ಪೆಟ್ರೋಲ್​, ಡೀಸೆಲ್​ ಆಯ್ತು ಈಗ ಜನರಿಗೆ ಸಿಲಿಂಡರ್​ ಶಾಕ್​! ಸಿಲಿಂಡರ್​ ಬೆಲೆ 59 ರೂ. ಏರಿಕೆ…

ಬೆಂಗಳೂರು: ಇಂಧನ ಹಾಗೂ ಗ್ಯಾಸ್​ ಸಿಲಿಂಡರ್​ ಬಳಕೆದಾರರಿಗೆ ಮತ್ತೊಮ್ಮೆ ಬರೆ ಬಿದ್ದಿದೆ. ನಿನ್ನೆ ರಾತ್ರಿಯಿಂದ ಗ್ಯಾಸ್‌ ಸಿಲಿಂಡರ್‌ ಹಾಗೂ ಸಿಎನ್‌ಜಿ ಇಂಧನದ ಬೆಲೆ ಏರಿಕೆಯಾಗಿದೆ.

ಹೌದು, ಸಬ್ಸಿಡಿ ರಹಿತ ಗ್ಯಾಸ್‌ ಸಿಲಿಂಡರ್‌ ಬೆಲೆ 59 ರೂ. ಹಾಗೂ ಸಬ್ಸಿಡಿ ಸಹಿತ ಸಿಲಿಂಡರ್‌ ಬೆಲೆಯಲ್ಲಿ 2.89 ರೂ. ಹೆಚ್ಚಳವಾಗಿದೆ. ಇನ್ನು ಪ್ರತಿ ಕೆಜಿ ಸಿಎನ್‌ಜಿ ಇಂಧನದ ಬೆಲೆ 1 ರೂ. 70 ಪೈಸೆ ಏರಿಕೆಯಾಗಿದೆ. ಇನ್ನು ವಿದ್ಯುತ್​ ದರದಲ್ಲೂ ಏರಿಕೆಯಾಗಿದ್ದು ಪ್ರತಿ ಯೂನಿಟ್​​​ಗೆ 14 ಪೈಸೆ ಏರಿಕೆಯಾಗಿದೆ. ಪೆಟ್ರೋಲ್ ಡೀಸೆಲ್​​ ದರದಲ್ಲೂ ಸಹ ಏರಿಕೆಯಾಗಿದ್ದು, ಲೀಟರ್​ ಪೆಟ್ರೋಲ್​​ಗೆ 24 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್​ಗೆ 32 ಪೈಸೆ ಹೆಚ್ಚಳವಾಗಿದೆ.

ಮುಂಬೈನಲ್ಲಿ ಪೆಟ್ರೋಲ್​ ದರ 90 ರೂ ಗಡಿ ದಾಟಿದ್ದು, 91.08 ರೂ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 84.06 ಮತ್ತು ಡಿಸೇಲ್ ದರ 75.01 ರೂ. ಆಗಿದೆ. (ದಿಗ್ವಿಜಯ ನ್ಯೂಸ್​)