ಜನಾಂಗದ ಹಿತದೃಷ್ಟಿಯಿಂದ ಸೋಮವಾರ ಮಡಿಕೇರಿಯಲ್ಲಿ ಪ್ರತಿಭಟನೆ

blank

ಕುಶಾಲನಗರ:

ಅರೆಭಾಷಿಕ ಗೌಡ ಜನಾಂಗವನ್ನು ನಿಂದಿಸುವವರಿಗೆ ಕಠಿಣ ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ಎಂಬ ಉದ್ದೇಶ ಇಟ್ಟುಕೊಂಡು ಜನಾಂಗದ ಹಿತದೃಷ್ಟಿಯಿಂದ ಸೋಮವಾರ (ಜ.20) ಮಡಿಕೇರಿಯಲ್ಲಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಕುಶಾಲನಗರ ಗೌಡ ಯುವ ವೇದಿಕೆ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.

ಅಂದು ಬೆಳಗ್ಗೆ 10.30 ಮಡಿಕೇರಿಯ ಸುಬೇದಾರ್ ಗುಡ್ಡೆ ಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿ ಸೇರುವ ಪ್ರತಿಭಟನಾಕಾರರು ಮೌನ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಜನಾಂಗದವರು ಅನೇಕ ವರ್ಷಗಳಿಂದ ಒಗ್ಗಟ್ಟಿನ ಜೀವನ ನಡೆಸುತ್ತಾ ಬಂದಿದ್ದಾರೆ. ಗೌಡ ಹಾಗೂ ಕೊಡವ ಜನಾಂಗಗಳ ನಡುವೆ ವಾಣಿಜ್ಯ ವ್ಯವಹಾರ, ರಾಜಕೀಯ, ಸಾಮಾಜಿಕ, ಧಾರ್ಮಿಕ, ಕೌಟುಂಬಿಕ ನೆಲೆಯಲ್ಲಿ ಉತ್ತಮ ಸಂಬAಧಗಳನ್ನು ಹೊಂದಿದ್ದಾರೆ. ಆದರೆ, ಇತ್ತೀಚೆಗೆ ಸಂಘಟನೆಯೊAದರ ಮುಖಂಡ ಈ ಎರಡು ಜನಾಂಗಗಳ ಮಧ್ಯೆ ದ್ವೇಷಪೂರಿತ ವಾತಾವರಣಕ್ಕೆ ಕಾರಣರಾಗಿದ್ದಾರೆ.

ಶಾಂತ ವಾತಾವರಣದಲ್ಲಿದ್ದ ಎರಡು ಜನಾಂಗಗಳನ್ನು ದ್ವೇಷಪೂರಿತ ಉದ್ದೇಶ ಹೊಂದಿ, ಶ್ರೀ ಕ್ಷೇತ್ರ ಕಟ್ಟೆಮಾಡು ಮಹಾ ಮೃತ್ಯುಂಜಯ ದೇವಾಲಯದ ವಿಚಾರಗಳನ್ನು ವಕ್ರೀಕರಿಸಿ ಪರಸ್ಪರ ಕ್ಷುಲ್ಲಕ ನಿಂದನೆಗಳಲ್ಲಿ ತೊಡಗಿರುವುದು ವಿಷಾದಕರ ವಿಚಾರ. ಆ ಊರಿನ ಜನಾಂಗದವರು ಒಂದೆಡೆ ಸೇರಿ ಮಾತುಕತೆಗಳ ಮೂಲಕ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಳ್ಳುವ ಅವಕಾಶಗಳಿತ್ತು. ವಿನಾಕಾರಣ ಗೌಡ ಜನಾಂಗದವರನ್ನು ಇದರಲ್ಲಿ ಬಲಿಪಶು ಮಾಡಲೆಂದೇ ಕೊಡಗು ಮತ್ತು ಕೊಡಗಿನ ಹೊರಗೆ ಜನಾಂಗದ ವಿರುದ್ಧ ನಕಾರಾತ್ಮಕ ಭಾವನೆ ಬರುವಂಥ ಪರಿಸ್ಥಿತಿಯನ್ನು ಸೃಷ್ಟಿ ಮಾಡಲು ಪ್ರಯತ್ನಿಸಿದ್ದಾರೆ. ಒಕ್ಕಲಿಗ ಜನಾಂಗಕ್ಕೂ ಅರೆಭಾಷಿಕ ಗೌಡರಿಗೂ ಮಧ್ಯೆ ವೈರುಧ್ಯಗಳನ್ನು ಸೃಷ್ಟಿಸುವ ಕಟ್ಟುಕಥೆಗಳನ್ನು ನಿರ್ಮಿಸುತ್ತಿದ್ದಾರೆ.

ಐತಿಹಾಸಿಕ ದಾಖಲೆಗಳಲ್ಲಿ ಇರುವ ಗಂಗರಸರಿAದ ಹಿಡಿದು ಅಮರ ಸುಳ್ಯದ ವೀರರು, ನಂತರ ಹಿರಿಯ ನೇತಾರರನ್ನು ಹೊಂದಿದ, ರಾಜ ಪರಂಪರೆಯ ನಮ್ಮ ಜನಾಂಗವನ್ನು ವಲಸಿಗರೆಂದು, ಸಂಸ್ಕೃತಿಯನ್ನು ಕದ್ದವರೆಂದು, ವಿಕೃತ ಶಬ್ದಗಳಲ್ಲಿ ಅಸಂಸ್ಕೃತ ವ್ಯಕ್ತಿತ್ವದ ಮೂಲಕ ತೇಜೋವಧೆ ಮಾಡಲಾಗುತ್ತಿದೆ. ಸಹನೆಯನ್ನು ಪರೀಕ್ಷೆ ಮಾಡಲಾಗುತ್ತಿದೆ. ನಮ್ಮ ಅಸ್ಮಿತೆಗೆ ಧಕ್ಕೆ ಬರುತ್ತಿರುವ ಈ ಸಮಯದಲ್ಲಿ ಗೌಡ ಜನಾಂಗದವರೆಲ್ಲರೂ ಒಟ್ಟಾಗಿ ದನಿ ಎತ್ತದೆ ಇದ್ದರೆ ಮುಂದಿನ ಪೀಳಿಗೆ ಕ್ಷಮಿಸುವುದಿಲ್ಲ. ನಮ್ಮಲ್ಲಿರುವ ಗತ್ತು, ಉಡುಪಿನಿಂದ ಬಂದಿದ್ದಲ್ಲ. ಅದು ನಮ್ಮ ಅನುವಂಶಿಯತೆ ಮತ್ತು ಸುಸಂಸ್ಕೃತಿ ಯಿಂದ ಬಂದದ್ದು. ಆ ಹಿನ್ನೆಲೆಯಲ್ಲಿ, ನಮ್ಮ ಜನಾಂಗದವರು ಯಾವುದೇ ಸಮುದಾಯದ ವಿರುದ್ಧ ಇಲ್ಲ. ಕೇವಲ ನಮ್ಮ ಅರೆಭಾಷಿಕ ಗೌಡ ಜನಾಂಗವನ್ನು ನಿಂದಿಸುವವರಿಗೆ ಕಠಿಣ ಶಿಕ್ಷೆ ಆಗುವವರೆಗೆ ನಮ್ಮ ಹೋರಾಟ ಎಂಬ ಉದ್ದೇಶ ಮಾತ್ರ ಇಟ್ಟುಕೊಂಡು ಸೋಮವಾರದ ಹೋರಾಟ ಸಂಘಟಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಮುಖರದ ಕರಂದ್ಲಾಜೆ ಆನಂದ್, ದೇವರಗೊಂಡ ಡಾ. ಪ್ರವೀಣ್, ಕೋಡಿ ರೋಹಿತ್ ಹಾಗೂ ಪಳಂಗೋಟು ವಿನಯ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…