ಮೋದಿ, ಮೋದಿ ಎನ್ನುತ್ತ ಬರುವವರ ದವಡೆಗೆ ಹೊಡೆಯಿರಿ ಎಂದ ಜೆಡಿಎಸ್​ ಶಾಸಕ ಶಿವಲಿಂಗೇಗೌಡ

ಹಾಸನ: ಬಿಜೆಪಿ ಮತ್ತು ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ಅರಸೀಕೆರೆ ಜೆಡಿಎಸ್​ ಶಾಸಕ ಶಿವಲಿಂಗೇಗೌಡ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ಮೋದಿ ಎಂದು ಹೇಳುತ್ತ ಬರುವವರ ದವಡೆಗೆ ಎತ್ತಿ ಹೊಡೆಯಬೇಕು ಎಂದು ಸಾರ್ವಜನಿಕ ಭಾಷಣದಲ್ಲಿ ಕಾರ್ಯಕರ್ತರಿಗೆ ಹೇಳಿದ್ದಾರೆ.

ಅರಸೀಕೆರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮೋದಿಯವರು ದೊಡ್ಡ ರಾಜಕಾರಣಿ. ಆದರೆ ಚುನಾವಣೆ ಪೂರ್ವದಲ್ಲಿ ರೈತರಿಗೆ ಕೊಟ್ಟ ವಾಗ್ದಾನ ಏನಾಯಿತು ಎಂದು ಹೇಳಿದರು.

ಮೋದಿ ಎಂದು ಹೇಳುತ್ತ ಬರುವ ಬಿಜೆಪಿಯವರ ಬಳಿ ನೀವೆಲ್ಲ ಪ್ರಶ್ನಿಸಬೇಕು. ಕಪ್ಪು ಹಣ ವಾಪಸ್​ ತರುತ್ತೇನೆ ಎಂದರು, ಆ ಹಣ ಎಲ್ಲಿ ಹೋಯಿತು? ಬಡವರ ಖಾತೆಗೆ 15 ಲಕ್ಷ ರೂಪಾಯಿ ಬಂತಾ? ಕಳ್ಳದುಡ್ಡು ತರಲು ನೋಟ್​ ಬ್ಯಾನ್​ ಮಾಡಿದರು. ಅದರಿಂದ ಏನಾದರೂ ಉಪಯೋಗವಾಗಿದೆಯಾ? ಎಂದು ಅವರ ಬಳಿಯೇ ಕೇಳಬೇಕು ಎಂದರು.