ಲ. ನನಗೆ ಸಂಸದೆ ಆಗಬೇಕು ಎಂಬ ಆಸೆಯಿದೆ. ಆದರೆ ಮೋದಿ ಗಾಳಿಯಲ್ಲಿ ಕಳೆದ ಸಲ ನಾನು ಸೋತೆ. ನನ್ನ ಆಸೆ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಳ್ಳಿ. ಈ ಕ್ಷೇತ್ರದ ಅಭ್ಯರ್ಥಿ, ನನ್ನ ತಂಗಿ ವೀಣಾ ಕಾಶಪ್ಪನವರನ್ನು ಗೆಲ್ಲಿಸಿ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ 15 ವರ್ಷ ಬಿಜೆಪಿ ಹಿರಿಯ ನಾಯಕರ ಹೆಸರಲ್ಲೇ ಗೆದ್ದಿದ್ದಾರೆ. ಒಮ್ಮೆ ವಾಜಪೇಯಿ, ಯಡಿಯೂರಪ್ಪ, ಮೋದಿ ಹೆಸರಲ್ಲಿ ಇಲ್ಲಿ ಗೆಲುವಾಗಿದೆ. ಆದರೆ ಗೆದ್ದವರು ಈ ಕ್ಷೇತ್ರಕ್ಕೆ ಕೈಗಾರಿಕೆ, ಉದ್ಯೋಗ ತರಲಿಲ್ಲ ಎಂದು ಹೇಳಿದರು.