ಅಯೋಧ್ಯೆಯ ಪ್ರಧಾನ ಅರ್ಚಕನಿಂದ ನಿರಂತರ ಅತ್ಯಾಚಾರ, ಆರೋಪಿ ಬಂಧನ

ಅಯೋಧ್ಯ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ವ್ಯಾಪಕ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಅಲ್ಲಿನ ದೇವಸ್ಥಾನವೊಂದರ ಪ್ರಧಾನ ಅರ್ಚಕ ಮಹಿಳಾ ಭಕ್ತೆಯನ್ನು ತನ್ನ ವಶದಲ್ಲಿಟ್ಟುಕೊಂಡು ನಿರಂತರ ಅತ್ಯಾಚಾರವೆಸಗಿದ್ದಾನೆ.

ಘಟನೆ ಸಂಬಂಧ ಸಂತ್ರಸ್ತೆ ನೀಡಿರುವ ದೂರನ್ನು ಆಧರಿಸಿ ಪೊಲೀಸರು ಪ್ರಧಾನ ಅರ್ಚಕನನ್ನು ಬಂಧಿಸಿದ್ದಾರೆ
30 ವರ್ಷದ ಮಹಿಳೆಯು ವಾರಾಣಸಿಯಿಂದ ಡಿ. 24ರಂದು ಅಯೋಧ್ಯೆಯ ಮಹಾಂತ ದೇಗುಲದ ಮುಖ್ಯ ಅರ್ಚಕ ಕೃಷ್ಣ ಕಾಂತಾಚಾರ್ಯರಿಂದ ಆಧ್ಯಾತ್ಮಕ ಪ್ರವಚನ ಕೇಳಲು ಬಂದಿದ್ದರು.

ಈ ವೇಳೆ ಪ್ರವಚನ ಕೇಳಲು ಬಂದಿದ್ದ ಮಹಿಳೆಯನ್ನು ದೇವಾಲಯದ ಆವರಣದಲ್ಲೇ ಉಳಿಯುವಂತೆ ಸೂಚಿಸಿದ ಅರ್ಚಕ ಆಕೆಯನ್ನು ಒತ್ತೆಯಾಳಾಗಿಟ್ಟುಕೊಂಡು ಹಲವು ಬಾರಿ ಅತ್ಯಾಚಾರವೆಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಮಹಿಳೆಯು ಆತನ ಕಣ್ತಪ್ಪಿಸಿ ಹೇಗೋ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿ ಅರ್ಚಕನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)