More

    ಬೆಲೆ ಏರಿಕೆ ಡಬಲ್ ಇಂಜಿನ್ ಸರ್ಕಾರದ ಶ್ರೇಯಸ್ಸು: ಬಸನಗೌಡ ತುರ್ವಿಹಾಳ

    ಮಸ್ಕಿ: ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದಿಂದ ಅಭಿವೃದ್ಧಿ ಎಂಬುದು ಗಗನ ಕುಸುಮವಾಗಿದೆ. ಹೆಸರಿಗಷ್ಟೇ ಡಬಲ್ ಇಂಜಿನ್ ಸರ್ಕಾರ ಆಗಿದ್ದು, ಇದರಿಂದ ಜನಸಾಮಾನ್ಯರಿಗೆ ಯಾವುದೇ ಉಪಯೋಗವಾಗಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

    ಮನೆ ಮನೆಗೆ ಭೇಟಿ ನೀಡಿ ಮತಯಾಚನೆ

    ಬಳಗಾನೂರಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಿ ಮಂಗಳವಾರ ಮಾತನಾಡಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಸಂಕಷ್ಟದಲ್ಲಿ ಇರುವಂತೆ ಮಾಡಿದ ಶ್ರೇಯಸ್ಸು ಡಬಲ್ ಇಂಜಿನ್ ಸರ್ಕಾರಕ್ಕೆ ಸಲ್ಲುತ್ತದೆ. ಇಂತಹ ಸರ್ಕಾರ ನಿಮಗೆ ಬೇಕಾ ಎಂದು ಮತದಾರರನ್ನು ಪ್ರಶ್ನಿಸಿದರು.

    ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಬಂದರೆ ಅಡಕೆಗು ಬೆಲೆ ಬರುತ್ತೆ ಎಂದ ಅಮಿತ್ ಷಾ

    ಬಿಜೆಪಿ ಸರ್ಕಾರ ಜನತೆಗೆ ತೀವ್ರ ತೊಂದರೆ ನೀಡಿದೆ

    ಬಿಜೆಪಿ ಸರ್ಕಾರ ಜನತೆಗೆ ತೀವ್ರ ತೊಂದರೆ ನೀಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳ ವೇತನ ಕಡಿತಗೊಳಿಸುವ ಮೂಲಕ ದೇಶದ ಭವಿಷ್ಯ ರೂಪಿಸುವಂತಹ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕಪಾಠ ಕಲಿಸಬೇಕು.

    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿಗೆ ತರಲಾಗುವುದು

    ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 2 ಸಾವಿರ ರೂ. ಪ್ರೋತ್ಸಾಹ ಧನ, ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಸೇರಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲಾಗುವುದು ಎಂದು ಬಸನಗೌಡ ತುರ್ವಿಹಾಳ ತಿಳಿಸಿದರು.

    ಬಸವೇಶ್ವರ ನಗರದಲ್ಲಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಬಸನಗೌಡ ತುರ್ವಿಹಾಳ ಪಾದಯಾತ್ರೆ ಆರಂಭಿಸಿದರು. ಮುಖಂಡರಾದ ಶಿವನಗೌಡ ಗೊರೇಬಾಳ, ಶೇಖರಗೌಡ ಮಾಲಿಪಾಟೀಲ್, ನಿರುಪಾದೆಪ್ಪ ವಕೀಲ ಮಾತನಾಡಿದರು.


    ವಿವಿಧ ವಾದ್ಯ ಮೇಳ, ಪಟಾಕಿ ಸಿಡಿಸಿ ಮೆರವಣಿಗೆಯೊಂದಿಗೆ ಆರ್.ಬಸನಗೌಡ ತುರ್ವಿಹಾಳ ಹಾಗೂ ಕಾಂಗ್ರೆಸ್ ಮುಖಂಡರನ್ನು ಕಾರ್ಯಕರ್ತರು ಸ್ವಾಗತಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಹನುಮಂತಪ್ಪ ಮುದ್ದಾಪುರ, ಪಂಪನಗೌಡ ಮಾಲಿಪಾಟೀಲ್, ಬಸನಗೌಡ ಮುದೇಗೌಡ್ರು, ಸಂಜಯಕುಮಾರ ಜೈನ, ಶಂಕ್ರಣ್ಣ ನಾಯ್ಕರ್, ರಿಯಾಜ್ ನಾಯ್ಕ, ಎಸ್.ಮೌನೇಶಗೌಡ ಗದ್ದಿಗೌಡ್ರು, ವೀರನಗೌಡ ಗದ್ದಿ, ಶಿರಡ್ಡೆಪ್ಪ ವಾಲೇಕಾರ, ಡಿಎಸ್‌ಎಸ್‌ಕೆ ಜಿಲ್ಲಾ ಉಪಾಧ್ಯಕ್ಷ ಬಿ.ಮೌನೇಶ, ಮರಿಯಪ್ಪ ಮೂಲಿಮನಿ, ಪಪಂ ಸದಸ್ಯರಾದ ಶಿವುನಾಯಕ್, ಹುಸೇನ್ ಬಾಷಾ, ಮಂಜುನಾಥಸ್ವಾಮಿ, ತಿರುಕನಗೌಡ ಗುತ್ತೇದಾರ ಇತರರಿದ್ದರು.


    ಗದ್ರಟಗಿ ಗ್ರಾಮದಲ್ಲಿ ಬಿಜೆಪಿ ಮುಖಂಡರು ಪಕ್ಷ ಸೇರ್ಪಡೆ

    ಗದ್ರಟಗಿ ಗ್ರಾಮದಲ್ಲಿ ಬಿಜೆಪಿ ಮುಖಂಡರಾದ ಯಂಕನಗೌಡ ಹೊಸಮನಿ, ವೀರಭದ್ರಗೌಡ ಮೂಲಿಮನಿ, ಬಸನಗೌಡ ಮಾಲಿಪಾಟೀಲ, ದೊಡ್ಡನಗೌಡ ಹೊಸಮನಿ, ದೇವೆಗೌಡ ಮೂಲಿಮನಿ, ಶರಣಪ್ಪ ಹಾಲುಮತ, ಬಸಣ್ಣ ಶಿರಗುಡ್ಡಿ ಕಾಂಗ್ರೆಸ್ ಸೇರ್ಪಡೆಯಾದರು. ಬಪ್ಪೂರು ಗ್ರಾಮದಲ್ಲಿ ಯುವ ಮುಖಂಡ ಬಸವರಾಜ ಮಳ್ಳಿ, ಜಡಿಯಪ್ಪ ಅಂಗಡಿ, ಮೌಲಸಾಬ್ ಬಾಂಬೆ, ಮೌಲಸಾಬ್ ಹನುಮನಾಳ, ಇಮಾಮ ಸಾಬ್ ಸಜ್ಜೆಹೊಲ, ದೇವರಡ್ಡಿ ಹಂಚಿನಾಳ, ಅಲ್ಲಾಸಾಬ್ ಮಕರ್ತನಾಳ ಮಲ್ಲಪ್ಪ ಗುಡಿಹಿಂದ, ಅಮರೇಗೌಡ ಬಾಗಲಾಪುರ ಕಾಂಗ್ರೆಸ್ ಸೇರ್ಪಡೆಯಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts