ಗ್ರಾಹಕನಿಗೆ ಮತ್ತೆ ಕಣ್ಣೀರು ತರಿಸುವುದೇ ಈರುಳ್ಳಿ?

ಸುರೇಶ ಲಮಾಣಿ, ದಾವಣಗೆರೆ
ಕಳೆದೊಂದು ತಿಂಗಳಿಂದ ಸುರಿದ ಸತತ ಮಳೆಯಿಂದ ಬೆಂದಿದ್ದ ಗ್ರಾಹಕರಿಗೆ ದಿನೇ ದಿನೆ ಏರುತ್ತಿರುವ ಈರುಳ್ಳಿ ಮತ್ತೊಮ್ಮೆ ಕಣ್ಣೀರು ತರಿಸುವ ಲಕ್ಷಣಗಳಿವೆ

ಹೌದು… ಕಳೆದ ಎರಡು ವಾರದಿಂದ ಗಗನಮುಖಿಯಾಗಿರುವ ಈರುಳ್ಳಿ ಇದೀಗ ಕೆಜಿಗೆ 50 ರೂ. ಸನಿಹವಿದೆ.

ನಿರಂತರ ಮಳೆ ಪ್ರಭಾವದಿಂದ ಈರುಳ್ಳಿ ಬೆಳೆಗೆ ಶೀತಬಾಧೆ ತಗುಲಿ ಹಾನಿಯಾದರೆ, ಮತ್ತೊಂದೆಡೆ ಈರುಳ್ಳಿ ಶೀತ ವಾತಾವರಣಕ್ಕೆ ಮೊಳಕೆಯೊಡೆದು ಹಾಳಾಗುತ್ತಿದೆ. ಇದರಿಂದ ಈರುಳ್ಳಿ ಆಮದು ಕಡಿಮೆಯಾಗಿ ಸಹಜವಾಗಿ ಬೆಲೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೂರರ ಗಡಿ ದಾಟಿದರೂ ಅಚ್ಚರಿಯಿಲ್ಲ ಎನ್ನುತ್ತಾರೆ ವ್ಯಾಪಾರಸ್ಥರು.


ಈಗಾಗಲೇ ಹೊರರಾಜ್ಯಗಳಿಂದ ನಾಸಿಕ್ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೂ, ಮಾರುಕಟ್ಟೆಗೆ ಸ್ಥಳೀಯ ಈರುಳ್ಳಿ ಬರಲು ಕನಿಷ್ಠ ಎರಡ್ಮೂರು ತಿಂಗಳು ಬೇಕು. ಹಾಗಾಗಿ, ಅಲ್ಲಿವರೆಗೂ ದರ ಇಳಿಯುವುದು ಅನುಮಾನ ಎನ್ನಲಾಗುತ್ತಿದೆ.

ಜೂನ್ ತಿಂಗಳಲ್ಲಿ 20- 25 ರೂ. ಇದ್ದ ಈರುಳ್ಳಿ ಆಗಸ್ಟ್ ಮೊದಲ ವಾರದಲ್ಲಿ ದಿಢೀರ್ ಏರಿಕೆಯಾಗಿ ಕೆಜಿಗೆ 40-50 ರೂ. ತಲುಪಿದೆ.

ಹೋಟೆಲ್‌ಗಳಲ್ಲಿ ಈರುಳ್ಳಿ ಇಲ್ಲದೆ ತಿಂಡಿ, ತಿನಿಸು ಮಾಡಲಾಗುವುದಿಲ್ಲ. ಆದರೆ, ಸತತ ಬೆಲೆ ಏರಿಕೆಯಿಂದ ವ್ಯಾಪಾರ ನಡೆಸುವುದೇ ಕಷ್ಟವಾಗಿದೆ. ಆದರೆ, ದರ ಹೆಚ್ಚಳ ಮಾಡಿದರೆ ಗ್ರಾಹಕರ ಸಂಖ್ಯೆ ಇಳಿಮುಖವಾಗುತ್ತದೆ. ಆದ್ದರಿಂದ ಅನಿವಾರ್ಯವಾಗಿ ಈರುಳ್ಳಿ ಖರೀದಿಸಿ ಬಳಸಬೇಕಿದೆ ಎಂದು ಅಲವತ್ತುಕೊಳ್ಳುತ್ತಾರೆ ನಗರದ ರಾಂ ಆ್ಯಂಡ್ ಕೋ ವೃತ್ತದಲ್ಲಿ ಹೊಟೇಲ್ ನಡೆಸುತ್ತಿರುವ ಮಹಂತೇಶ್.

ದಾವಣಗೆರೆ ಮಾರುಕಟ್ಟೆಯಲ್ಲಿ ಹಿಂದೆ ಪ್ರತಿ ಕ್ವಿಂಟಾಲ್‌ಗೆ 1500ರಿಂದ 2000 ರೂ. ಇತ್ತು. ಪ್ರಸ್ತುತ 2500ದಿಂದ 3500 ರೂ. ವರೆಗೆ ಬೆಲೆ ಏರಿಕೆಯಾಗಿದೆ. ಅದರಲ್ಲೂ, ಅತ್ಯುತ್ತಮ ಈರುಳ್ಳಿ ಕ್ವಿ. ಗೆ. 3 ಸಾವಿರದಿಂದ ಮೂರುವರೆ ಸಾವಿರ, ಮಧ್ಯಮ 2500ರಿಂದ 3 ಸಾವಿರ ರೂ., ಸಣ್ಣ ಈರುಳ್ಳಿ 2 ಸಾವಿರದಿಂದ 2500 ರೂ. ಇದೆ.

ಜಿಲ್ಲಾದ್ಯಂತ ದಿನವೊಂದಕ್ಕೆ 180ರಿಂದ 200 ಟನ್ ಈರುಳ್ಳಿ ವಹಿವಾಟು ನಡೆದು, ಸುಮಾರು 40ರಿಂದ 50 ಲಕ್ಷ ರೂ.ಗಳ ವ್ಯವಹಾರ ನಡೆಯುತ್ತದೆ ಎನ್ನುತ್ತಾರೆ ಈರುಳ್ಳಿ ಮಾರುಕಟ್ಟೆ ದಾವಣಗೆರೆ ಜಿಲ್ಲಾಧ್ಯಕ್ಷ ಎನ್.ಕೆ. ಬಸವಲಿಂಗಪ್ಪ.

ತರಕಾರಿ ದರ(ಕೆಜಿ)
ಈರುಳ್ಳಿ, 40ರಿಂದ 50 ರೂ.
ಆಲೂಗಡ್ಡೆ,30ರಿಂದ 40 ರೂ.
ಹೀರೆಕಾಯಿ, 30ರಿಂದ 35 ರೂ.
ಬಿಟ್‌ರೂಟ್,40ರಿಂದ 45 ರೂ.
ಬಿನ್ಸ್,40ರಿಂದ 50 ರೂ.
ಕ್ಯಾರೆಟ್,50ರಿಂದ 55 ರೂ.
ಸೌತೆಕಾಯಿ,30ರಿಂದ 40 ರೂ.

ಮಳೆಯಿಂದ ಹೊಸ ಈರುಳ್ಳಿ ಬರುವುದು ಕಡಿಮೆಯಾಗಿದೆ. ದೀಪಾವಳಿ ಬರುವವರೆಗೂ ಈರುಳ್ಳಿ ಬೆಲೆ ಕಡಿಮೆಯಾಗುವುದು ಅನುಮಾನ. ಸ್ಥಳೀಯ ಈರುಳ್ಳಿ ಬಂದ ಮೇಲೆ ದರ ಕಡಿಮೆಯಾಗಬಹುದು.
-ಎನ್.ಕೆ. ಬಸವಲಿಂಗಪ್ಪ, ದಾವಣಗೆರೆ ಈರುಳ್ಳಿ ಮಾರುಕಟ್ಟೆಯ ಜಿಲ್ಲಾಧ್ಯಕ್ಷ.


ಈರುಳ್ಳಿ ಬೆಲೆ ಏರಿಕೆಯಿಂದ ವ್ಯಾಪಾರ ಕಡಿಮೆಯಾಗಿದೆ. ಕೆಜಿ ಕೊಂಡ್ಯೊಯ್ಯುವವರು ಅರ್ಧ ಕೆಜಿ, ಕಾಲು ಕೆಜಿ ಖರೀದಿಸುತ್ತಿದ್ದಾರೆ. ಜತೆಗೆ ಇತರೆ ತರಕಾರಿಗಳ ಬೆಲೆ ಸಹ ಹೆಚ್ಚಾಗಿರುವುದರಿಂದ ಮಾರುಕಟ್ಟಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ.
-ಜಬಿವುಲ್ಲಾ, ಚಿಲ್ಲರೆ ವ್ಯಾಪಾರಿ ಕೆ.ಆರ್. ಮಾರುಕಟ್ಟೆ ದಾವಣಗೆರೆ.

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…