ದಲಿತರು, ಮುಸ್ಲಿಮರ ಮೇಲಿನ ದೌರ್ಜನ್ಯ ತಡೆಯಿರಿ

ಚಾಮರಾಜನಗರ: ರಾಜ್ಯದ ಹಲವೆಡೆ ದಲಿತರು, ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಂತೆ ಒತ್ತಾಯಿಸಿ ಎಸ್‌ಡಿಪಿಐ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌ಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಅಧಿಕಾರಿಗಳನ್ನು ಭೇಟಿ ಮಾಡಿದ ಪದಾಧಿಕಾರಿಗಳು, ಗುಂಡ್ಲುಪೇಟೆ ತಾಲೂಕಿನಲ್ಲಿ ದಲಿತ ಸಮುದಾಯದ ಪ್ರತಾಪ್ ಎಂಬುವರ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ನಡೆಸಿರುವ ಪ್ರಕರಣ, ಸಂತೇಮರಹಳ್ಳಿಯಲ್ಲಿ ದಲಿತ ಕೂಲಿ ಕಾರ್ಮಿಕರ ಜೋಡಿ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ರಾಮನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ವಾಸಿ ಸೈಯ್ಯದ್‌ತೌಸೀಫ್ ಎಂಬ ಯುವಕನ ಮೇಲೆ ಪೊಲೀಸ್ ದೌರ್ಜನ್ಯ ನಡೆದಿತ್ತು. ಇಂದಿನವರೆಗೆ ಈ ಪ್ರಕರಣದ ಇಲಾಖೆಯ ತನಿಖಾ ವರದಿ ಬಂದಿಲ್ಲ, ತಪ್ಪಿತಸ್ಥರ ಅಮಾನತ್ತಾಗಿದ್ದು, ರಕ್ಷಿಸುವ ಕಾರ್ಯ ನಡೆದಿದೆ. ಇಂದಿನವರಗೂ ಸಂತ್ರಸ್ಥರಿಗೆ ನ್ಯಾಯ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಫೈರೋಜ್ ಎಂಬ ಯುವಕನ ಸಾವು ಸಂಭವಿಸಿದೆ. ಈ ಘಟನೆ ಮುಚ್ಚಿ ಹಾಕಲು ಇಲಾಖೆ ಯತ್ನ್ನಿಸಿದೆ. ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ ಬಳಿಕವಷ್ಟೆ ಎಫ್‌ಐಆರ್ ದಾಖಲಾಗಿದೆ. ಸರ್ಕಾರ ಕೂಡಲೇ ಮಧ್ಯಸ್ಥಿಕೆ ವಹಿಸಿ ಸಂತ್ರಸ್ತ ಕುಟುಂಬಕ್ಕೆ ಪರಿಹಾರ, ನ್ಯಾಯ ಒದಗಿಸಿಕೊಡುವಂತೆ ಕೋರಲಾಗಿದೆ.

ಇದೇ ವೇಳೆ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್‌ಅಹಮದ್, ನಗರಸಭಾ ಸದಸ್ಯ ಎಂ.ಮಹೇಶ್, ಮಾಜಿ ಸದಸ್ಯ ಸಿ.ಎಸ್.ಸೈಯದ್‌ಆರೀಫ್, ದಲಿತ ಮುಖಂಡರಾದ ಮಾವಳ್ಳಿಶಂಕರ್, ಮಂಡ್ಯನಾಗರಾಜ್, ಪ್ರಕಾಶ್‌ಹೊಲೆಯಾರ್ ಇತರರಿದ್ದರು.

Leave a Reply

Your email address will not be published. Required fields are marked *