ಅನುಚಿತ ವರ್ತನೆ, ಶಿಕ್ಷಕನಿಗೆ ಥಳಿತ

ಬಾದಾಮಿ: ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕನಿಗೆ ತಾಲೂಕಿನ ಕಲಬಂದಕೇರಿ ಗ್ರಾಮಸ್ಥರು ಮಂಗಳವಾರ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಮಚಂದ್ರ ಪಿ.ಎಂ. ಥಳಿತಕ್ಕೊಳಗಾದವರು. ಈ ಹಿಂದೆಯೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಕನಿಗೆ ಎಸ್​ಡಿಎಂಸಿ ಅಧ್ಯಕ್ಷರು, ಸದ ಸ್ಯರು ಹಾಗೂ ಪಾಲಕರು ಹಲವು ಬಾರಿ ಬುದ್ಧಿವಾದ ಹೇಳಿದ್ದರು. ಮಂಗಳವಾರ ಪಾಠ ಮಾಡುವಾಗ ಮಕ್ಕಳೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದನ್ನು ವಿದ್ಯಾರ್ಥಿನಿಯರು ಪಾಲಕರಿಗೆ ತಿಳಿಸಿದ್ದು, ಇದರಿಂದ ಆಕ್ರೋಶ ಗೊಂಡ ಗ್ರಾಮಸ್ಥರು ಶಾಲೆಗೆ ತೆರಳಿ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ಶಿಕ್ಷಕನ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಒತ್ತಾಯಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಿಆರ್​ಪಿ ಎಂ.ಎಚ್.ಗಂಗಲ ಹಾಗೂ ಹಿರೇಮಠ ಘಟನೆ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ನಾಗಪ್ಪ ನಂದ್ಯಾಳ, ಕೋನಪ್ಪ ಆಡಗಲ್ಲ, ಭೀಮನಗೌಡ ನಾಯ್ಕರ, ಕಾಳವ್ವ ಬಡಿಗೇರ, ಲಕ್ಷ್ಮಣ ನಾಯ್ಕರ, ಯಂಕಣ್ಣ ಆಡಗಲ್ಲ, ಶ್ರೀಶೈಲ ಅಂಗಡಿ, ಗೋವಿಂದಪ್ಪ ತುಳಸಿಗೇರಿ, ಲಾಯಪ್ಪ ತುಳಸಿಗೇರಿ, ಲಾಯಪ್ಪ ನಂದ್ಯಾಳ, ಹನುಮಂತ ಪಡಿ ಮನಿ, ಲಾಯಪ್ಪ ಕುಟಕನಕೇರಿ, ರಂಗಪ್ಪ ಗೌಡರ, ಬರಮಪ್ಪ ನಂದ್ಯಾಳ, ವಿಠಲ ಕಲಾದಗಿ, ತಿಪ್ಪಣ್ಣ ನಂದ್ಯಾಳ ಇದ್ದರು.

ಕಲಬಂದಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಮಚಂದ್ರ ಪಿ.ಎಂ. ವಿದ್ಯಾರ್ಥಿ ನಿಯರ ಜತೆ ಅಸಭ್ಯವಾಗಿ ವರ್ತಿಸಿ ರುವುದು ಗಮನಕ್ಕೆ ಬಂದ ತಕ್ಷಣ ಅವರನ್ನು ಅಮಾನತು ಮಾಡಲಾಗಿದೆ.

| ಎ.ಎಸ್.ಹತ್ತಳ್ಳಿ ಬಿಇಒ