ಮೋದಿ, ಟ್ರಂಪ್​ ಫೋನ್​ನಲ್ಲಿ ಚರ್ಚೆ: ವ್ಯಾಪಾರ ಅಭಿವೃದ್ಧಿ, ಆಫ್ಘನ್​ಗೆ ಸಹಕಾರ ಮಾತುಕತೆ

ವಾಷಿಂಗ್ಟನ್​: ಭಾರತದೊಂದಿಗಿನ ಅಮೆರಿಕದ ವ್ಯಾಪಾರ ವೃದ್ಧಿ ಹಾಗೂ ಅಫ್ಘಾನಿಸ್ತಾನಕ್ಕೆ ಹೆಚ್ಚಿನ ಸಹಕಾರ ನೀಡುವ ಬಗ್ಗೆ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಟೆಲಿಫೋನ್​ನಲ್ಲಿ ಚರ್ಚಿಸಿದ್ದಾರೆ ಎಂದು ವೈಟ್​ ಹೌಸ್​ ತಿಳಿಸಿದೆ.

ಯುಎಸ್​ ಹಾಗೂ ಭಾರತದ ನಡುವೆ ಯುದ್ಧತಂತ್ರದ ಪಾಲುದಾರಿಕೆಯನ್ನು 2019ರಲ್ಲಿ ಬಲಗೊಳಿಸುವ ಬಗ್ಗೆ ಮತ್ತು ಯುಎಸ್​ ಹಾಗೂ ಭಾರತದ ಮಧ್ಯೆಯ ವ್ಯಾಪಾರ ಪ್ರಮಾಣ ಕಡಿಮೆಯಾಗುತ್ತಿರುವುದನ್ನು ತಡೆದು ಅದನ್ನು ಹೆಚ್ಚಿಸುವ ಕುರಿತು, ಇಂಡೋ-ಫೆಸಿಫಿಕ್​ನಲ್ಲಿ ಭದ್ರತೆ, ಅಭಿವೃದ್ಧಿ ಸೇರಿ ಮತ್ತಿತರ ವಿಷಯಗಳ ಬಗ್ಗೆ ಎರಡೂ ದೇಶಗಳ ಮುಖಂಡರು ಚರ್ಚೆ ನಡೆಸಿದ್ದಾರೆ.

ಭಾರತದಿಂದ ಆಮುದು ಆಗುವ ಸ್ಟೀಲ್​ ಮತ್ತು ಅಲ್ಯುಮಿನಿಯಂ ಮೇಲೆ ಯುಎಸ್​ ಸುಂಕವನ್ನು ವಿಧಿಸಿತ್ತು. ಇದು ಯುಎಸ್​ನಲ್ಲಿ ಆದಾಯಕ್ಕಿಂತ ಹೆಚ್ಚಾದ ಖರ್ಚು ತಗ್ಗಿಸಲು ಮತ್ತು ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸಲು ಟ್ರಂಪ್​ ಕೈಗೊಂಡ ನಿರ್ಧಾರವಾಗಿತ್ತು.