ಹಿರಿಯೂರು: ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜನತಾ ದರ್ಶನ ವೇದಿಕೆ ಕಾರ್ಯಕ್ರಮದಲ್ಲಿ ಆರಂಭದಲ್ಲಿಯೇ ಕಾಂಗ್ರೆಸ್ ಪಕ್ಷದ ಇಬ್ಬರು ಮುಖಂಡರು ಆಸಿನರಾಗಿದ್ದರು.
ನಾಡಗೀತೆ ಮುಗಿಯುತ್ತಿದ್ದಂತೆ ಸಚಿವರ ಪಕ್ಕದ ಕುರ್ಚಿಗೆ ಬಂದು ಕುಳಿತುಕೊಳ್ಳುವ ಪ್ರಯತ್ನ ನಡೆಸಿದರು. ತಕ್ಷಣ ಎಚ್ಚೇತ್ತ ಡಿ.ಸುಧಾಕರ್, ಇಬ್ಬರನ್ನು ವೇದಿಕೆಯಿಂದ ಕೆಳಗೆ ಹೋಗುವಂತೆ ಹೇಳಿ ಶಿಷ್ಟಾಚಾರ ಉಲ್ಲಂಘನೆಗೆ ಕಡಿವಾಣ ಹಾಕಿದರು.