ಪರಿಷತ್ ಪ್ರತಿಪಕ್ಷ ನಾಯಕರಿಗೆ ಸರ್ಕಾರಿ ಸವಲತ್ತು ಒದಗಿಸಲು ಒತ್ತಾಯ

blank

ಚಿಕ್ಕಮಗಳೂರು: ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ರಾಜ್ಯಸರ್ಕಾರ ಸರ್ಕಾರಿ ಸವಲತ್ತು ಒದಗಿಸದೆ ವಂಚಿಸಿದೆ ಎಂದು ಆರೋಪಿಸಿ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರು ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಅಹಿಂದಾ ಹೆಸರಿನಲ್ಲಿ ಅಧಿಕಾರ ಪಡೆದ ಕಾಂಗ್ರೆಸ್‌ನ ರಾಜ್ಯಸರ್ಕಾರ ದಲಿತರನ್ನು ಪ್ರತಿಹಂತದಲ್ಲೂ ಕಡೆಗಣಿಸುತ್ತಿದೆ. ಶೋಷಿತರ ರಕ್ತಹೀರುವ ಮೂಲಕ ತುಳಿತಕ್ಕೆ ಒಳಗಾಗಿಸಿ ಪರಿಶಿಷ್ಟರನ್ನು ಗೌರವಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಪರಿಶಿಷ್ಟರೆಂಬ ಕಾರಣಕ್ಕೆ ಅಧಿಕಾರ ಪಡೆದ ಕ್ಷಣದಿಂದ ಇಲ್ಲಿಯವರೆಗೂ ನಾರಾಯಣಸ್ವಾಮಿ ಅವರಿಗೆ ರಾಜ್ಯಸರ್ಕಾರದ ವಾಹನ ಸೇರಿದಂತೆ ಹುದ್ದೆಗೆ ಸಲ್ಲಬೇಕಾದ ಯಾವುದೇ ಸೌಕರ್ಯ ಒದಗಿಸಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಮೌನ ಪರಿಶಿಷ್ಟರಿಗೆ ಅವಮಾನಿಸುತ್ತಿದೆ ಎಂದು ತಿಳಿಸಿದರು.
ಸಂವಿಧಾನಿಕ ಹುದ್ದೆಗೆ ಸವಲತ್ತು ನೀಡದೇ ರಾಜ್ಯಸರ್ಕಾರ ಅಗೌರವ ತೋರಿದೆ. ಶೋಷಿತರು, ದೀನದಲಿತರ ಉದ್ದಾರ ಮಾಡುತ್ತೇವೆ ಎಂದು ಭಾಷಣ ಮಾಡುವ ಮುಖ್ಯಮಂತ್ರಿಗಳು ನೈಜವಾಗಿ ಪರಿಶಿಷ್ಟರಿಗೆ ಸ್ಪಂದಿಸುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ದಲಿತರಿಗೆ ಅನೇಕ ಅವಕಾಶ ಕಲ್ಪಿಸಿ ಬೆಳವಣಿಗೆಗೆ ಸಹಕರಿಸಿತ್ತು. ಆದರೆ ಕಾಂಗ್ರೆಸ್ ದಲಿತರನ್ನು ಕಡೆಗಣಿಸಿದೆ ಎಂದು ದೂರಿದರು.
ಪರಿಶಿಷ್ಟರ ಹಣವನ್ನು ಜನಾಂಗದ ಅಭಿವೃದ್ಧಿಗೆ ಬಳಸದೇ ಗ್ಯಾರಂಟಿಗೆ ಪೂರೈಸುತ್ತಿದೆ. ವಾಲ್ಮೀಕಿ ಹಗರಣದಲ್ಲಿ ನೂರಾರು ಕೋಟಿ ರೂ.ಗಳನ್ನು ನೆರೆರಾಜ್ಯದ ಚುನಾವಣೆಗೆ ಖರ್ಚಿಗೆ ವ್ಯಯಿಸಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ದೋಚುತ್ತಿದೆ. ಅಲ್ಲದೇ ಮೂಡಾ ಹಗರಣದಲ್ಲಿ ಖುದ್ದು ಮುಖ್ಯಮಂತ್ರಿಗಳೇ ಭ್ರಷ್ಟಚಾರವೆಸಗಿದ್ದರೂ ಅಧಿಕಾರಕೋಸ್ಕರ ಖುರ್ಚಿಗೆ ಅಂಟಿಕೊAಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಎಸ್ಸಿ ಮೋರ್ಚ ರಾಜ್ಯ ಕಾರ್ಯದರ್ಶಿ ಸೀತಾರಾಮಭರಣ್ಯ ಮಾತನಾಡಿ, ವಿರೋಧ ಪಕ್ಷದ ಸ್ಥಾನ ಅಲಂಕರಿಸಿ ಹಾಗೂ ಪತ್ರಿಕಾಗೋಷ್ಠಿ ಮುಖಾಂತರ ರಾಜ್ಯಸರ್ಕಾರಕ್ಕೆ ಸವಲತ್ತಿಗೆ ಒತ್ತಾಯಿಸಿದರೂ ಮುಖ್ಯಮಂತ್ರಿಗಳು ಚಕಾರವೆತ್ತದಿರುವುದು ಸರಿಯಲ್ಲ. ಈ ವಿಚಾರವಾಗಿ ಇಪ್ಪತ್ತಾಲ್ಕು ಗಂಟೆಯೊಳಗೆ ನಾರಾಯಣಸ್ವಾಮಿ ಅವರಿಗೆ ಸರ್ಕಾರಿ ಸೌಕರ್ಯ ಒದಗಿಸದಿದ್ದಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಶೋಷಿತ ದಲಿತರಿಗೆ ಅನ್ಯಾಯವೆಸಗಿ ಕೀಳಾಗಿ ಕಾಣುತ್ತಿದೆ. ಕೇವಲ ದಲಿತರನ್ನು ಚುನಾವಣಾ ಆಟಿಕೆಗಳಂತೆ ಬಳಸಿಕೊಂಡಿರುವ ಕಾಂಗ್ರೆಸ್ ಸೂಕ್ತ ಸ್ಥಾನ ಒದಗಿಸದೇ ಇರುವುದಕ್ಕೆ ಉತ್ತಮ ಉದಾಹರಣೆ ಪ್ರತಿಪಕ್ಷ ನಾಯಕ ನಾರಾಯಣಸ್ವಾಮಿ ಅವರಿಗೆ ಸರ್ಕಾರಿ ಸವಲತ್ತು ನೀಡದೇ ಇರುವುದೇ ಆಗಿದೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ಗ್ರಾಮಾಂತರ ಸಹ ವಕ್ತಾರ ಹಂಪಯ್ಯ, ಜಿಪಂ ಮಾಜಿ ಸದಸ್ಯ ಜೆ.ಡಿ.ಲೋಕೇಶ್, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುಜಿತ್‌ಕುಮಾರ್, ಉಪಾಧ್ಯಕ್ಷ ವೈ.ಜಿ.ಸುರೇಶ್, ನಗರ ಮಂಡಲ ಉಪಾಧ್ಯಕ್ಷ ರೇವನಾಥ್, ನಗರಸಭೆ ಸದಸ್ಯ ಮಣಿಕಂಠ, ಮುಖಂಡರಾದ ಕೊಲ್ಲಾಬೋವಿ, ಬೀರಪ್ಪ, ಕೃಷ್ಣಮೂರ್ತಿ, ಸಂತೋಷ್ ಕೋಟ್ಯಾನ್, ರಾಜಕುಮಾರ್ ಮತ್ತಿತರರಿದ್ದರು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…