ಮಹಾಲಿಂಗಪುರ: ಪ್ರಾಥಮಿಕ ಶಿಕ್ಷಣವು ವಿದ್ಯಾರ್ಥಿ ಜೀವನದ ಅಡಿಪಾಯವಾಗಿದೆ. ಇದು ಯಶಸ್ಸಿನ ಪ್ರಮುಖ ಸಾಧನವಾಗಿದೆ ಎಂದು ಪಿಎಸ್‌ಐ ಮಧು ಎಸ್. ಹೇಳಿದರು.
ಬನಶಂಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರದ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ. ವಿದ್ಯಾರ್ಥಿನಿಯರಿಗೆ ಯಾರಾದರೂ ತೊಂದರೆ ನೀಡಿದರೆ ಸಹಾಯವಾಣಿ 1098 ಗೆ ಕರೆ ಮಾಡಿ. ಕೂಡಲೇ ಪೊಲೀಸ್ ಸಿಬ್ಬಂದಿ ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ ಎಂದರು.
ಪತ್ರಕರ್ತ ಜಯರಾಮ ಶೆಟ್ಟಿ, ಲಕ್ಷ್ಮಣ ಕಿಶೋರ, ನಾರನಗೌಡ ಉತ್ತಂಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶೇಖರ ಅಂಗಡಿ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಎಸ್.ಎಸ್. ಈಶ್ವರಪ್ಪಗೋಳ, ಮಹೇಶ ಆರಿ, ಹಣಮಂತ ನಾವಿ, ರಂಗಣ್ಣಗೌಡ ಪಾಟೀಲ, ಅರುಣಾ ಅಂಗಡಿ, ಅರ್ಚನಾ ಕಡಪಟ್ಟಿ, ಡಾ.ಮೀನಾಕ್ಷಿ ಹುಬ್ಬಳ್ಳಿ, ರತ್ನಾ ಗೌಡರ, ಶಿವಲೀಲಾ ಹಿರೇಮಠ, ಅನ್ನಪೂರ್ಣಾ ಚಿಚಖಂಡಿ, ಮಂಜುಳಾ ನಾಶಿ, ಸುವರ್ಣಾ ಕರೆಹೊನ್ನ, ಜಯಶ್ರೀ ಹುಬ್ಬಳ್ಳಿ, ವಿಜಯಶ್ರೀ ಕುಲಕರ್ಣಿ, ಸುಧಾ ಮೂಡಲಗಿ, ಜ್ಯೋತಿ ಕಾಡೇ ಮತ್ತಿತರರಿದ್ದರು. ಜಯಶ್ರೀ ಸೋನೊನೆ ನಿರೂಪಿಸಿದರು.