ಮಸ್ಕಿ: ಇಂಧನ ಬೆಲೆ ಏರಿಕೆ ಖಂಡಿಸಿ ಸಿಪಿಐಎಂಎಲ್ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಅರಮನೆ ಸುಧಾ ಅವರಿಗೆ ಸಲ್ಲಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಹೊಸ ಸಂಶೋಧನೆಗೆ ಇಳಿದಿದ್ದಾರೆ: ವಿಪಕ್ಷ ನಾಯಕ ಆರ್. ಅಶೋಕ ವ್ಯಂಗ್ಯ
ಸಿಪಿಐಎಂಎಲ್ ಸಂಘಟನೆ ತಾಲೂಕು ಕಾರ್ಯದರ್ಶಿ ಗಂಗಪ್ಪ ಮಾತನಾಡಿ ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆಯಿಂದ ಆಹಾರ ಧಾನ್ಯ ಮತ್ತು ಇತರೆ ವಸ್ತುಗಳ ದರಗಳು ಏರಿವೆ. ಇದರಿಂದಾಗಿ ಹಣದುಬ್ಬರವಾಗಿದೆ.
ಮುಂಗಾರು ಮಳೆ ಕಣ್ಣು ಮುಚ್ಚಾಲೆಯಿಂದಾಗಿ ಬೆಳೆಗಳ ಮೇಲೆ ದುಷ್ಪಪರಿಣಾಮ ಬೀರಲಿದ್ದು ಕೂಡಲೇ ಸರ್ಕಾರ ಎಚ್ಚತ್ತುಕೊಂಡು ದರ ಇಳಿಕೆ ಮಾಡುವಂತೆ ಒತ್ತಾಯಿಸಿದರು. ಚಾಂದಸಾಬ ಬೆಳ್ಳಿಗನೂರು, ಬಸವರಾಜ ಹಿರೇದಿನ್ನಿ, ಹನುಮಂತ ದೀನಸಮುದ್ರ, ರಾಮಣ್ಣ ಮಸ್ಕಿ ಇದ್ದರು.